

ಬೆಂಗಳೂರು: ಬಿಗ್ ಬಾಸ್ ಸೀಸನ್ 11ರ ಎಂಟನೇ ವಾರದಲ್ಲಿ ಬಿಗ್ ಮನೆಯಿಂದ ಕ್ಯಾಡ್ಬರೀಸ್, ನಟ ಧರ್ಮ ಕೀರ್ತಿರಾಜ್ ಎಲಿಮಿನೇಟ್ ಆಗಿದ್ದಾರೆ. 50ನೇ ದಿನಕ್ಕೆ ಮನೆಯೊಳಗೆ ಇಬ್ಬರು ವೈಲ್ಡ್ ಕಾರ್ಡ್ ಸ್ಪರ್ಧಿಗಳು ಒಳಗೆ ಬಂದ ಮೊದಲ ವಾರದಲ್ಲೇ ಹೊರ ನಡೆದಿದ್ದಾರೆ.
ಎಲಿಮಿನೇಷನ್ ಹಾಟ್ ಸೀಟಿನಲ್ಲಿ ಕುಳಿತ್ತಿದ್ದ ಧರ್ಮ ಕೀರ್ತಿರಾಜ್, ಚೈತ್ರಾ ಕುಂದಾಪುರ ಮತ್ತು ಗೌತಮಿ ಜಾದವ್ ಪೈಕಿ ಧರ್ಮ ಮನೆಯಿಂದ ಎಲಿಮಿನೇಟ್ ಆಗಿ ಹೊರಬಂದಿದ್ದಾರೆ.