BBKS10: ವಾರ 'ಆರು', ಮನೆಯಿಂದ ಹೊರಹೋಗುವವರು 'ಯಾರು'?

Untitled design (82)
Published on

ಬೆಂಗಳೂರು: ಬಿಗ್ ಬಾಸ್​ ಮನೆಯಿಂದ ಸ್ಪರ್ಧಿಗಳು ಇದೀಗ ಆರನೇ ವಾರದ ವಾರಾಂತ್ಯಕ್ಕೆ ಲಗ್ಗೆಯಿಟ್ಟಿದ್ದು, ವೀಕೆಂಡ್​ನ ಪಂಚಾಯಿತಿ ಕಟ್ಟೆ ನಡೆಸಿಕೊಡಲಿರುವ ನಟ ಸುದೀಪ್​ ಅವರ ಆಗಮನಕ್ಕಾಗಿ ವೀಕ್ಷಕರು ಕಾತರದಿಂದ ಕಾಯುತ್ತಿದ್ದಾರೆ.

ಈ ವಾರ ಬಿಗ್​ಬಾಸ್​ ಕೊಟ್ಟ ಅಷ್ಟು ಟಾಸ್ಕ್​ಗಳನ್ನೂ ಉತ್ತಮವಾಗಿ ಮಾಡಿ ಮುಗಿಸಿದ ಸದಸ್ಯರು, ಕೆಲವೆಡೆ ಭಾವುಕರಾಗಿ ಮೌನಕ್ಕೆ ಶರಣಾಗಿದ್ದಾರೆ. ಇನ್ನು ಕೆಲವರ ಮಧ್ಯೆ ಪದ ಬಳಕೆಯಿಂದ ಆದ ನೋವು ಕಣ್ಣೀರಲ್ಲಿ ಮುಳುಗುವಂತೆ ಮಾಡಿದೆ. ಅರ್ಥವಾಗದ, ಅರ್ಥೈಸಲಾಗದ ಒಂದಷ್ಟು ವಿಚಾರಗಳನ್ನು ಸುದೀಪ್​ ಹೇಗೆ ಆಯಾ ಸ್ಪರ್ಧಿಗಳಿಗೆ ತಲುಪಿಸುವುದರ ಜತೆಗೆ ಮನೆಯಿಂದ ಹೊರಹೋಗುವವರ ಹೆಸರನ್ನು ತೆಗೆದುಕೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

ಈ ವಾರ ದೀಪಾವಳಿ ಹಬ್ಬವಾದ ಹಿನ್ನಲೆ ಟಾಸ್ಕ್​ಗಳು ಅಷ್ಟು ಕಠಿಣವಾಗಿರಲಿಲ್ಲ ಹಾಗೂ ಮನೆಯವರಿಂದ ಬಂದ ವಿಶೇಷ ಪತ್ರಗಳನ್ನು ಪಡೆಯುವಲ್ಲಿ ಸ್ಪರ್ಧಿಗಳು ಹೆಚ್ಚು ಸಕ್ರಿಯರಾಗಿ ಪಾಲ್ಗೊಂಡರು. ಕೆಲವರಿಗೆ ತಮ್ಮ ಪ್ರೀತಿ ಪಾತ್ರರಿಂದ ಪತ್ರ ದೊರಕಿತು. ಆದ್ರೆ, ಇನ್ನೂ ಕೆಲವರಿಗೆ ಪತ್ರ ಸಿಗದೆ ಬೇಸರದಿಂದಲೇ ದಿನ ಕಳೆಯುವಂತಾಯಿತು.

ಇದರೊಟ್ಟಿಗೆ ವಾರದ ಕ್ಯಾಪ್ಟನ್​ ಆಗಿ ಕಾರ್ತಿಕ್​ ಆಯ್ಕೆಯಾದರೆ, ಉತ್ತಮ ಪಟ್ಟವನ್ನು ತುಕಾಲಿ ಸಂತೋಷ್​ ಪಡೆದುಕೊಂಡರು. ಕಳಪೆ ಪಟ್ಟವನ್ನು ತನಿಷಾ ತೆಗೆದುಕೊಂಡರು. ಮನೆಯವರೆಲ್ಲಾ ತನಗೆ ಕಳಪೆ ಕೊಟ್ಟು ಜೈಲಿಗೆ ಕಳುಹಿಸಿದ ಹಿನ್ನಲೆ ತನಿಷಾ ಕೆಲ ಸಮಯ ಕಣ್ಣೀರಾಕಿದರು.

ಆರನೇ ವಾರಂತ್ಯಕ್ಕೆ ಬಂದಿರುವ ಸ್ಪರ್ಧಿಗಳ ಪೈಕಿ ವಿನಯ್​, ತನಿಷಾ, ಕಾರ್ತಿಕ್​, ಭಾಗ್ಯಶ್ರೀ, ಇಶಾನಿ, ತುಕಾಲಿ ಸಂತೋಷ್​, ನೀತು, ನಮ್ರತಾ ನಾಮಿನೇಟ್​ ಆಗಿ ಮನೆಯಿಂದ ಹೊರಹೋಗಲು ಹಾಟ್​ಸೀಟ್​ನಲ್ಲಿ ಕುಳಿತ್ತಿದ್ದಾರೆ. ಇದೀಗ ವೀಕ್ಷಕರಲ್ಲಿ ಆರನೇ ವಾರದಲ್ಲಿ ಮನೆಯಿಂದ ಹೊರ ಉಳಿಯುವ ಆರನೇ ಸ್ಪರ್ಧಿ ಯಾರು ಎಂಬ ಕುತೂಹಲ ತೀವ್ರವಾಗಿ ಕಾಡುತ್ತಿದೆ. ಸದ್ಯ ಈ ಎಲ್ಲಾ ಪ್ರಶ್ನೆಗಳಿಗೆ ಇಂದಿನ ವಾರದ ಕಥೆ ಕಿಚ್ಚನ ಕಥೆ ಸಂಚಿಕೆಯಲ್ಲಿ ಉತ್ತರ ಸಿಗಲಿದೆ.

ದಿನದ 24 ಗಂಟೆಗಳ ಲೈವ್​ ಸ್ಟ್ರೀಮಿಂಗ್​ ಜಿಯೋ ಸಿನಿಮಾದಲ್ಲಿ ಪ್ರಸಾರವಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net