

ಇದನ್ನೂ ಓದಿ: ಸ್ವಲ್ಪ ನಡೆದರೂ ಸುಸ್ತಾಗುತ್ತಾ? ನಿಮ್ಮ ನರಗಳನ್ನು ಬಲಗೊಳಿಸುವ ಅತ್ಯುತ್ತಮ ಆಹಾರಗಳು ಇಲ್ಲಿವೆ ನೋಡಿ… Nerve Strength
ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ ಬಿಗ್ ಬಾಸ್ ಮನೆಯೊಳಗೆ ಬಂದ ಹನುಮಂತು, ಘಟಾನುಘಟಿ ಸ್ಪರ್ಧಿಗಳನ್ನೇ ಹಿಂದಿಕ್ಕಿ ಸೀಸನ್ 11ರ ಟ್ರೋಫಿಗೆ ಮುತ್ತಿಟ್ಟರು. ಒಬ್ಬ ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ ಫಿನಾಲೆ ಹಂತ ತಲುಪಿದ್ದಲ್ಲದೇ ಬರೋಬ್ಬರಿ 5 ಕೋಟಿ 23 ಲಕ್ಷದ 89 ಸಾವಿರದ 318 ಮತಗಳಿಂದ ಹಾಗೂ 3 ಕೋಟಿ ಮತಗಳ ಅಂತರದಲ್ಲಿ ಭರ್ಜರಿಯಾಗಿ ಗೆದ್ದು ಬೀಗಿದ್ದು ಬಿಗ್ ಬಾಸ್ ಇತಿಹಾಸದಲ್ಲೇ ಮೊದಲು. ಇದು ವೀಕ್ಷಕರಲ್ಲೂ ಅತೀವ ಸಂತಸ ಮೂಡಿಸಿತು.
ಸಣ್ಣ ಹಳ್ಳಿಯಲ್ಲಿ ಕುರಿಗಾಹಿಯಾಗಿ ಜೀವನ ಸಾಗಿಸುತ್ತಿದ್ದ ಹನುಮಂತು, ಬೆಂಗಳೂರಿಗೆ ಹಾಡಲು ಬಂದು, 50 ಲಕ್ಷ ರೂ. ನಗದು ಬಹುಮಾನದ ಜತೆಗೆ ಬಿಗ್ ಬಾಸ್ ಟ್ರೋಫಿಯನ್ನೇ ಎತ್ತಿ ಹಿಡಿದಿರುವುದು ಗ್ರಾಮದ ಜನರಲ್ಲಿ ಹೆಮ್ಮ, ಸಂತೋಷ ಉಂಟುಮಾಡಿದೆ. ಟ್ರೋಫಿ ಗೆದ್ದ ಬಳಿಕ ಸುದ್ದಿಗೋಷ್ಠಿ, ಸಂದರ್ಶನ ಎಂದು ಬಿಜಿಯಾಗಿದ್ದ ಹನುಮಂತು, ತನ್ನ ಹುಟ್ಟೂರಾದ ಹಾವೇರಿಗೆ ತೆರಳಲು ಆಗಿರಲಿಲ್ಲ. ಆದರೆ, ಇಂದು ಭೇಟಿ ಕೊಟ್ಟಿದ್ದು, ಊರಿನಲ್ಲಿ ಹಬ್ಬದ ವಾತಾವರಣವೇ ಸೃಷ್ಟಿಯಾಗಿದೆ.
ಇದನ್ನೂ ಓದಿ: Krishna Byregowda Statement | ಯುಪಿ ಸರ್ಕಾರ ಈ ಘಟನೆ ಬಗ್ಗೆ ಹೀಗ್ಯಾಕೆ ಮಾಡ್ತಿದೆ ಎಂದು ಗೊತ್ತಾಗ್ತಿಲ್ಲ
ಹಾವೇರಿಯ ಸವಣೂರ ತಾಲೂಕಿನ ಚಿಲ್ಲೂರ ಬಡ್ನಿಯ ಹನುಮಂತ ಲಮಾಣಿಗೆ ತವರಿನಲ್ಲಿ ಅದ್ದೂರಿ ಸ್ವಾಗತ ಕೋರಿದ ಗ್ರಾಮಸ್ಥರು, ಹಾಡಿ-ಕುಣಿದು ಕುಪ್ಪಳಿಸಿದ್ದಾರೆ. ಮೂರು ತಿಂಗಳ ಬಳಿಕ ತವರಿಗೆ ಆಗಮಿಸಿದ ಹಿನ್ನೆಲೆಯಲ್ಲಿ ಹಾವೇರಿ ಜಿಲ್ಲೆಯ ಸವಣೂರು ಪಟ್ಟಣದ ಭರಮದೇವರ ವೃತ್ತದಲ್ಲಿ ಅಪಾರ ಸಂಖ್ಯೆಯ ಅಭಿಮಾನಿಗಳು ಸಂಭ್ರಮದಿಂದ ಹನುಮಂತನನ್ನು ಸ್ವಾಗತಿಸಿದ್ದಾರೆ. ಶಾಲು, ಹೂವಿನ ಹಾರ ಹಾಕಿ ಪ್ರೀತಿಯಿಂದ ಬರಮಾಡಿಕೊಂಡಿದ್ದಾರೆ. ಹನುಮಂತನೇ ಹಾಡಿದ ಹಾಡಿಗೆ ತೆರೆದ ವಾಹನದಲ್ಲಿ ಮೆರವಣಿಗೆ ಕರೆದುಕೊಂಡು ಹೋಗಿದ್ದಾರೆ.
ಹನುಮಂತ ಬಿಗ್ ಬಾಸ್ ಟ್ರೋಫಿ ಪ್ರದರ್ಶಿಸಿ ಖುಷಿಪಟ್ಟರು. ಈ ವೇಳೆ ಅಭಿಮಾನಿಗಳು ಹನುಮಂತ ಹಾಡಿರುವ ಲಂಬಾಣಿ ಹಾಗೂ ಜಾನಪದ ಡಿಜೆ ಹಾಡುಗಳಿಗೆ ಕುಣಿದು ಕುಪ್ಪಳಿಸಿದ್ದಾರೆ.
https://www.vijayavani.net/one-nation-one-time-will-soon-takes-place