

ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್ 10 ಈಗ 12ನೇ ವಾರದ ಅಂತ್ಯಕ್ಕೆ ಬಂದು ನಿಂತಿದ್ದು, ಕಳೆದ ವಾರ ಇಲ್ಲದ ಕಿಚ್ಚನ ಪಂಚಾಯತಿ ಈ ವಾರ ಇರಲಿದೆ. ಸುದೀಪ್ ಉಪಸ್ಥಿತಿ ಇಲ್ಲದೆ ನಡೆದ ಪಂಚಾಯತಿಯಲ್ಲಿ ಅವಿನಾಶ್ ಶೆಟ್ಟಿ ಮನೆಯಿಂದ ಹೊರಹೋದರು. ಇನ್ನು ಈ ವಾರ ತಮ್ಮ ಮನೆಯವರ ಆಗಮನದಿಂದ ಮತ್ತಷ್ಟು ಉತ್ಸಾಹ ಹೆಚ್ಚಿಸಿಕೊಂಡಿರುವ ಸ್ಪರ್ಧಿಗಳಿಗೆ ಇದೀಗ ಎಲಿಮಿನೇಷನ್ ಭಯ ತೀವ್ರವಾಗಿ ಕಾಡ ತೊಡಗಿದೆ.
ಈ ವಾರ ಪೂರ್ತಿ ಟಾಸ್ಕ್ನಿಂದ ದೂರ ಉಳಿದಿದ್ದ ಸ್ಪರ್ಧಿಗಳಿಗೆ ಬಿಗ್ ಬಾಸ್ ಕೊಟ್ಟಿದ್ದು ಮಾತ್ರ ಕುಟುಂಬದವರ ಮಾತು, ವಿಶೇಷ ಅಪ್ಪುಗೆ. ಪ್ರತಿಯೊಬ್ಬ ಸದಸ್ಯರ ಕುಟುಂಬದವರನ್ನು ಮನೆಯೊಳಗೆ ಕಳುಹಿಸಿದ ಬಿಗ್ ಬಾಸ್, ತಮ್ಮ ಪ್ರೀತಿ ಪಾತ್ರರನ್ನು ನೋಡುವ ಸೌಭಾಗ್ಯವನ್ನು ಕಲ್ಪಿಸಿಕೊಟ್ಟರು. ಬಹಳ ಆನಂದದಿಂದ, ಉತ್ಸಾಹಭರಿತವಾಗಿ ಎಲ್ಲರೊಡನೆ ಖುಷಿಯಿಂದ ಇದ್ದ ಮನೆಮಂದಿ, ಇದೀಗ ಮತ್ತೆ ತಮ್ಮ ಮನೆಯವರನ್ನು ಸೇರುವ ಪರಿಸ್ಥಿತಿ ಎದುರಾಗಿದೆ. ಅದು ಇಂದು ನಡೆಯುವ ಎಲಿಮಿನೇಷನ್ ಪ್ರಕ್ರಿಯೆಯಿಂದ ತಿಳಿಯಲಿದೆ.
ಈ ವಾರ ಮನೆಯಿಂದ ಹೊರ ಹೋಗಲು ವಿನಯ್, ತನಿಷಾ, ಸಂಗೀತಾ, ಸಿರಿ, ಮೈಕಲ್, ತುಕಾಲಿ ಸಂತೋಷ್, ವರ್ತೂರು ಸಂತೋಷ್, ಕಾರ್ತಿಕ್ ನಾಮಿನೇಟ್ ಆಗಿರುವ ಸ್ಪರ್ಧಿಗಳು. ಈ ಎಂಟು ಸದಸ್ಯರ ಪೈಕಿ ಯಾರು ಮನೆಯಿಂದ ಔಟ್ ಆಗಿ ಹೊರ ಹೋಗಲಿದ್ದಾರೆ ಎಂಬುದನ್ನು ಇಂದು ಮತ್ತು ನಾಳಿನ ಸಂಚಿಕೆಯಲ್ಲಿ ಕಾದು ನೋಡಬೇಕಿದೆ,(ಏಜೆನ್ಸೀಸ್).