ಬಸವ ಭಾರತ ಪ್ರತಿಷ್ಠಾನದಿಂದ ಬಸವೇಶ್ವರರ ಅಂಚೆ ಕಾರ್ಡ್ ಬಿಡುಗಡೆ

Published on

ಮೈಸೂರು: ಬಸವ ಭಾರತ ಪ್ರತಿಷ್ಠಾನದಿಂದ ಅಂಚೆ ಇಲಾಖೆ ನೆರವಿನೊಂದಿಗೆ ಜ.9ರಂದು ವಿಶ್ವಗುರು ಬಸವೇಶ್ವರರ ಅಂಚೆ ಕಾರ್ಡ್ ಬಿಡುಗಡೆ ಮಾಡಲಾಗುತ್ತಿದೆ ಎಂದು ಪ್ರತಿಷ್ಠಾನದ ಅಧ್ಯಕ್ಷ ವಿ.ಶಿವರುದ್ರಪ್ಪ ತಿಳಿಸಿದರು.
ನಗರದ ಹೊಸಮಠದ ನಟರಾಜ ಸಭಾಂಗಣದಲ್ಲಿ ಅಂದು ಸಂಜೆ 4ಕ್ಕೆ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಹೊಸಮಠದ ಶ್ರೀಚಿದಾನಂದಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ. ಬರಡನಪುರ ಮಠದ ಶ್ರೀಪರಮಶಿವಮೂರ್ತಿ ಸ್ವಾಮೀಜಿ, ಕುದೇರು ಮಠದ ಶ್ರೀಗುರುಶಾಂತಸ್ವಾಮೀಜಿ, ಚಿಕ್ಕಮಗಳೂರಿನ ಶ್ರೀಬಸವಯೋಗಿಪ್ರಭು ಸ್ವಾಮೀಜಿ ಇತರರು ಭಾಗವಹಿಸಲಿದ್ದಾರೆ ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಬೈಲಹೊಂಗಲ ತೋಂಟದಾರ್ಯ ಶಾಖಾ ಮಠದ ಶ್ರೀನಿಜಗುಣಾನಂದ ಸ್ವಾಮೀಜಿ ಅಂಚೆ ಕಾರ್ಡ್ ಬಿಡುಗಡೆ ಗೊಳಿಸುವರು. ಇದೇ ವೇಳೆ ಬಸವ ತತ್ವದ ಪ್ರವಚನಕಾರ ನಿಜಗುಣಸ್ವಾಮಿ ಅವರನ್ನು ಅಭಿನಂದಿಸಿ ಸಾಧಕರನ್ನು ಸನ್ಮಾನಿಸಲಾಗುವುದು ಎಂದು ಹೇಳಿದರು.
ಹಿರಿಯ ಅಂಚೆ ಅಧೀಕ್ಷಕ ಏಂಜೆಲ್ ರಾಜ್ ಬಿಡುಗಡೆಗೊಳಿಸುವರು. ಕಾರ್ಡ್ ದರ ಹತ್ತು ರೂ.ಗಳಾಗಿರಲಿದೆ. ಶಾಸಕ ಹರೀಶ್‌ಗೌಡ, ಜಿ.ಡಿ.ಹರೀಶ್‌ಗೌಡ, ಮಾಜಿ ಶಾಸಕ ನಿರಂಜನಕುಮಾರ್, ತೋಂಟದಾರ್ಯ ಸೇರಿದಂತೆ ಇತರರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು. ಆಯೋಜಕರಾದ ಅಂಬಳೆ ಎಂ.ಶಿವಾನಂದಸ್ವಾಮಿ, ಎಂ.ಮಹದೇವಸ್ವಾಮಿ, ನಾಗರಾಜ,, ಸಿ.ಶಿವರುದ್ರಪ್ಪ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net