ಬ್ಯಾಂಕ್ ಆ್ ಬರೋಡಾದ ಜಾಗತಿಕ ಬ್ರಾಂಡ್ ಅಂಬಾಸಿಡರ್ ಸಚಿನ್ ತೆಂಡೂಲ್ಕರ್

Published on

ಮುಂಬಯಿ:
ವಿಶಾಲ ಅಂತಾರಾಷ್ಟ್ರೀಯ ವ್ಯಾಪಕತೆ ಹೊಂದಿರುವ ಬ್ಯಾಂಕ್ ಆ್ ಬರೋಡಾ, ಭಾರತದ ಅತ್ಯಂತ ವಿಶ್ವಾಸಾರ್ಹ ಬ್ಯಾಂಕ್‌ಗಳಲ್ಲಿ ಒಂದಾಗಿದೆ. ಕ್ರಿಕೆಟ್‌ನ ದಂತಕಥೆ ಸಚಿನ್ ತೆಂಡೂಲ್ಕರ್ ಅವರನ್ನು ಬ್ಯಾಂಕ್ ಆ್ ಬರೋಡಾದ ಜಾಗತಿಕ ಬ್ರಾಂಡ್ ಅಂಬಾಸಿಡರ್ ಆಗಿ ೋಷಣೆ ಮಾಡಲಾಗಿದೆ. ಬ್ಯಾಂಕ್ ತೆಂಡಲ್ಕೂರ್ ಮೂಲಕವೇ ಆರ್ಥಿಕ ವಹಿವಾಟು ವಿಸ್ತ್ತಾರ ಮಾಡಲು ಮಾಸ್ಟರ್ ಸ್ಟ್ರೋಕ್ ಪ್ರಾರಂಭಿಸುತ್ತಿದೆ.
ಬ್ಯಾಂಕಿನ ಬ್ರ್ಯಾಂಡಿಂಗ್ ಪ್ರಚಾರಗಳು, ಗ್ರಾಹಕ ಶಿಕ್ಷಣ, ಆರ್ಥಿಕ ಸಾಕ್ಷರತೆ ಕುರಿತು ಜಾಗೃತಿ ಕಾರ್ಯಕ್ರಮಗಳು ಸೇರಿದಂತೆ ಹಲವು ಕಾರ್ಯಕ್ರಮಗಳಿಗೆ ಸಚಿನ್ ತೆಂಡೂಲ್ಕರ್ ಬ್ರಾಂಡ್ ಅಂಬಾಸಿಡರ್ ಆಗಿ ಬ್ಯಾಂಕ್‌ನ್ನು ಅಂತರಾಷ್ಟ್ರೀಯ ಮಟ್ಟದಲ್ಲಿಯೂ ಉನ್ನತ್ತೀಕರಣ ಮಾಡಲು ಸೇವೆ ಸಲ್ಲಿಸಲಿದ್ದಾರೆ.
ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ದೇಬದತ್ತ ಚಂದ್ ಮಾತನಾಡಿ, ತೆಂಡಲ್ಕೂರ್ ಕ್ರಿಕೆಟ್ ಮೈದಾನದ ಒಳಗೆ ಮತ್ತು ಹೊರಗೆ ಅವರ ಕಾರ್ಯಗಳ ಮೂಲಕ ನಮಗೆ ಸ್ಫೂರ್ತಿಯಾಗಿದ್ದರು. ಬ್ಯಾಂಕ್ ಆ್ ಬರೋಡಾಗೆ ಜಾಗತಿಕ ಬ್ರ್ಯಾಂಡ್ ರಾಯಭಾರಿಯಾಗಿರುವುದು ಅತ್ಯಂತ ಹೆಮ್ಮೆಯ ಕ್ಷಣವಾಗಿದೆ ಎಂದರು.
ದೇಶಾದ್ಯಂತ ಲಕ್ಷಾಂತರ ಜನರಿಗೆ ಬ್ಯಾಂಕ್ ವಿಶ್ವಾಸಾರ್ಹ ಪಾಲುದಾರನಾಗಿದೆ. ನಂಬಿಕೆ, ಸ್ಥಿರತೆ ಮತ್ತು ತಲೆಮಾರುಗಳನ್ನು ಮೀರಿದ ಪರಂಪರೆ - ಮೌಲ್ಯಗಳನ್ನು ಕಾಪಾಡಿಕೊಂಡು ಬಂದಿದೆ.
ಬ್ಯಾಂಕ್‌ನ ಶತಮಾನದ ಸುದೀರ್ಘ ಪಯಣದಲ್ಲಿ ಸಚಿನ್ ಪಾಲುದಾರಿಕೆ ಹೊಂದಿರುವುದು ಹೆಮ್ಮೆಯ ಸಂಗತಿ ಎಂದರು.
ಬ್ರಾಂಡ್ ಅಂಬಾಸಿಡರ್, ಸಚಿನ್ ತೆಂಡೂಲ್ಕರ್ ಮಾತನಾಡಿ, ಬ್ಯಾಂಕ್ ಆ್ ಬರೋಡಾ
ಜೊತೆ ಪಾಲುದಾರಿಕೆ ಹೊಂದಲು ನನಗೆ ಸಂತೋಷವಾಗಿದೆ ಎಂದರು.
ಬರೋಡಾ ಸಂಸ್ಥೆಯು ವಿಕಸನಗೊಂಡಿತು ಮತ್ತು ಕಾಲಕ್ಕೆ ಪ್ರಸ್ತುತವಾಗಿದೆ. ಒಂದು ಶತಮಾನದ ಹಿಂದೆ ಪ್ರಾರಂಭವಾದ ಬ್ಯಾಂಕ್, ಇಂದು ಪ್ರಮುಖ ಬ್ಯಾಂಕಿಂಗ್ ಸಂಸ್ಥೆಯಾಗಿ ಬೆಳೆದಿರುವುದು ಸಂತೋಷದ ಸಂಗತಿ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net