ರಾಜಕೀಯ ದ್ವೇಷಕ್ಕೆ ಬ್ಯಾಂಕ್​ ಅವನತಿ

kadagatur sfcs
ಕೋಲಾರ ತಾಲೂಕಿನ ಕಡಗಟ್ಟೂರು ವಿವಿಧೋದ್ದೇಶ ಪ್ರಾಥಮಿಕ ಕೃಷಿ ಗ್ರಾಮೀಣ ಸಂದಿಂದ ಗುರುವಾರ ಮಹಿಳಾ ಸಂಗಳ ಸದಸ್ಯರಿಗೆ ಸಾಲ ವಿತರಣೆ ಮಾಡಲಾಯಿತು.
Published on

ಕೋಲಾರ: ರಾಜಕೀಯ ದ್ವೇಷದಿಂದ ಡಿಸಿಸಿ ಬ್ಯಾಂಕ್​ ಅವನತಿಯತ್ತ ಸಾಗುತ್ತಿದೆ. ಇದರ ಹಿಂದೆ ಕಾಣದ ಕೈಗಳು ಕೆಲಸ ಮಾಡುತ್ತಿದ್ದು, ವೈಯತ್ತಿಕ ದ್ವೇಷ ಇದ್ದರೆ ಚುನಾವಣೆಗಳಲ್ಲಿ ನೋಡಿಕೊಳ್ಳಬೇಕು ಎಂದು ತಾಲೂಕಿನ ಕಡಗಟ್ಟೂರು ವಿವಿಧೋದ್ದೇಶ ಪ್ರಾಥಮಿಕ ಕೃಷಿ ಗ್ರಾಮೀಣ ಸಂದ ಅಧ್ಯಕ್ಷ ಕೆ.ವಿ.ದಯಾನಂದ ಹೇಳಿದರು.

ತಾಲೂಕಿನ ಕಡಗಟ್ಟೂರು ವಿವಿಧೋದ್ದೇಶ ಪ್ರಾಥಮಿಕ ಕೃಷಿ ಗ್ರಾಮೀಣ ಸಂದಿಂದ ಗುರುವಾರ ಹಮ್ಮಿಕೊಂಡಿದ್ದ 16 ಮಹಿಳಾ ಸ್ವಸಹಾಯ ಸಂಗಳಿಗೆ ತಲಾ 5 ಲಕ್ಷ ರೂ. ನವೀಕೃತ ಸಾಲದ ಚೆಕ್​ ವಿತರಿಸಿ ಮಾತನಾಡಿ, ಮಹಿಳಾ ಸದಸ್ಯರು ಪ್ರಮಾಣಿಕವಾಗಿ ಮರುಪಾವತಿ ಮಾಡಿರುವ ಹಿನ್ನೆಲೆಯಲ್ಲಿ ಸೋಸೈಟಿಯು ಸ್ವಂತ ಬಂಡವಾಳದಿಂದ 16 ಸಂಕ್ಕೆ 80 ಲಕ್ಷ ರೂ. ಸಾಲ ನೀಡಲಾಗುತ್ತಿದೆ ಎಂದರು.

ಮಹಿಳಾ ಸಂಗಳು ಎರಡೂ ಜಿಲ್ಲೆಯಲ್ಲಿ ಸೇರಿ 26,000 ಇದ್ದವು, ನೀಡಲಾಗಿರುವ ಸಾಲ ವಸೂಲಿಯಾಗುತ್ತಿಲ್ಲ, ಇದರಿಂದಾಗಿ ಹೊಸ ನೀಡಲು ತೊಂದರೆಯಾಗುತ್ತಿದೆ. ಇದಕ್ಕೆಲ್ಲ ಬ್ಯಾಂಕಿನ ಕೆಲ ಅಧಿಕಾರಿಗಳು ಹಾಗೂ ಕೆಲ ಸೊಸೈಟಿ ಸಿಬ್ಬಂದಿ ನೇರ ಕಾರಣರಾಗಿದ್ದಾರೆ ಎಂದು ದೂರಿದರು.

ಡಿಸಿಸಿ ಬ್ಯಾಂಕಿನ ಆಡಳಿತ ಮಂಡಳಿ ಅಧಿಕಾರದಲ್ಲಿದ್ದಾಗ ಶೇ.90 ಸಾಲ ವಸೂಲಿ ಆಗುತ್ತಿತ್ತು, ಆದರೆ ಈಗ ವಸೂಲಿಯು ಹಳಿ ತಪ್ಪಿದೆ, ಇದಕ್ಕೆಲ್ಲ ಅಧಿಕಾರಿಗಳು ಕಾರಣರಾಗಿದ್ದಾರೆ. ಬ್ಯಾಂಕಿನ ಚುನಾವಣೆಯಲ್ಲಿ ಸಕಾಲಕ್ಕೆ ನಡೆಸಿದ್ದರೆ ಈ ಸಮಸ್ಯೆ ಉದ್ಬವಿಸುತ್ತಿರಲಿಲ್ಲ ಎಂದು ತಿಳಿಸಿದರು.

