VIDEO | ಮಸಾಜ್‌ ಮಾಡ್ತಾ ಗ್ರಾಹಕನ ಮುಖಕ್ಕೆ ಉಗುಳಿದ; ಸಲೂನ್‌ ಹುಡುಗನ ಹಿಂದೆ ಬಿದ್ದ ಪೊಲೀಸರು

uttarpradeshsalon
Published on

ಉತ್ತರಪ್ರದೇಶ:  ಸಲೂನ್ ನಲ್ಲಿ ಕೆಲಸ ಮಾಡುತ್ತಿರುವ ಕ್ಷೌರಿಕನೊಬ್ಬ ಮುಖದ ಮೇಲೆ ಉಗುಳುತ್ತಾ ಮಸಾಜ್ ಮಾಡುತ್ತಿದ್ದಾನೆ. ಕನೌಜ್‌ನಲ್ಲಿ ಆಘಾತಕಾರಿ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಮಸಾಜ್‌ ಮಾಡ್ತಾ ಗ್ರಾಹಕನ ಮುಖಕ್ಕೆ ಉಗುಳಿದ ಸಲೂನ್‌ ಹುಡುಗ. ತನ್ನ ಕೈಯಲ್ಲಿ ಉಗುಳುತ್ತಾನೆ ಮತ್ತು ಗ್ರಾಹಕನಿಗೆ ಮಸಾಜ್ ಮಾಡುತ್ತಾನೆ. ಈ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆಯೇ ಈ ವಿಡಿಯೋ ಕನೌಜ್ ಪೊಲೀಸರ ಗಮನಕ್ಕೆ ಬಂದಿದೆ.  ಪೊಲೀಸರು ತನಿಖೆ ಆರಂಭಿಸಿದ್ದರು. ಸದ್ಯ ಸಲೂನ್ ಓನರ್ ಅಂಗಡಿ ಮುಚ್ಚಿ ತಲೆಮರೆಸಿಕೊಂಡಿದ್ದಾರೆ.

ಈ ವಿಡಿಯೋವನ್ನು 15 ದಿನಗಳ ಹಿಂದೆ ಸಾಮಾಜಿಕ ಜಾಲತಾಣಗಳಲ್ಲಿ ಹಾಕಿರುವುದು ಪೊಲೀಸರ ತನಿಖೆಯಿಂದ ತಿಳಿದುಬಂದಿದೆ. ಇದನ್ನು ಸ್ವತಃ ಸಲೂನ್‌ನ ಕೆಲಸಗಾರನೇ ತನ್ನ ಮೊಬೈಲ್‌ನಿಂದ ವಿಡಿಯೋ ತೆಗೆದು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿದ್ದಾನೆ. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ಈ ವಿಡಿಯೋಗೆ ಆ ಭಾಗದ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಆರೋಪಿ ಸಲೂನ್ ಕ್ಷೌರಿಕನ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.

ಸಲೂನ್ ಮಾಲೀಕ ತಲೆಮರೆಸಿಕೊಂಡಿದ್ದಾನೆ. ಹೀಗಾಗಿ ಆತನಿಗಾಗಿ ಪೊಲೀಸರು ನಿರಂತರ ಹುಡುಕಾಟ ನಡೆಸುತ್ತಿದ್ದಾರೆ. ಈ ಹಿಂದೆಯೂ ಇಂತಹ ಹಲವು ಪ್ರಕರಣಗಳು ಬೆಳಕಿಗೆ ಬಂದಿರುವುದು ಗೊತ್ತಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net