ಬ್ಯಾಂಕಿಂಗ್ ಪರೀಕ್ಷೆ ಬರೆಯಬೇಕಿದ್ದ ಯುವತಿ ಆಸ್ಪತ್ರೆಗೆ !

17 smg 4
Published on

ಶಿವಮೊಗ್ಗ: ಅಂದುಕೊಂಡಂತೆ ಆಗಿದ್ದರೆ ಆಕೆ ಬ್ಯಾಂಕಿಂಗ್ ಪರೀಕ್ಷೆ ಬರೆದು ಮನೆ ಸೇರಬೇಕಿತ್ತು. ಆದರೆ ಮುಂಜಾನೆಯೇ ಎದ್ದು ಪರೀಕ್ಷೆ ಬರೆಯಲು ಹೊರಟ ಯುವತಿ ತನ್ನದಲ್ಲದ ತಪ್ಪಿನಿಂದ ಅಪಘಾತದಲ್ಲಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗುವಂತಾಗಿದೆ.

ಇದು ಸಾಗರ ತಾಲೂಕು ವಾಡಂಬೈಲು ಗ್ರಾಮದ ವಿನುತಾ ಅವರ ನೋವಿನ ಕಥೆ. ಪರಿಚಯಸ್ಥ ಸತೀಶ್ ಅವರ ಓಮ್ನಿಯಲ್ಲಿ ಸಾಗರದಿಂದ ಚಿಕ್ಕಮ್ಮ ಲತಾ ಮತ್ತು ಸಹೋದರಿ ವರ್ಷಾ ಜತೆ ಶನಿವಾರ ಬೆಳಗ್ಗೆಯೇ ಹೊರಟಿದ್ದರು. ಆದರೆ ಚೋರಡಿ ಸಮೀಪದ ಹೆಗ್ಗೇರಿ ಬಳಿ ಕೆಎಸ್‌ಆರ್‌ಟಿಸಿ ಬಸ್ ಮತ್ತು ಓಮ್ನಿ ನಡುವೆ ಅಪಘಾತವಾಗಿದ್ದು ಓಮ್ನಿಯಲ್ಲಿದ್ದ ವಿನೂತಾ ಸೇರಿ ನಾಲ್ವರೂ ಗಾಯಗೊಂಡು ಮೆಗ್ಗಾನ್ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಶಿವಮೊಗ್ಗದಿಂದ ಸಾಗರ ಕಡೆ ಹೊರಟಿದ್ದ ಬಸ್ ಟೆಂಪೋ ಟ್ರಾವೆಲರ್ ಹಿಂದಿಕ್ಕುವ ಯತ್ನದಲ್ಲಿ ಸಾಗರದಿಂದ ಶಿವಮೊಗ್ಗಕ್ಕೆ ಬರುತ್ತಿದ್ದ ಒಮ್ನಿಗೆ ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ಕಾರು ಚಾಲನೆ ಮಾಡುತ್ತಿದ್ದ ಸತೀಶ್‌ಗೆ ಕಾಲು ಮುರಿದಿದೆ. ವಿನುತಾ ಅವರಿಗೆ ಮುಖಕ್ಕೆ ಪೆಟ್ಟುಬಿದ್ದಿದೆ. ಹಿಂಬದಿಯಲ್ಲಿ ಕುಳಿತಿದ್ದ ವರ್ಷ ಮತ್ತು ಲತಾ ಅವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಬ್ಯಾಂಕಿಂಗ್ ಪರೀಕ್ಷೆ ಬರೆಯಬೇಕು ಎಂಬ ಕನಸು ಕಂಡಿದ್ದ ವಿನೂತಾ ದುರಾದೃಷ್ಟವಶಾತ್ ಆಸ್ಪತ್ರೆಗೆ ಸೇರುವಂತಾಗಿದೆ. ಕುಂಸಿ ಠಾಣೆ ವ್ಯಾಪ್ತಿಯಲ್ಲಿ ಅಪಘಾತ ನಡೆದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net