ಗುತ್ತಿಗೆದಾರರಿಗೆ ಸಿಹಿ ಸುದ್ದಿ ನೀಡಿದ ಬಿಬಿಎಂಪಿ!

Untitled design - 2023-09-08T120503.521
Published on

ಬೆಂಗಳೂರು: ಕಡೆಗೂ ಗುತ್ತಿಗೆದಾರರಿಗೆ ಸಿಹಿ ಸುದ್ದಿ ನೀಡಿದ ಬೃಹತ್​ ಬೆಂಗಳೂರು ಮಹಾನಗರ ಪಾಲಿಕೆ, ಈ ಹಿಂದೆ ಬಾಕಿಯಿದ್ದ 2,600 ಕೋಟಿ ರೂ. ಕಾಮಗಾರಿ ಬಿಲ್​ನಲ್ಲಿ ಅರ್ಧದಷ್ಟು ಬಿಲ್​ ಅನ್ನು ಇದೀಗ ಕ್ಲಿಯರ್​ ಮಾಡಲು ಮುಂದಾಗಿದೆ.

ಸೆಪ್ಟೆಂಬರ್ ಒಳಗಾಗಿ 1,300 ಕೋಟಿ ರೂ. ಬಿಡುಗಡೆಗೆ ಬಿಬಿಎಂಪಿ ಅಸ್ತು ಎಂದಿದ್ದು, ಸರ್ಕಾರದಿಂದ ಆದೇಶ ಬಂದ ಬೆನ್ನಲ್ಲೇ ಗುತ್ತಿಗೆದಾರರ ಮೊದಲ ಹಂತದ ಬಿಲ್ ಕ್ಲಿಯರ್ ಮಾಡಲು ಇಲಾಖೆ ಮುಂದಾಗಿದೆ. ಈ ಹಿಂದೆ ಗುತ್ತಿಗೆದಾರರ 2,600 ಕೋಟಿ ರೂ. ಕಾಮಗಾರಿ ಬಿಲ್ ಬಾಕಿ ಇತ್ತು. ಪೂರ್ಣ ಬಿಲ್​ನ ಪೈಕಿ ಅರ್ಧದಷ್ಟು ಬಿಲ್ ಅನ್ನು ಬಿಬಿಎಂಪಿ​ ಕ್ಲಿಯರ್​ ಮಾಡಲಿದೆ.

ಈ ಬಗ್ಗೆ ಬಿಬಿಎಂಪಿ ಗುತ್ತಿಗೆದಾರರ ಸಭೆ ಕರೆದು ನಿರ್ಧಾರ ಮಾಡಿರುವ ಪಾಲಿಕೆ, 1,300 ಕೋಟಿ ರೂ. ಬಿಡುಗಡೆಗೊಳಿಸಲು ಒಪ್ಪಿಕೊಂಡಿದೆ. ಮಾರ್ಚ್ 2022ರ ವರೆಗಿನ ಎಲ್ಲಾ ಬಿಲ್ ಕ್ಲಿಯರ್ ಮಾಡಲು ಸಿದ್ಧವಾಗಿರುವ ಬಿಬಿಎಂಪಿ, ಎಲ್ಲಾ ರೀತಿಯ ಕಾಮಗಾರಿಗಳ ಬಿಲ್​ಗಳನ್ನು ಸೆಪ್ಟೆಂಬರ್ ಒಳಗಾಗಿ ಬಿಡುಗಡೆ ಮಾಡಲಿದ್ದೇವೆ ಎಂದು ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net