BBKS10: ಯಾರ ಪರವಾಗಿ ನಿಲ್ಲೋದು, ಯಾರ ತಪ್ಪನ್ನು ಹೇಳೋದು; ಗೊಂದಲದಲ್ಲಿ 'ಬಿಗ್'​ ಮಂದಿ!

Untitled design - 2023-10-19T163020.163
Published on

ಬೆಂಗಳೂರು: ಬಿಗ್​ ಬಾಸ್​ ಕನ್ನಡ ಸೀಸನ್​ 10 ಶುರುವಾದ ಮೊದಲ ದಿನದಿಂದಲೂ ಹಲವು ರೋಚಕ ತಿರುವುಗಳನ್ನು ಪಡೆದುಕೊಳ್ಳುತ್ತಿದ್ದು, ಮನೆಯ ಸದಸ್ಯರ ನಡುವೆ ಆಡುವ ಆಟದಲ್ಲಿ ಕಾಣಬೇಕಿದ್ದ ಪೈಪೋಟಿ ಕೇವಲ ಮಾತಿನಲ್ಲಿ ಕಾಣಿಸುತ್ತಿದೆ. ಒಬ್ಬರ ಮೇಲೋಬ್ಬರು ಅಸಮಾಧಾನ, ಆಕ್ಷೇಪಣೆ ವ್ಯಕ್ತಪಡಿಸುತ್ತಿದ್ದಾರೆಯೇ ವಿನಃ ಆರೋಗ್ಯಕರ ಚರ್ಚೆಗೆ ಆಸ್ಪದವಿಲ್ಲ ಎಂಬಂತೆ ನಡೆದುಕೊಳ್ಳುತ್ತಿದ್ದಾರೆ.

ಮನೆಯಲ್ಲಿ ಡ್ರೋನ್​ ಪ್ರತಾಪ್​ ಅನ್ನು ಪ್ರಶ್ನಿಸಿದ ರಕ್ಷಕ್​ ವಿರುದ್ಧ ಜೋರಾಗಿ ಕಿರುಚಿದ ಕಾರ್ತಿಕ್​, ಅವನನ್ನು ಕೇಳಲು ಯಾರು ಇಲ್ಲ ಅಂತ ಎಲ್ಲರೂ ಅವನ ಮೇಲೆ ಏಕಾಏಕಿ ಪ್ರಶ್ನಿಸುತ್ತೀರಾ ಎಂದು ಕೇಳಿದರು. ಇದರಿಂದ ಸಿಟ್ಟಿಗೆದ್ದ ನಮ್ರತಾ ಕಾರ್ತಿಕ್​ ನನಗೂ ಇದು ಥ್ರೆಟ್​ ಅನಿಸುತ್ತಿದೆ ಎಂದರು. ನಮ್ರತಾ ಬಳಿ ಕಾರ್ತಿಕ್ ಕ್ಷಮೆ ಕೇಳಿದ್ರು, ಆದ್ರೆ ಸಂಗೀತಾ ಮಾತು ಕೇಳಕ್ಕೇ ವಿನಯ್ ಕಿಂಚಿತ್ತು ರೆಡಿ ಇಲ್ಲ!

ಟಾಸ್ಕ್‌ಗೆ ಸಂಬಂಧಿಸಿದಂತೆ ನಡೆದ ಚರ್ಚೆಯಲ್ಲಿ ಕಾರ್ತಿಕ್ ಕೋಪದಿಂದ ಆರ್ಭಟಿಸಿದ್ದನ್ನು ನೋಡಿ ನಮ್ರತಾ ನಡುಗಿಹೋಗಿದ್ದರಂತೆ. ಕಾರ್ತಿಕ್‌ಗೆ ತಾನು ಪ್ರತಾಪ್‌ ಪರವಾಗಿ ನಿಂತು ತಪ್ಪು ಮಾಡಿದೆ ಅನಿಸಿದೆ. ತಾವು ಕೋಪದಿಂದ ಕೂಗಾಡಿದ್ದಕ್ಕೆ ಅವರು ನಮ್ರತಾ ಬಳಿ ಕ್ಷಮೆಯನ್ನೂ ಕೇಳಿದ್ದಾರೆ. ಆದ್ರೆ, ಇತ್ತ ಮನೆಯೊಳಗೆ ಬುಗಿಲೆದ್ದ ವಿನಯ್‌-ಸಂಗೀತಾ ಜಗಳ ದಿನಕ್ಕೊಂದು, ಕ್ಷಣಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ.

ಮನೆಯ ಸದಸ್ಯರೆಲ್ಲರೂ ಯಾರ ಪರವಾಗಿ ಮಾತಾಡುವುದು, ಯಾರ ತಪ್ಪನ್ನು ಹೇಳುವುದು ಎಂದು ತಿಳಿಯದೇ ಗೊಂದಲಗೊಂಡಂತಿದ್ದಾರೆ. ಈ ನಡುವೆ ಕಾರ್ತಿಕ್-ನಮ್ರತಾ-ಸಂಗೀತಾ ನಡುವೆ ಬಿರುಸಿನ ಮಾತುಕತೆ ನಡೆದಿದ್ದು, ಕೆಲವು ಸನ್ನಿವೇಶಗಳಿಗೆ ಕಾರಣವೇನು ಎಂಬುದನ್ನು ಚರ್ಚಿಸಿದ್ದಾರೆ.

ಈ ಮೂವರ ಮಾತುಕತೆ ಎಲ್ಲಿಗೆ ತಲುಪಿದೆ? ವಿನಯ್​-ಸಂಗೀತಾ ಜಟಾಪಟಿ ಇಂದೂ ಕೂಡ ತೀವ್ರವಾಗಲಿದೆಯಾ? ಎಂಬುದನ್ನು ಇಂದಿನ ಸಂಚಿಕೆಯಲ್ಲಿ ತಿಳಿಯಬೇಕಿದೆ. ಇನ್ನೂ ದಿನದ 24 ಗಂಟೆಯ ಲೈವ್​ ಸ್ಟ್ರೀಮಿಂಗ್​ ಅನ್ನು ಜಿಯೋ ಸಿನಿಮಾದಲ್ಲಿ ನೋಡಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net