

ನುಗ್ಗೇಹಳ್ಳಿ: ಹೋಬಳಿಯ ಅಗ್ರಹಾರ ಬೆಳಗುಲಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾಗಿ ಬಿ.ಡಿ.ಸುರೇಶ್ ಶನಿವಾರ ಅವಿರೋಧವಾಗಿ ಆಯ್ಕೆಯಾದರು.
ಬಿ.ಡಿ.ಸುರೇಶ್ ಒಬ್ಬರೇ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದರಿಂದ ಚುನಾವಣಾ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ ಸಹಕಾರ ಅಭಿವೃದ್ಧಿ ಅಧಿಕಾರಿ ವಿ.ಸುನಿಲ್ ಅವಿರೋಧ ಆಯ್ಕೆ ಘೋಷಿಸಿದರು.
ಗ್ರಾಮ ಪಂಚಾಯಿತಿ ಸದಸ್ಯ ಲೋಕೇಶ್, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮಾಜಿ ಅಧ್ಯಕ್ಷರಾದ ಜೈಲಿಂಗೇಗೌಡ, ಚಂದ್ರೇಗೌಡ, ದೇವರಾಜೇಗೌಡ, ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷ ರಾಜಶೇಖರ್, ಜಗದೀಶ್, ಆಟೋ ಬೋರೇಗೌಡ, ಸಂಘದ ಸದಸ್ಯರಾದ ಲಕ್ಷ್ಮಣ್‌ಗೌಡ, ಬಿ.ಎಸ್.ವಿನಯ್, ಬಿ.ಟಿ.ಮಂಜೇಗೌಡ, ಬಿ.ಜಿ.ಮಂಜೇಗೌಡ, ಸಿದ್ದಲಿಂಗೇಗೌಡ, ರಾಧಾ ರಂಗಸ್ವಾಮಿ, ರೇಣುಕಾ, ವಿನಾಯಕ್, ಶ್ರೀನಿವಾಸ್, ಕಾರ್ಯದರ್ಶಿ ಯೋಗೇಶ್, ಸಹಾಯಕ ಹರೀಶ್ ಇತರರು ಹಾಜರಿದ್ದು, ನೂತನ ಅಧ್ಯಕ್ಷರನ್ನು ಅಭಿನಂದಿಸಿದರು.