ಚುನಾವಣೆ ನಡೆಸಲು ರಾಜಕೀಯ ದ್ವೇಷ, ಅಸೂಯೆ ಕಾರಣ. ಸೊಸೈಟಿಗಳಲ್ಲಿ ಭ್ರಷ್ಟಾಚಾರ ನಡೆಸಲು ಕಾರಣರಾಗಿರುವವರ ವಿರುದ್ಧ ಕ್ರಿಮಿನಲ್​ ಪ್ರಕರಣ ದಾಖಲಿಸಿ, ಕ್ರಮಕೈಗೊಂಡರೆ ವ್ಯವಸ್ಥೆ ಸರಿಪಡಿಸಬಹುದು. ಆದರೆ ರಾಜಕೀಯ ಮೇಲಾಟಗಳಿಗೆ ಬ್ಯಾಂಕ್​ ಬಲಿಯಾಗುತ್ತಿದೆ ಎಂದು ಕಿಡಿಕಾರಿದರು.

ಬ್ಯಾಂಕಿನಲ್ಲಿ ತಪು$್ಪ ಮಾಡಿ ಸಿಕ್ಕಾಕಿಕೊಂಡು ಅಮಾನತು ಆಗಿರುವ ಅಧಿಕಾರಿಗಳನ್ನು ಅದೇ ಜಾಗದಲ್ಲಿ ಮುಂದುವರಿಸಿದ್ದು, ತಪು$್ಪ ಮಾಡುವ ಸಾಧ್ಯತೆ ಇರುತ್ತದೆ. ಅವರನ್ನು ಬೇರೆ ಬೇರೆ ಶಾಖೆಗಳಿಗೆ ವರ್ಗಾವಣೆ ಮಾಡಬೇಕು. ತಪು$್ಪ ಮಾಡಿರುವವರಿಗೆ ಪೊಲೀಸ್​ ರುಚಿ ತೋರಿಸಬೇಕು ಎಂದರು.

ರಾಜ್ಯ ಹಾಗೂ ನಬಾರ್ಡ್​ ಬ್ಯಾಂಕಿನಿಂದ ಬರುವ ಇಂಟ್ರಸ್ಟ್​ ರಿಸಿವಲ್​ ಹೆಡ್​ ಇಟ್ಟುಕೊಂಡು ಅಜೆಸ್ಟ್​ ಮೆಂಟ್​ ಮಾಡಿರುವುದು ಹಗರಣಕ್ಕೆ ಕಾರಣವಾಗಿದೆ ಎಂದರೆ ತಪ್ಪಾಗದು. ಹೆಡ್​ ವಹಿವಾಟು ನಡೆಸುವುದನ್ನು ನಿಲ್ಲಿಸಬೇಕು. ಸಿಬ್ಬಂದಿಯ ಪ್ರಮಾಣಿಕ ಹಾಗೂ ರೈತರ, ಮಹಿಳೆಯರ ಸಹಕಾರದಿಂದ ಈ ಭಾಗಕ್ಕೆ ಮೈಕ್ರೋ ೈನಾನ್ಸ್​ಗಳು ನುಸುಳಲು ಬಿಟ್ಟಿಲ್ಲ ಎಂದರು.

ಸಂದ ಅಧ್ಯಕ್ಷ ಕೆ.ವಿ.ದಯಾನಂದ, ಉಪಾಧ್ಯಕ್ಷ ಮಂಜುನಾಥ್​. ನಿರ್ದೇಶಕರಾದ ರಮೇಶ್​, ಕುರಗಲ್​ ನಾರಾಯಣಮ್ಮ, ಸುಳದೇನಹಳ್ಳಿ ನಾರಾಯಣಮ್ಮ, ಮುನಿಕೃಷ್ಣ, ಎಂ.ಡೇವಿಡ್​, ಕುಮಾರ ಆಚಾರಿ, ಎಂ.ಬೈಯಣ್ಣ, ಎಂ.ವಿ.ಮಂಜುನಾಥ, ಬಿ.ಎಂ.ರಾಮೇಗೌಡ, ಸಿ.ಡಿ.ರಾಮಚಂದ್ರ, ಸಿಇಒ ಮುನೀಶ್ವರಪ್ಪ, ಸಿಂಧು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net