

ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್ 10 ಇದೀಗ 15ನೇ ವಾರದ ಅಂತ್ಯಕ್ಕೆ ತಲುಪಿದ್ದು, ಈ ಮಧ್ಯೆ ಮನೆಯೊಳಗೆ ಎಲಿಮಿನೇಟ್ ಆಗಿ ಹೋದ ಎಲ್ಲಾ ಸ್ಪರ್ಧಿಗಳು ಮರಳಿ ಬಂದಿದ್ದಾರೆ. ಈ ಮೂಲಕ ಫೈನಲ್ ಹಂತವನ್ನು ತಲುಪಿರುವ ಸದಸ್ಯರಿಗೆ ಪ್ರೋತ್ಸಾಹ ವ್ಯಕ್ತಪಡಿಸಿದ್ದಾರೆ. ಇದರ ಬೆನ್ನಲ್ಲೇ ಬಿಗ್ ಬಾಸ್ ವಿಜೇತರಿಗೆ ಸಿಗಬೇಕಾದ 50 ಲಕ್ಷ ರೂ. ಹಣವನ್ನು ಪೂರ್ಣಗೊಳಿಸಲು ಒಂದೊಂದೇ ಕ್ಯಾಪ್ಟನ್ ಟಾಸ್ಕ್ಗಳನ್ನು ಕೊಟ್ಟಿದ್ದಾರೆ. ಈ ನಡುವೆ ಆಯ್ಕೆ ಪ್ರಕ್ರಿಯೆಯಲ್ಲಿ ಉಂಟಾದ ಅಸಮಾಧಾನ ವಿಚಾರವಾಗಿ ವಿನಯ್ ಮತ್ತು ತುಕಾಲಿ ಮಧ್ಯೆ ಏಕವಚನದ ದಾಳಿ ನಡೆದಿದೆ.
ವೋಟಿಂಗ್ ಎಂದು ಸ್ಟಾರ್ಟ್ ಮಾಡ್ತೀರಾ, ಆ ನಂತರ ಯಾರಿಗೆ ಅವಕಾಶ ಸಿಕ್ಕಿಲ್ಲ ಅವರು ಆಡಲಿ ಎಂದು ಹೇಳ್ತೀರಾ, ಯಾಕಿಂಗೆ ಎಂದು ಸಂತೋಷ್ ಸಂಗೀತಾ ಅವರನ್ನು ನೇರವಾಗಿ ಪ್ರಶ್ನಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ವಿನಯ್, ಜೋರಾಗಿ ಮಾತಾಡಬೇಡ ಎಂದು ಏರು ಧ್ವನಿಯಲ್ಲಿ ಹೇಳಿದ್ದಾರೆ.
ಮೊದಲ ದಿನದಿಂದ ನೀನು ಮಾಡಿಕೊಂಡು ಬಂದಿದ್ದೀಯಾ ಅಂತ ಗೊತ್ತಿದೆ ಎಂದು ವಿನಯ್ ಹೇಳಿದ್ದಾರೆ. ಇದಕ್ಕೆ ತಿರುಗೇಟು ಕೊಟ್ಟ ಸಂತೋಷ್, ವೋಟ್ ಮೇಲೆ ಇದು ನಡೆಯಬೇಕು, ನೀನು ಏನ್ ಮಾಡ್ತಿಯಾ ಎಂದು ಕಿರುಚಿದ್ದಾರೆ. ಇದು ಮನೆಯ ವಾತಾವರಣವನ್ನು ಹಾಳು ಮಾಡಿದ್ದು, ಈ ಕಿತ್ತಾಟ ಯಾವ ಹಂತವನ್ನು ತಲುಪಿತು ಎಂಬುದನ್ನು ಇಂದಿನ ಸಂಚಿಕೆಯಲ್ಲಿ ತಿಳಿಯಬೇಕಿದೆ.