'ಪಟಾಕಿ ಯಾರದ್ದೇ ಆದ್ರು ಹಚ್ಚೋರು ನಾವಾಗಿರಬೇಕು' ಎಂದ ವರ್ತೂರ್ ಸಂತೋಷ್; ಅಷ್ಟಕ್ಕೂ ಹೇಳಿದ್ಯಾರಿಗೆ

Varthur Tanisha
Published on

ಬೆಂಗಳೂರು:  ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಬಿಗ್​ ಬಾಸ್​ ಸೀಸನ್​ 10 ಈ ಬಾರಿ ಹಲವು ವಿಶೇಷತೆಗಳಿಂದ ಕೂಡಿದ್ದು, ಒಂದಿಲ್ಲೊಂದು ವಿಚಾರಕ್ಕೆ ಹೆಚ್ಚು ಸದ್ದು ಮಾಡುತ್ತಿದೆ. ಟಾಸ್ಕ್​ ವೇಳೆ ಸ್ಪರ್ಧಿಗಳು ಪರಸ್ಪರ ಮಾನವೀಯತೆ ಮರೆತು ಆಟವಾಡುತ್ತಿರುವುದು ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ.

ಟಾಸ್ಕ್​ ವೇಳೆ ಸ್ಪರ್ಧಿಗಳು ಜಗಳವಾಡುತ್ತ ನಿಂದಿಸುತ್ತಾ, ಮನಸ್ತಾಪ, ದೂರುಗಳಿಂದಲೇ ಕಾಲ ಕಳೆಯುವ ಇವರು ಭಾನುವಾರ ನಟ ಕಿಚ್ಚ ಸುದೀಪ್‌ ನಡೆಸಿ ಕೊಡುವ ಸೂಪರ್​ ಸಂಡೇ ವಿತ್​ ಸುದೀಪದಲ್ಲಿ ನಗುವಿನ ಅಲೆಯಲ್ಲಿ ತೇಲುತ್ತಾರೆ. ಅದೇ ರೀತಿ ಸುದೀಪ್​ ಅವರು ಮನರಂಜನೆಗಾಗಿ ಸ್ಪರ್ಧಿಗಳಿಗೆ ಕೆಲವು ಟಾಸ್ಕ್​ಗಳನ್ನು ನೀಡುತ್ತಾರೆ. ಅದೇ ರೀತಿ ಈ ವಾರ ವರ್ತೂರ್​ ಸಂತೋಷ್​ ಅವರಿಗೆ ಕಿಚ್ಚ ಸುದೀಪ್ ಟಾಸ್ಟ್​ ಒಂದನ್ನು ನೀಡಿದ್ದಾರೆ.

ಬಿಡುಗಡೆಯಾಗಿರುವ ಪ್ರೋಮೋದಲ್ಲಿ ನಟ ಸುದೀಪ್​ ವರ್ತೂರ್​ ಸಂತೋಷ್​ ಅವರಿಗೆ ಪಟಾಕಿ ಯಾರದ್ದೇ ಆದ್ರು ಹಚ್ಚೋರು ನಾವಾಗಿರಬೇಕು ಎಂದು ಡೈಲಾಗ್​ ಹೊಡೆಯುವಂತೆ ಹೇಳುತ್ತಾರೆ. ಮೊದಲಿಗೆ ವಿನಯ್​ ಹಾಗೂ ನಮ್ರತಾ ಅವರ ಬಳಿ ಡೈಲಾಗ್​ ಹೇಳುವಾಗ ವಿಚಲಿತರಾದಂತೆ ಕಾಣುವ ವರ್ತೂರ್​ ಸಂತೋಷ್ ಮತ್ತೋರ್ವ ಸ್ಪರ್ಧಿ ತನಿಷಾ ಅವರ ಬಳಿ ಹೇಳುವಾಗ ಖುಷಿಯಾಗಿ ಕಾಣುತ್ತಿರುವುದನ್ನು ನೋಡಬಹುದಾಗಿದೆ. ವರ್ತೂರ್​ ಸಂತೋಷ್​ ಅವರು ತನಿಷಾ ಅವರ ಬಳಿ ಡೈಲಾಗ್​ ಹೇಳಬೇಕಾದರೆ ಮನೆಮಂದಿ ನಗೆಗಡಲಲ್ಲಿ ತೇಲಿರುವುದನ್ನು ಬಿಡುಗಡೆಯಾಗಿರುವ ಪ್ರೋಮೋದಲ್ಲಿ ನೋಡಬಹುದಾಗಿದೆ.

ಸಂಗೀತಾ, ಸಿರಿ, ಪ್ರತಾಪ್, ಮೈಕಲ್‌ ಮತ್ತು ಪವಿ ಎಲಿಮೆನೇಷನ್‌ನಲ್ಲಿ ಇದ್ದಾರೆ. ಈ ವಾರದ ಮನೆಯಿಂದ ಯಾರು ಗೇಟ್‌ ಎಲಿಮಿನೇಟ್ ಆಗಲಿದ್ದಾರಂತೆ ಎಂದು ಕಾದು ನೋಡಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net