ವಿವಿಧ ಕ್ಷೇತ್ರದಲ್ಲಿ ಬಂಟ ಸಮುದಾಯ ಸಾಧನೆ

bunts
ಬಂಟರ ಸಂಘ ಮಹಿಳಾ ವಿಭಾಗದಿಂದ ಏರ್ಪಡಿಸಿದ್ದ ರಾಷ್ಟ್ರೀಯ ವೈದ್ಯರ ದಿನಾಚರಣೆಯಲ್ಲಿ ಹಿರಿಯ ವೈದ್ಯರನ್ನು ಸನ್ಮಾನಿಸಲಾಯಿತು. ಡಾ. ಎ.ಸತೀಶ್‌ಕುಮಾರ್ ಶೆಟ್ಟಿ, ಪುಷ್ಪಾ ಶೆಟ್ಟಿ, ಎಂ.ಕೆ.ಸುರೇಶ್‌ಕುಮಾರ್, ಡಾ. ಅಮಿತಾ ಹೆಗ್ಡೆ, ಕಿಲಕಾ ಮಧುಸೂದನ್ ಇತರರಿದ್ದರು.
Published on

ಶಿವಮೊಗ್ಗ: ಬಂಟ ಸಮುದಾಯ ಕರಾವಳಿಯಿಂದ ಮಲೆನಾಡಿಗೆ ಬಂದು ಆರೇಳು ದಶಕಗಳಿಂದ ಇಲ್ಲಿಯೇ ನೆಲೆಸಿ, ಆರೋಗ್ಯ, ಹೋಟೆಲ್, ಬ್ಯಾಂಕಿಂಗ್ ಮತ್ತಿತರ ಕ್ಷೇತ್ರಗಳಲ್ಲಿ ಪರಿಪೂರ್ಣವಾಗಿ ತೊಡಗಿಸಿಕೊಂಡಿದೆ ಎಂದು ಬಂಟರು ಯಾನೆ ನಾಡವರ ಸಂಘ ಶಿವಮೊಗ್ಗ ಘಟಕದ ಅಧ್ಯಕ್ಷ ಡಾ. ಎ.ಸತೀಶ್‌ಕುಮಾರ್ ಶೆಟ್ಟಿ ಹೇಳಿದರು.

ಬಂಟರ ಭವನದಲ್ಲಿ ಸಂಘದ ಮಹಿಳಾ ವಿಭಾಗದಿಂದ ಏರ್ಪಡಿಸಿದ್ದ ರಾಷ್ಟ್ರೀಯ ವೈದ್ಯರ ದಿನಾಚರಣೆಯಲ್ಲಿ ಮಾತನಾಡಿದ ಅವರು, ಕರಾವಳಿಯಿಂದ ಬಂದಿರುವ ಬಂಟರು ಮಲೆನಾಡಿನಲ್ಲಿ ವಿಶ್ವಾಸ ಗಳಿಸಿದ್ದಾರೆ. ನಮ್ಮ ಸಮಾಜದ ಅನೇಕರು ಪ್ರತಿಷ್ಠಿತ ಆಸ್ಪತ್ರೆಗಳಲ್ಲಿ ಸೇವೆ ಸಲ್ಲಿಸುತ್ತಿರುವುದು ಶ್ಲಾಘನೀಯ ಎಂದರು.
ವೈದ್ಯರ ದಿನಾಚರಣೆ ಅಂಗವಾಗಿ 35 ಮಂದಿ ವೈದ್ಯರನ್ನು ಸನ್ಮಾನಿಸಲಾಯಿತು. ಬಂಟರ ಸಂಘ ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪಾ ಎಸ್. ಶೆಟ್ಟಿ, ಪ್ರಮುಖರಾದ ಎಂ.ಕೆ.ಸುರೇಶ್‌ಕುಮಾರ್, ದಿವಾಕರ ಶೆಟ್ಟಿ, ಮಹೇಶ್ ಶೆಟ್ಟಿ, ರಾಜೀವ್ ಶೆಟ್ಟಿ, ಡಾ. ಅಮಿತಾ ಹೆಗ್ಡೆ, ಪ್ರಭಾವತಿ ಎಸ್. ಶೆಟ್ಟಿ, ಕಿಲಕಾ ಎಂ.ಮಧುಸೂದನ್, ವಾತ್ಸಲ್ಯಾ ಎಸ್. ಶೆಟ್ಟಿ , ಜ್ಯೋತಿ ಡಿ. ಶೆಟ್ಟಿ, ಶ್ರುತಿ ಎಂ. ಶೆಟ್ಟಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net