ವಿಶ್ವದ ಶ್ರೇಷ್ಠ ದಾರ್ಶನಿಕ ಬಸವಣ್ಣ

BASAVA JAYANTI
ರಾಷ್ಟ್ರೀಯ ಬಸವದಳ ಟ್ರಸ್ಟ್‌ನಿಂದ ಏರ್ಪಡಿಸಿದ್ದ ಬಸವ ಜಯಂತ್ಯುತ್ಸವದಲ್ಲಿ ನೀಲಲೋಚನ ಹಾಲಪ್ಪ, ಯೋಗೀಶ್ ನಿರ್ವಿಕಲ್ಪ, ಹಾಲಪ್ಪ, ಚನ್ನವೀರಪ್ಪ ಗಾಮನಗಟ್ಟಿ ಭಾಗವಹಿಸಿದ್ದರು.
Published on

ಶಿವಮೊಗ್ಗ: ಬಸವಣ್ಣನವರು ವಿಶ್ವ ಕಂಡ ಶ್ರೇಷ್ಠ ದಾರ್ಶನಿಕ. ಅವರು ನಿರ್ಮಿಸಿದ ಆದರ್ಶಯುತ ಕಲ್ಯಾಣ ಸಮಾಜವು ವಿಶ್ವಕ್ಕೆ ಆದರ್ಶನೀಯ ಎಂದು ಕೂಡಲ ಸಂಗಮ ಬಸವಧರ್ಮ ಪೀಠದ ಹಿರಿಯ ಅನುಭಾವಿ ನೀಲಲೋಚನ ಹಾಲಪ್ಪ ಹೇಳಿದರು.

ರಾಷ್ಟ್ರೀಯ ಬಸವದಳ ಟ್ರಸ್ಟ್‌ನಿಂದ ಏರ್ಪಡಿಸಿದ್ದ ಬಸವ ಜಯಂತಿಯಲ್ಲಿ ಉಪನ್ಯಾಸ ನೀಡಿ, ಬಸವಣ್ಣನವರು ತಮ್ಮ ಅನುಭಾವ ಸಾಹಿತ್ಯ ಹಾಗೂ ನಿರಹಂಭಾವ ಪ್ರಜ್ಞೆಯ ಬದುಕಿನ ಮೂಲಕ ಇಡೀ ಸಮಾಜವನ್ನು ಸಾತ್ವಿಕ ನೆಲೆಗೆ ಕೊಂಡೊಯ್ದರು. ವಿಶ್ವದ ಶಾಂತಿ ಬಯಸಿದ ದಾರ್ಶನಿಕ ಎಂದು ತಿಳಿಸಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಬಸವ ಕಲ್ಯಾಣ ಸಮಗಾರ ಹರಳಯ್ಯ ಗುರುಪೀಠದ ಪೋಷಕ ಚನ್ನವೀರಪ್ಪ ಗಾಮನಗಟ್ಟಿ, ಸಮಾಜಮುಖಿ ಕಾರ್ಯಗಳನ್ನು ನಿಸ್ವಾರ್ಥ ಭಾವದಿಂದ ಮಾಡಿದಾಗ ಮನುಷ್ಯ ದೊಡ್ಡವನಾಗುವುದು. ಸಮಾಜಮುಖಿ ಕಾರ್ಯಗಳ ಮೂಲಕ ದೈವತ್ವವನ್ನು ಸಾಧಿಸಬಹುದು ಎಂಬುದನ್ನು ಬಸವಾದಿ ಶರಣರು ಸಾಧಿಸಿ ತೋರಿಸಿದ್ದಾರೆ ಎಂದರು.
ರಾಷ್ಟ್ರೀಯ ಬಸವದಳದ ಕಾರ್ಯದರ್ಶಿ ಯೋಗೀಶ್ ನಿರ್ವಿಕಲ್ಪ ಮಾತನಾಡಿ, ಬಸವಣ್ಣನವರ ಜಯಂತ್ಯುತ್ಸವದ ಮೂಲಕ ನಾವು ಮನದ ಅಜ್ಞಾನ, ಅಂಧಕಾರಗಳನ್ನು ಕಳೆದುಕೊಂಡು, ಜ್ಞಾನದ ಬೆಳಕನ್ನು ಬೆಳಗಿಸಿಕೊಳ್ಳಬೇಕು. ಸಮಾಜದೊಳಗಿನ ಅಜ್ಞಾನವನ್ನು ಹೋಗಲಾಡಿಸುವ ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದು ಹೇಳಿದರು.
ನವಜ್ಯೋತಿ ಅಂಗವಿಕಲರ ಸಂಸ್ಥೆಯ ಅಂಧ ಗಾಯಕ ಬಸವರಾಜ್ ಹಾಗೂ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ ಕಾಚಿನಕಟ್ಟೆ ಸರ್ಕಾರಿ ಪ್ರೌಢಶಾಲೆಯ ಮಮತಾ ಅವರನ್ನು ಅಭಿನಂದಿಸಲಾಯಿತು. ರಾಷ್ಟ್ರೀಯ ಬಸವದಳ ಟ್ರಸ್ಟ್ ಅಧ್ಯಕ್ಷ ರಾಮಪ್ಪ ಷಟ್‌ಸ್ಥಲ ಧ್ವಜಾರೋಹಣ ನೆರವೇರಿಸಿದರು.
ರಾಷ್ಟ್ರೀಯ ಬಸವದಳ ಟ್ರಸ್ಟ್ ಗೌರವಾಧ್ಯಕ್ಷ ಹಾಲಪ್ಪ. ಪ್ರಮುಖರಾದದ ಬಾಳಾನಂದ, ಶಾಂತಮ್ಮ, ಶಿವರುದ್ರಪ್ಪ, ಮೂಲಿಮನಿ, ಶಿವಗಂಗಮ್ಮ, ಲತಾ, ರತ್ನಮ್ಮ ವಿರೂಪಾಕ್ಷಪ್ಪ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net