BB 17: ಫಿನಾಲೆಯಲ್ಲಿ ಎಲ್ಲರ ಮುಂದೆ ಹೀಗೊಂದು ಷರತ್ತು ಹಾಕಿದ ಅಂಕಿತಾ ಅತ್ತೆ..!

anku
Published on

ಮುಂಬೈ: 107 ದಿನಗಳ ಪಯಣ, 21 ಸ್ಪರ್ಧಿಗಳು... ಎಲ್ಲರನ್ನೂ ಸೋಲಿಸಿ ಮುನಾವರ್ ಫಾರೂಕಿ ಹಿಂದಿ ಬಿಗ್ ಬಾಸ್ ಸೀಸನ್ 17 ಟ್ರೋಫಿ ವಿಜೇತರಾದರು. ಸೀಸನ್ 17 ರ ಎಲ್ಲಾ ಹಳೆಯ ಸ್ಪರ್ಧಿಗಳು ಗ್ರ್ಯಾಂಡ್ ಫಿನಾಲೆಯಲ್ಲಿ ಕಾಣಿಸಿಕೊಂಡರು. ಜತೆಗೆ ಟಾಪ್ 5 ಗೆ ಪ್ರವೇಶಿಸಿದ ಸ್ಪರ್ಧಿಗಳ ಕುಟುಂಬ ಸದಸ್ಯರೂ ಇದ್ದರು. ಇಲ್ಲಿಗೆ ವಿಕ್ಕಿ ಜೈನ್ ಅವರ ತಾಯಿ ಅಂದರೆ ಅಂಕಿತಾ ಲೋಖಂಡೆಯ ಅತ್ತೆ ಕೂಡ ಬಂದಿದ್ದರು. ಈ ಸಮಯದಲ್ಲಿ ಸಲ್ಮಾನ್ ಖಾನ್ ಅಂಕಿತಾ ಅವರ ಅತ್ತೆಯೊಂದಿಗೆ ಬಹಳಷ್ಟು ಫನ್ ಮಾಡಿದರು. ಸೀಸನ್ ಉದ್ದಕ್ಕೂ ಅಂಕಿತಾ ಮತ್ತು ವಿಕ್ಕಿ ನಡುವಿನ ಜಗಳಗಳು ಮತ್ತು ವಿವಾದಗಳ ಬಗ್ಗೆ ಕಾಲು ಎಳೆಯಲಾಗುತ್ತಿತ್ತು. ಹಾಗಾಗಿ ಕಾರ್ಯಕ್ರಮದ ವೇಳೆ ಅಂಕಿತಾ ಅವರ ಅತ್ತೆ ಈ ಬಗ್ಗೆ ಹಲವು ಹೇಳಿಕೆಗಳನ್ನು ಸಹ ನೀಡಿದರು.

ವಿಜೇತರ ಘೋಷಣೆಗೆ ಮುನ್ನ, ನಿರೂಪಕ ಸಲ್ಮಾನ್ ಖಾನ್ ಕಾರ್ಯಕ್ರಮದಲ್ಲಿ ಸಾಕಷ್ಟು ತಮಾಷೆ ಮಾಡಿದರು ಮತ್ತು ಸ್ಪರ್ಧಿಗಳನ್ನು ಹುರಿದುಂಬಿಸಲು ಕುಟುಂಬ ಸದಸ್ಯರಿಗೆ ಪ್ರಶ್ನೆಗಳನ್ನು ಕೇಳಿದರು. ಇದೇ ವೇಳೆ ಅಂಕಿತಾ ಅತ್ತೆಯೇ ಸಲ್ಮಾನ್ ಖಾನ್ ಅವರ ದೊಡ್ಡ ಟಾರ್ಗೆಟ್ ಆಗಿದ್ದರು.

