BBKS11: ಒಬ್ವ ಮನುಷ್ಯನ ಬಾಯಿಂದ ಬರುವ ಪದ ಬರೀ ಮಾತಲ್ಲ... ಕಿಚ್ಚನ ಕ್ಲಾಸ್​ಗೆ ಮನೆ ಮಂದಿ ಗಪ್​ಚುಪ್​

ವಿಜಯವಾಣಿ - 2024-11-23T134838.512
Published on

ಬೆಂಗಳೂರು: 50ನೇ ದಿನಕ್ಕೆ ಬಿಗ್ ಬಾಸ್​ ಸೀಸನ್​ 11ರ (BBKS11) ಕಾರ್ಯಕ್ರಮಕ್ಕೆ ವೈಲ್ಡ್​ ಕಾರ್ಡ್​ ಸ್ಪರ್ಧಿಯಾಗಿ ಮನೆಯೊಳಗೆ ಎಂಟ್ರಿಕೊಟ್ಟ ರಜತ್ ಕಿಶನ್​, ತಮ್ಮ ರಗಡ್ ಆಟದಿಂದ ಮನೆ ಮಂದಿ ನೋಟ ಗೆದ್ದರೆ, ಆಡಿದ ಕೆಲವು ಅವಾಚ್ಯ ಪದಗಳಿಂದ ಹೃದಯದಿಂದ ದೂರ ಉಳಿದಿದ್ದಾರೆ. ಈ ವಾರದಲ್ಲಿ ಕೊಟ್ಟ ಟಾಸ್ಕ್​ ಮಧ್ಯೆ ಗೋಲ್ಡ್​ ಸುರೇಶ್​ ಅವರೊಂದಿಗೆ ಮಾತಿನ ಜಟಾಪಟಿಗೆ ಇಳಿದ ರಜತ್​, ಕಿತ್ತಾಟದ ಭರದಲ್ಲಿ ಕೆಲವು ಕೆಟ್ಟ ಪದಗಳನ್ನು ಬಳಸಿದರು. ಇದು ಸದ್ಯ ಬಿಗ್ ಮಂದಿಯ ಅಸಮಾಧಾನಕ್ಕೆ ಕಾರಣವಾಗಿದೆ.

ಒಂದೆಡೆ ಮನೆಯ ಸದಸ್ಯರೆಲ್ಲರೂ ರಜತ್ ಆಟದ ವೈಖರಿಯನ್ನು ಮೆಚ್ಚಿಕೊಂಡರೆ, ಆಡಿದ ಪದಗಳನ್ನು ಒಪ್ಪದೆ, ಕಳಪೆ ಪಟ್ಟವನ್ನು ಕೊಟ್ಟು ಜೈಲಿಗೆ ಕಳಿಸಿದ್ದಾರೆ. ಇದರಿಂದ ಸಿಡಿಮಿಡಿಗೊಂಡ ರಜತ್​, ಮತ್ತಷ್ಟು ಅಸಮಾಧಾನದ ಮಾತುಗಳನ್ನು ಆಡುವ ಮೂಲಕ ಕೆಲವರಿಗೆ ಪರೋಕ್ಷವಾಗಿ ತಿರುಗೇಟು ನೀಡಿದ್ದಾರೆ. ಸದ್ಯ ಈ ವಿಷಯವನ್ನು ಇಂದಿನ 'ವಾರದ ಕಥೆ ಕಿಚ್ಚನ ಜತೆ' ಸಂಚಿಕೆಯಲ್ಲಿ ಮುನ್ನೆಲೆಗೆ ತಂದಿರುವ ಕಿಚ್ಚ ಸುದೀಪ್, ಎಂದಿನಂತೆ ತಮ್ಮ ಖಡಕ್ ಶೈಲಿಯಲ್ಲೇ ಕ್ಲಾಸ್​ ತೆಗೆದುಕೊಂಡಿದ್ದಾರೆ.

"ಒಬ್ಬ ಮನುಷ್ಯನ ಬಾಯಿಂದ ಹೊರಬರುವ ಮಾತು, ಕೇವಲ ಮಾತಲ್ಲ. ಅದು ವ್ಯಕ್ತಿತ್ವದ ವರ್ಚಸ್ಸು. ಒಂದು ಮಾತು ಗೆಲುವಿನ ಪಟ್ಟಕ್ಕೂ ಏರಿಸುತ್ತೆ, ಸೋಲಿನ ದಾರಿನ ಹಿಡಿಸುತ್ತೆ" ಎಂದು ಸುದೀಪ್ ಇಂದಿನ ಶನಿವಾರದ ಸಂಚಿಕೆಯ ಪ್ರಾರಂಭದಲ್ಲಿಯೇ ಹೇಳಿದ್ದಾರೆ. ಈ ಕುರಿತು ಒಂದು ಸಣ್ಣ ಪ್ರೋಮೋ ಹೊರಬಿದ್ದಿದ್ದು, ವೀಕ್ಷಕರ ಕುತೂಹಲವನ್ನು ದುಪ್ಪಟ್ಟು ಮಾಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net