

ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್ 10ರ ರಿಯಾಲಿಟಿ ಶೋನ ಎಂಟನೇ ವಾರದಲ್ಲಿ ಮನೆಯಿಂದ ಎಲಿಮಿನೇಟ್ ಆಗಿ ಹೊರಬಂದ ನೀತು ವನಜಾಕ್ಷಿ, ಇತ್ತೀಚೆಗೆ ವಿಜಯವಾಣಿ ನಡೆಸಿದ ವಿಶೇಷ ಸಂದರ್ಶನದಲ್ಲಿ ಭಾಗಿಯಾಗಿ, ಬಿಗ್ ಮನೆಯ ಸದಸ್ಯರ ಕುರಿತಂತೆ ಹಲವು ಕುತೂಹಲಕಾರಿ ಸಂಗತಿಗಳನ್ನು ಹಂಚಿಕೊಂಡರು. ಈ ವೇಳೆ ತಮ್ಮ ದೇಹದಲ್ಲಿ ಉಂಟಾದ ಬದಲಾವಣೆ, ಲಿಂಗ ಪರಿವರ್ತನೆ ಬಗ್ಗೆ ಬಹಿರಂಗವಾಗಿ ಮಾತನಾಡಿದ್ದಾರೆ.
"ನನ್ನ ಕಮ್ಯೂನಿಟಿ ಅವರನ್ನು ಮೊದಲಿಗೆ ಭೇಟಿ ಮಾಡಿ ದೇಹದ ಬದಲಾವಣೆ ಬಗ್ಗೆ ತಿಳಿಸಿದೆ. ಅವರು ಕೆಲವು ಮಾರ್ಗದರ್ಶನ ನೀಡಿದ್ರು, ಹಾರ್ಮೋನ್ ಚೇಂಜಸ್, ಎಂಡೋಕ್ರಿನಾಲಜಿಸ್ಟ್ ಅವರ ಬಳಿ ಹೋಗಿ ಮಾತನಾಡಬೇಕು, ಅವರೊಂದು ಪ್ರಮಾಣ ಪತ್ರ ಕೊಡುತ್ತಾರೆ ಎಂದರು. ನಮ್ಮ ಜೀವನದ ಕಥೆಯನ್ನು ಕೇಳ್ತಾರೆ, ಎರಡು ವರ್ಷಗಳ ಕಾಲ ಹಾರ್ಮೋನಲ್ ಟ್ರೀಟ್ಮೆಂಟ್ ನಡೆಯುತ್ತೆ. ಅದಾದ ಬಳಿಕ ಸರ್ಜರಿ ಆಗೋದು. ಹೀಗೆ ಒಂದು ಪ್ರಕ್ರಿಯೆ ಹೋಗುತ್ತೆ" ಎಂದು ಹೇಳಿದರು.
ತೃತೀಯ ಲಿಂಗಿಗಳಿಗೆ ಎಂದೇ ಉತ್ತಮ ಆಸ್ಪತ್ರೆ ಇರುವುದು ದೆಹಲಿಯಲ್ಲಿ ಎಂದು ಹೇಳಿದ ನೀತು, ಕರ್ನಾಟಕದಲ್ಲಿಯೂ ಅದೇ ರೀತಿಯ ಆಸ್ಪತ್ರೆಗಳು ಇದ್ಯಾ? ಇಲ್ವಾ? ಎಂಬುದರ ಬಗ್ಗೆ ಏನು ಹೇಳಿದ್ರು ಎಂಬುದನ್ನು ತಿಳಿಯಲು ಕೆಳಗಿನ ಸಂದರ್ಶನದ ವಿಡಿಯೋ ವೀಕ್ಷಿಸಿ.