

ಬೆಂಗಳೂರು: ಆರನೇ ವಾರ ನಡೆದ ಡಬಲ್ ಎಲಿಮಿನೇಷನ್ನಲ್ಲಿ ಬಿಗ್ ಮನೆಯಿಂದ ಹೊರಬಂದ ಗಾಯಕಿ ಇಶಾನಿ, ವಿಜಯವಾಣಿ ನಡೆಸಿದ ವಿಶೇಷ ಸಂದರ್ಶನದಲ್ಲಿ ಭಾಗಿಯಾಗಿ, ಬಿಗ್ಬಾಸ್ ಮನೆಯೊಳಗಿನ ಹಲವಾರು ವಿಚಾರಗಳನ್ನು ಬಹಿರಂಗವಾಗಿ ಹಂಚಿಕೊಂಡರು. ಈ ವೇಳೆ ನಟಿ ಚಿತ್ರಲ್ ಅವರು ನೀಡಿದ್ದ ಫೇಕ್ ವೋಟಿಂಗ್ ಹೇಳಿಕೆಗೆ ಇಶಾನಿ ತಮ್ಮ ಅಭಿಪ್ರಾಯವನ್ನು ಈ ರೀತಿ ವಿವರಿಸಿದ್ದಾರೆ.
ಮೊದಲಿಗೆ ಬಿಗ್ ಬಾಸ್ ಮನೆಯ ಜರ್ನಿ ಚೆನ್ನಾಗಿದೆ ಎಂದ ಇಶಾನಿ, "ನಾನು ಒಂದಷ್ಟು ಹಾಡುಗಳನ್ನು ಮನೆಯಲ್ಲಿ ಹಾಡಬೇಕಿತ್ತು, ಹೆಚ್ಚಿನ ದಿನ ಮನೆಯಲ್ಲಿ ಉಳಿಯಬೇಕಿತ್ತು. ವಾಪಸ್ ಹೋಗಬೇಕು ಅನಿಸುತ್ತಿದೆ" ಎಂದರು. ತದನಂತರ ಬಿಗ್ ಬಾಸ್ ಕಂಟೆಸ್ಟೆಂಟ್ ಆಯ್ಕೆ ಪ್ರಕ್ರಿಯೆಯಲ್ಲಿ ಫೇಕ್ ವೋಟಿಂಗ್ ಇದೆ, ಅಲ್ಲಿ ರಿಯಲ್ ಆಡಿಯನ್ಸ್ ಇರಲಿಲ್ಲ, ಜೂರಿ ಮೆಂಬರ್ಸ್, ಪತ್ರಕರ್ತರನ್ನು ಕೂರಿಸಬೇಕಿತ್ತು ಎಂದು ನಟಿ ಚಿತ್ರಲ್ ರಂಗಸ್ವಾಮಿ ಹೇಳಿದ್ದರು. ಈ ಬಗ್ಗೆ ನೀವೇನು ಹೇಳ್ತೀರಾ ಎಂಬ ಪ್ರಶ್ನೆಗೆ ಇಶಾನಿ ಉತ್ತರ ಹೀಗಿದೆ.
"ನನ್ನ ಪ್ರಕಾರ ನನಗೆ ಹಾಗೇನು ಅನಿಸಲಿಲ್ಲ. ನಾನು ನೋಡೋವಾಗ ಎಲ್ಲರೂ ಬಂದಿದ್ದರು, ಜೆನ್ಯೂನ್ ಇದ್ದರು, ಅಪ್ಪ-ಅಮ್ಮ ಕೂಡ ಅಲ್ಲೇ ಕುಳಿತ್ತಿದ್ದರು. ಎಲ್ಲರೂ ವೋಟಿಂಗ್ ಮಾಡಿದ್ರು, 84% ಮತ ಸಿಕ್ತು, ಆ ನಂತರ ಮನೆಯೊಳಗೆ ಹೋಗಲು ಆಯ್ಕೆಯಾದೆ" ಎಂದು ಹೇಳಿದರು. ಈ ಬಗ್ಗೆ ಇನ್ನು ಹೆಚ್ಚು ತಿಳಿಯಲು ಕೆಳಗಿನ ಸಂದರ್ಶನದ ವಿಡಿಯೋ ಮೇಲೆ ಕ್ಲಿಕ್ ಮಾಡಿ.