

ರಾಣೆಬೆನ್ನೂರ: ಖಾಸಗಿ ಕಾರ್ಯಕ್ರಮ ನಿಮಿತ್ತ ನಗರಕ್ಕೆ ಬುಧವಾರ ಭೇಟಿ ನೀಡಿದ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಅವರಿಗೆ ಅಭಿಮಾನಿಗಳು ಮುಂದಿನ ಮುಖ್ಯಮಂತ್ರಿ ಎಂದು ಜೈಕಾರ ಹಾಕಿದ ಘಟನೆ ನಡೆಯಿತು.
ಬಿಜೆಪಿ ರಾಜಾಧ್ಯಕ್ಷ ಬಿ.ವೈ. ವಿಜೆಯೇಂದ್ರ ವಿರುದ್ಧ ಸತತ ವಾಗ್ದಾಳಿ ಮಾಡಿದ ನಂತರ ಅವರನ್ನು ಬಿಜೆಪಿ ಹೈಕಮಾಂಡ್ ಪಕ್ಷದಿಂದ ಉಚ್ಛಾಟನೆ ಮಾಡಲಾಗಿತ್ತು. ಇದರಿಂದ ಯತ್ನಾಳ ಅಭಿಮಾನಿಗಳು ಹಾಗೂ ಹಿಂದು ಕಾರ್ಯಕರ್ತರು ಬಿಜೆಪಿ ಪಕ್ಷದ ವಿರುದ್ಧ ಹರಿಹಾಯ್ದಿದ್ದರು.
ನಂತರ ರಾಜ್ಯಾದ್ಯಂತ ಯತ್ನಾಳ ಅವರಿಗೆ ಅಭಿಮಾನಿಗಳ ಸಂಖ್ಯೆ ಹೆಚ್ಚಾದ ಹಿನ್ನೆಲೆ ಅವರನ್ನು ಮುಂದಿನ ಮುಖ್ಯಮಂತ್ರಿ ಎಂದು ಘೋಷಣೆ ಹಾಕಿದರು.
ಬಿಜೆಪಿ ಮುಖಂಡರು ದೂರ ದೂರ...
ಬಿಜೆಪಿ ಪಕ್ಷದಿಂದ ಉಚ್ಛಾಟನೆಗೊಂಡ ಹಿನ್ನೆಲೆಯಲ್ಲಿ ನಗರಕ್ಕೆ ಯತ್ನಾಳ್ ಬಂದಿದ್ದರೂ ಯಾರೋಬ್ಬರು ಬಿಜೆಪಿ ಕಾರ್ಯಕರ್ತರು, ಮುಖಂಡರು ಬಂದಿರಲಿಲ್ಲ. ಆದರೆ, ನಗರಸಭೆ ಮಾಜಿ ಉಪಾಧ್ಯೆ ಕಸ್ತೂರಿ ಚಿಕ್ಕಬಿದರಿ ಪತಿ ಹಾಗೂ ಬಿಜೆಪಿ ಮುಖಂಡ ಸಿದ್ದು ಚಿಕ್ಕಬಿದರಿ ಹಾಗೂ ಕೆಲ ಪಂಚಮಸಾಲಿ ಸಮಾಜದವರ ಮುಖಂಡರು ಹಾಜರಿದ್ದರು.