ಅಂಕಿತಾ ಮತ್ತು ಆಕೆಯ ಅತ್ತೆಗೆ 7 ಭರವಸೆಗಳನ್ನು ನೀಡುವಂತೆ ಸಲ್ಮಾನ್ ಕೇಳಿದರು. ಅದರಲ್ಲಿ ಅಂಕಿತಾ 4 ಭರವಸೆಗಳನ್ನು ಮತ್ತು ಅವರ ಅತ್ತೆ 3 ಭರವಸೆಗಳನ್ನು ಈಡೇರಿಸಬೇಕಾಗಿತ್ತು. ಅಂಕಿತಾ, "ನಾನು ನಿಮ್ಮ ಮಗನನ್ನು ಪ್ರೀತಿಸುತ್ತೇನೆ, ಸಂತೋಷವಾಗಿಡುತ್ತೇನೆ, ಸಂಪೂರ್ಣವಾಗಿ ಸಂತೋಷವಾಗಿಡಲು ಪ್ರಯತ್ನಿಸುತ್ತೇನೆ" ಎಂಬ ಭರವಸೆ ನೀಡಿದರು. ಅಂಕಿತಾ ನಂತರ, ಅತ್ತೆಯ ಸರದಿ ಬಂದಿತು, ಆಗ ಅವರು ಅಂಕಿತಾ ಅವರನ್ನು "ಇಂತಹ ಶೋನಲ್ಲಿ ಎಂದಿಗೂ ಭಾಗವಹಿಸುವುದಿಲ್ಲ'' ಎಂದು ಭರವಸೆ ನೀಡುವಂತೆ ಕೇಳಿದರು. ಆಗ ಅತ್ತೆಯ ಈ ಮಾತಿಗೆ ಅಂಕಿತಾ ಬೇಸರಗೊಂಡರು.

ಕೊನೆಗೆ ಅತ್ತೆಗೆ ಪ್ರತಿಕ್ರಿಯಿಸಿದ ಅಂಕಿತಾ, "ಅಮ್ಮ, ನಾನು ಉದ್ಯಮದ ಭಾಗವಾಗಿದ್ದೇನೆ ಮತ್ತು ಅದರ ಬಗ್ಗೆ ನನಗೆ ಹೆಮ್ಮೆ ಇದೆ" ಎಂದು ಹೇಳಿದರು.

ಅಂಕಿತಾ ಟಾಪ್ 4 ತಲುಪಿದ್ದರು. ಇದರ ನಂತರ ಬಿಗ್ ಬಾಸ್ 17 ರೊಂದಿಗಿನ ಅವರ ಪ್ರಯಾಣ ಕೊನೆಗೊಂಡಿತು. ಈ ಕಾರ್ಯಕ್ರಮದಲ್ಲಿ ಅಂಕಿತಾ ಅವರ ವೈಯಕ್ತಿಕ ಜೀವನದ ಬಗ್ಗೆ ಹಲವು ವಿಷಯಗಳು ಬೆಳಕಿಗೆ ಬಂದವು. ಅವರ ಅತ್ತೆ ಅವರ ವಿರುದ್ಧ ಅನೇಕ ಬಾರಿ ಕಾಣಿಸಿಕೊಂಡರು. ಅಂಕಿತಾ ಅವರ ಅತ್ತೆ ಕಾರ್ಯಕ್ರಮಕ್ಕೆ ಅತಿಥಿಯಾಗಿ ಬಂದಾಗ, ಅಂಕಿತಾ ಅವರ ಪತಿ ವಿಕ್ಕಿಯನ್ನು ಗೌರವಿಸುವಂತೆ ಕೇಳಿದರು. ಈ ಸೀಸನ್​​​​ನಲ್ಲಿ, ಅಂಕಿತಾ ಮತ್ತು ವಿಕ್ಕಿ ಜೈನ್ ಜೊತೆಗೆ, ಅವರ ತಾಯಿ ಕೂಡ ಬಹಳಷ್ಟು ಸುದ್ದಿ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net