ನಗಿಸಬೇಕಿದ್ದ 'ಗಿಲ್ಲಿ' ಜಗಳ'ದಲ್ಲಿ'! ಇಬ್ಬರು ಸ್ಪರ್ಧಿಗಳಿಗೆ ಅಶ್ವಿನಿ ಖಡಕ್​ ಎಚ್ಚರಿಕೆ | BBK12

ವಿಜಯವಾಣಿ (6)
Published on

BBK12: ಕನ್ನಡ ಕಿರುತೆರೆ ಲೋಕದ ಅತಿದೊಡ್ಡ ರಿಯಾಲಿಟಿ ಶೋ ಬಿಗ್​ಬಾಸ್ ಕನ್ನಡ ಸೀಸನ್ 12 ಶುರುವಾಗಿ ಎರಡು ದಿನಕ್ಕೆ ಟ್ವಿಸ್ಟ್​ ಮೇಲೆ ಟ್ವಿಸ್ಟ್​, ಶಾಕಿಂಗ್ ಎಲಿಮಿನೇಷನ್ ಕೂಡ ನಡೆದುಹೋಗಿದೆ. ಮನೆಯೊಳಗೆ ಎಂಟ್ರಿಕೊಟ್ಟ 19 ಸ್ಪರ್ಧಿಗಳ ಪೈಕಿ ರಕ್ಷಿತಾ ಶೆಟ್ಟಿ ಮೊದಲ ದಿನವೇ ಎಲಿಮಿನೇಟ್​ ಆಗಿ ಹೊರಬಂದಿದ್ದಾರೆ. ಸದ್ಯ ಇದು ವೀಕ್ಷಕರ ಅಚ್ಚರಿ ಹಾಗೂ ಗೊಂದಲಕ್ಕೆ ಕಾರಣವಾಗಿದೆ.

ಈ ಹಿಂದೆ ಸ್ಪರ್ಧಿಗಳು ಮನೆಗೆ ಪ್ರವೇಶಿಸಿದ ಮೊದಲ ದಿನವೇ ಸಂಬಂಧಗಳು ಬೆಸೆಯುವ, ಹಾಸ್ಯ ಚಟಾಕಿ ಹೊಡೆಯುವ ಸಂದರ್ಭಗಳು ಮೂಡುತ್ತವೆ. ಆದರೆ, ಜಗಳಗಳು ಸ್ಫೋಟಗೊಳ್ಳುವುದು ತೀರ ಕಡಿಮೆ. ಇದು 11ನೇ ಸೀಸನ್​ನಲ್ಲಿ ನಡೆದಿತ್ತು. ಮೊದಲ ದಿನವೇ ಕೋಪದ ಜ್ವಾಲೆ ಚಿಮ್ಮಿತ್ತು. ಇಂದಿನ ಸಂಚಿಕೆಯಲ್ಲಿಯೂ ಅದೇ ರೀತಿ ಆಗಿದ್ದು, ಹಾಸ್ಯ ನಟ ಗಿಲ್ಲಿ, ಕಾವ್ಯ ಮತ್ತು ಅಶ್ವಿನಿ ಮಧ್ಯೆ ಜಗಳ ನಡೆದಿದೆ.

"ನೀವು ನಾವು ಹೇಳಿದ್ದನ್ನು ತೀರ ಪರ್ಸನಲ್​ ಆಗಿ ತಗೋತೀರಾ. ಗೌರವಯುತವಾಗಿ ಮಾತಾಡಿದರೆ, ನಮಗೂ ನಿಮಗೂ ಒಳ್ಳೆಯದು" ಎಂದು ಅಶ್ವಿನಿ ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಗಿಲ್ಲಿ, "ಸರಿಯಾಗಿ ಮಾತಾಡಿ ಮೇಡಂ. ಇಲ್ಲದಿದ್ರೆ, ಹೋಗು, ಬಾ ಎಂದೇ ಮಾತಾಡಬೇಕಾಗುತ್ತೆ" ಎಂದಿದ್ದಾರೆ. ಈ ಮಾತಿಗೆ ಕೆರಳಿದ ಅಶ್ವಿನಿ, "ಏಕವಚನದಲ್ಲಿ ಮಾತನಾಡಿದರೆ ಸರಿಗಿರುವುದಿಲ್ಲ. ಹೇಗೆ ಮಾತಾಡ್ತೀರಾ ಆ ರೀತಿ ಎಂದು ಚೀರಾಡಿರುವ ಪ್ರೋಮೋ ಇದೀಗ ಹೊರಬಿದ್ದಿದೆ. ಅಸಲಿಗೆ ಏನಾಯಿತು? ಗಿಲ್ಲಿ ಮಾಡಿದ ತಪ್ಪೇನು? ಎಂಬುದನ್ನು ಇಂದಿನ ಸಂಚಿಕೆಯಲ್ಲಿ ನೋಡಿ ತಿಳಿಯಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net