ಭಾರತ ವಿರೋಧಿ ಶಕ್ತಿಗಳ ಬಗ್ಗೆ ಆರೆಸ್ಸೆಸ್ ಎಚ್ಚರಿಕೆ

dattatreaya hosabale
Published on

ನವದೆಹಲಿ: ಕರೊನಾ ಸಾಂಕ್ರಾಮಿಕತೆಯ 2ನೇ ಅಲೆಯ ವೇಳೆ ‘ವಿನಾಶಕಾರಿ ಹಾಗೂ ಭಾರತವಿರೋಧಿ ಶಕ್ತಿ’ಗಳ ಬಗ್ಗೆ ಎಚ್ಚರದಿಂದಿರುವಂತೆ ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್​ಎಸ್​ಎಸ್) ಶನಿವಾರ ಕರೆ ನೀಡಿದೆ.

ಕರೊನಾದಿಂದ ಉಂಟಾಗಿರುವ ಪರಿಸ್ಥಿತಿಯನ್ನು ಋಣಾತ್ಮಕತೆ ಹಾಗೂ ಅವಿಶ್ವಾಸ ಹುಟ್ಟಿಸಲು ಈ ಶಕ್ತಿಗಳು ಪಿತೂರಿ ನಡೆಸಬಹುದು ಎಂದು ಆರ್​ಎಸ್​ಎಸ್ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಹೇಳಿದ್ದಾರೆ.

ಪ್ರಸ್ತುತ ಸವಾಲುಗಳನ್ನು ಪರಿಹರಿಸಲು ಮುಂದೆ ಬರುವಂತೆ ಸಂಘಟನೆಯ ಕಾರ್ಯಕರ್ತರು, ಸಾಮಾಜಿಕ ಮತ್ತು ಧಾರ್ವಿುಕ ಸಂಸ್ಥೆಗಳಿಗೆ ಕರೆ ನೀಡಿದ್ದಾರೆ. ಸಮಾಜದಲ್ಲಿ ಧನಾತ್ಮಕತೆ, ಆಶಾವಾದ ಮತ್ತು ವಿಶ್ವಾಸ ಉಳಿಸಿಕೊಳ್ಳಲು ಮಾಧ್ಯಮ ಸಹಿತ ಎಲ್ಲ ವರ್ಗಗಳು ಸಹಕರಿಸಬೇಕೆಂದು ಮನವಿ ಮಾಡಿದ್ದಾರೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net