BBKS10: ನನಗೆ ಇವರೇ 'ಫೇಕ್' ಅನಿಸುತ್ತಾರೆ; ಪವಿ ಪೂವಪ್ಪ ಹೇಳಿದ್ಯಾರಿಗೆ?

ವಿಜಯವಾಣಿ (100)
Published on

ಬೆಂಗಳೂರು: ಬಿಗ್ ಬಾಸ್​ ಕನ್ನಡ ಸೀಸನ್​ 10ರ ಹತ್ತನೇ ವಾರದ ಅಂತ್ಯದಲ್ಲಿ ಮನೆಯಿಂದ ಹೊರಬಂದ ವೈಲ್ಡ್​ಕಾರ್ಡ್​ ಸ್ಪರ್ಧಿ ಪವಿ ಪೂವಯ್ಯ, ಮನೆಯೊಳಗಿನ ಅನುಭವ ಹಾಗೂ ಹಲವು ಕುತೂಹಲಕಾರಿ ವಿಚಾರಗಳನ್ನು ವೀಕ್ಷಕರ ಮುಂದೆ ಬಹಿರಂಗಪಡಿಸಿದ್ದಾರೆ. ಇದೇ ವೇಳೆ ತಮ್ಮ ಪ್ರಕಾರ ಮನೆಯೊಳಗೆ ಯಾರು ಜೆನ್ಯೂನ್ ಹಾಗೂ ಫೇಕ್ ಎಂಬುದನ್ನು ಕೂಡ ತಿಳಿಸಿದ್ದಾರೆ.

"ಮನೆಯಿಂದ ಹೊರಬರುವ ನಿರೀಕ್ಷೆ ಸಣ್ಣದಾಗಿ ಇತ್ತು. ಆದರೆ ಖಚಿತವಾಗಿ ಗೊತ್ತಿರಲಿಲ್ಲ. 80% ಹೊರಗೆ ಬರಬಹುದು ಅಂದುಕೊಂಡಿದ್ದೆ. ಎಲ್ಲರೂ ನನ್ನ ಟಾರ್ಗೆಟ್ ಮಾಡುತ್ತಿರುವುದನ್ನು ನೋಡಿ, ಈ ವಾರ ಹೋಗಬಹುದು ಅಂದುಕೊಂಡಿದ್ದೆ. ಈ ವಾರ ನಾನು ಸ್ವಲ್ಪ ಲ್ಯಾಕ್ ಆದೆ. ಕಡಿಮೆ ಪ್ರಯತ್ನ ಪಟ್ಟಿದ್ದೂ ಇದಕ್ಕೆ ಕಾರಣವಾಯ್ತು ಎಂದ ಪವಿ, ವೈಲ್ಡ್‌ ಕಾರ್ಡ್‌ ಮೂಲಕ ಎಂಟ್ರಿ ಕೊಟ್ಟಾಗ ಸಡನ್‌ ಆಗಿ ಯಾರನ್ನೂ ಫ್ರೆಂಡ್ಸ್ ಮಾಡಿಕೊಳ್ಳಲಿಲ್ಲ" ಎಂದು ಹೇಳಿದರು.

"ಎಲ್ಲರ ಜತೆಗೂ ಚೆನ್ನಾಗಿಯೇ ಇದ್ದೆ. ಒಂದು ಸೆಟ್‌ ಆಫ್‌ ಪೀಪಲ್‌, ನನಗೆ ಕಂಪರ್ಟಬಲ್ ಅನಿಸಿದ್ರು. ಹಾಗಾಗಿ ಅವರೊಟ್ಟಿಗೆ ಚೆನ್ನಾಗಿದ್ದೆ. ಸಂಗೀತಾ, ಕಾರ್ತಿಕ್ ತಂಡ ನನ್ನನ್ನು ಟಾರ್ಗೆಟ್ ಮಾಡುತ್ತಿದ್ರು. ಅವಿನಾಶ್‌ ಅವರನ್ನು ಅವರ ಕಡೆ ಎಳ್ಕೊಂಡು, ವಿನಯ್ ತಂಡದಲ್ಲಿದ್ದೀನಿ ಅಂದ್ಕೊಂಡು ನನ್ನ ಮೇಲೆ ಟಾರ್ಗೆಟ್ ಮಾಡುತ್ತ ಬಂದ್ರು. ವಿನಯ್ ಮೇಲಿರುವ ಕೋಪಕ್ಕೆ ನಾನು ಬಲಿಯಾದೆ ಅನಿಸುತ್ತದೆ" ಎಂದರು.

ನಿಮ್ಮ ಪ್ರಕಾರ ಮನೆಯೊಳಗೆ ಯಾರು ಜೆನ್ಯೂನ್-ಯಾರು ಫೇಕ್? ಎಂಬ ಪ್ರಶ್ನಗೆ ಉತ್ತರಿಸಿದ ಪವಿ, "ಮನೆಯಲ್ಲಿ ನಮ್ರತಾ ಹೆಚ್ಚು ಜೆನ್ಯೂನ್ ಅನಿಸುತ್ತಾರೆ. ಹಾಗೆಯೇ ಸಂಗೀತಾ ಕೂಡ ಓಕೆ. ಆದ್ರೆ ನನಗೆ ಒಂಥರಾ ಪ್ಲಿಪ್ ಆಗ್ತಾರೆ ಅಲ್ಲಿ ಇಲ್ಲಿ ಅನಿಸುತ್ತದೆ. ಕಾರ್ತೀಕ್ ಕೂಡ ಓಕೆ. ನನಗೆ ಫೇಕ್ ಅಂತ ತನಿಷಾ ಅನಿಸುತ್ತಾರೆ. ಟಾಸ್ಕ್‌ ಟೈಮ್‌ನಲ್ಲಿಯೇ ಒಂದು ಥರ ಇರ್ತಾರೆ. ಮನೆಯೊಳಗೆ ಒಂಥರ ಇರುತ್ತಾರೆ. ಟಾಸ್ಕ್‌ ಅನ್ನು ಮನೆಯಲ್ಲಿಯೇ ಬಿಟ್ಟುಬಿಡೋಣ ಅಂತಾರೆ. ಅದೇ ಬೇರೆಯವರು ಹಾಗೆ ಮಾಡಿದಾಗ ಅದನ್ನು ಒಂದೆರಡು ವಾರವಾದರೂ ಮರೆಯದೇ ಅದೇ ರೀಸನ್ ಹೇಳುತ್ತಿರುತ್ತಾರೆ" ಎಂದು ಪವಿ ಹೇಳಿದರು.

ದಿನದ 24 ಗಂಟೆಗಳ ಲೈವ್​ ಸ್ಟ್ರೀಮಿಂಗ್ ಜಿಯೋ ಸಿನಿಮಾದಲ್ಲಿ ಪ್ರಸಾರವಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net