ಶಿವಮೊಗ್ಗ ಗಲಭೆ; ಇದೊಂದು ಸಣ್ಣ ಘಟನೆ ಎಂದ ಗೃಹ ಸಚಿವರ ಹೇಳಿಕೆಗೆ ಬೊಮ್ಮಾಯಿ ಕೊಟ್ಟ ಉತ್ತರ ಹೀಗಿದೆ

Untitled design - 2023-10-02T154226.458
Published on

ಮಂಡ್ಯ: ಈದ್ ಮಿಲಾದ್ ಮೆರವಣಿಗೆ ವೇಳೆ ಕಲ್ಲು ತೂರಾಟ ನಡೆದಿದ್ದು, ಈ ಗಲಭೆಯ ಹಿನ್ನೆಲೆ ಸದ್ಯ ಶಿವಮೊಗ್ಗ ನಗರದಾದ್ಯಂತ ಸೆಕ್ಷನ್​ 144 ಜಾರಿಯಾಗಿದೆ. ಈ ಪ್ರಕರಣವನ್ನು ಸಣ್ಣ ಘಟನೆ ಎಂದು ಹೇಳಿದ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಹೇಳಿಕೆಗೆ ಇದೀಗ ಮಾಜಿ ಸಿಎಂ, ಬಿಜೆಪಿ ನಾಯಕ ಬಸವರಾಜ ಬೊಮ್ಮಾಯಿ ತಿರುಗೇಟು ನೀಡಿದ್ದಾರೆ.

ಪರಮೇಶ್ವರ್ ಹೇಳಿಕೆಯನ್ನು ಟೀಕಿಸಿದ ಬಿಜೆಪಿ ನಾಯಕ ಬಸವರಾಜ ಬೊಮ್ಮಾಯಿ, "ಅವರು ಈ ರೀತಿ ಹೇಳಿಕೆ ಕೊಡುತ್ತಿರುವುದು ಇದೇ ಮೊದಲೇನಲ್ಲ. ಗಂಭೀರವಾದ ಘಟನೆ ನಡೆದರೂ, ಸಣ್ಣ ಘಟನೆ ಎಂದು ಹೇಳುವ ಪ್ರವೃತ್ತಿಯಿದೆ. ಕೋಮು ಗಲಭೆ ಸೃಷ್ಟಿ ಮಾಡುವ ಕುಮ್ಮಕ್ಕು ಕೊಡುವ ಶಕ್ತಿಗಳನ್ನು ಬಂಧಿಸಬೇಕು" ಎಂದು ಹೇಳಿದರು.

"ಈ ರೀತಿ ಹೇಳಿಕೆ ಕೊಟ್ಟರೆ ಇನ್ನು ಪ್ರೋತ್ಸಾಹಿಸಿದಂತೆ ಆಗುತ್ತದೆ. ಘಟನೆ ಕಾನೂನು ಸುವ್ಯವಸ್ಥೆ ಹದಗೆಟ್ಟಿರುವುದಕ್ಕೆ ಸಾಕ್ಷಿಯಾಗಿದೆ. ರಾಜ್ಯದಲ್ಲಿ ಅಕ್ರಮ ದಂಧೆ ನಡೆಸುವ ಶಕ್ತಿಗಳೇ ಕೋಮು ಗಲಭೆಗೆ ಕುಮ್ಮಕ್ಕು ನೀಡುತ್ತಿವೆ. ಗೃಹ ಸಚಿವವರಿಗೆ ಇದ್ಯಾವುದೂ ಕಾಣುವುದಿಲ್ಲ, ಅದಕ್ಕೆ ಸಣ್ಣ ಘಟನೆ ಎಂದು ಹೇಳಿದ್ದಾರೆ" ಎಂದು ಬೊಮ್ಮಯಿ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net