ಮುಂಬೈ:
ಭಾರತ ಸರ್ಕಾರವು ಸ್ವಚ್ಛತಾ ಹಿ ಸೇವಾ 2024 ಅನ್ನು ಆಚರಿಸುತ್ತಿದ್ದು, ಸೆ.14 ರಿಂದ 1 ರವರೆಗೆ ಸ್ವಭಾವ ಸ್ವಚ್ಛತಾ- ಸಂಸ್ಕಾರ ಸ್ವಚ್ಛತಾ ವಿಷಯದೊಂದಿಗೆ ಅಭಿಯಾನ ನಡೆಸಲಾಯಿತು.
ಗಾಂಧಿ ಜಯಂತಿಯಂದು ಸ್ವಚ್ಛ ಭಾರತ್ ದಿವಸ್ ಅಂಗವಾಗಿ ಕೊಳಕು ತಾಣಗಳನ್ನು ಸ್ವಚ್ಛ ಮಾಡುವ ಮೂಲಕ ಸ್ವಚ್ಛತಾ ಅಭಿಯಾನ ಮಾಡಲಾಯಿತು.
ಬ್ಯಾಂಕ್ ಆ್ ಬರೋಡಾ, ಸ್ವಚ್ಛ ಮತ್ತು ಹಸಿರು ಪರಿಸರ ಬಗ್ಗೆ ಬದ್ಧತೆಯನ್ನು ಹೊಂದಿದ್ದು, ರಾಷ್ಟ್ರವ್ಯಾಪಿ ಅಭಿಯಾನ ನಡೆಸಿದೆ.
ಪ್ಲಾಂಟೇಶನ್ ಡ್ರೈವ್‌ಗಳು, ವಾಕಥಾನ್‌ಗಳು ಮತ್ತು ಆರೋಗ್ಯ, ಸಫಾಯಿ ಮಿತ್ರರಿಗೆ ಕಲ್ಯಾಣ ಶಿಬಿರಗಳನ್ನು ಹಮ್ಮಿಕೊಂಡಿತ್ತು.
ದೇಶಾದ್ಯಂತ ತನ್ನ ಕಚೇರಿಗಳು ಮತ್ತು ಶಾಖೆಗಳಲ್ಲಿ ಸೇವೆಗೈದವರ ಅಮೂಲ್ಯ ಕೊಡುಗೆಗಳನ್ನು ಗುರುತಿಸಸಲಾಯಿತು. ಶ್ರಮದಾನದ ಮೂಲಕ ಸಂಪೂರ್ಣ ಸ್ವಚ್ಛತಾ ಕಾರ್ಯಕ್ರಮ ಆಯೋಜಿಸುವ ಮೂಲಕ ಗಮನ ಸೆಳೆಯಿತು.
ಈ ಅಭಿಯಾನದ ಸಮಯದಲ್ಲಿ ಬ್ಯಾಂಕ್ ಏಕ ಗವಾಕ್ಷಿಗಾಗಿ ಸಫಾಯಿಮಿತ್ರ ಸುರಕ್ಷಾ ಶಿಬಿರವನ್ನು
ಆರೋಗ್ಯ ರಕ್ಷಣೆಗಾಗಿ ಆರೋಗ್ಯ ಮತ್ತು ಕಲ್ಯಾಣ ಶಿಬಿರಗಳನ್ನು ಏರ್ಪಡಿಸುತ್ತಿದೆ. ಮುಂಬೈನಲ್ಲಿರುವ ಕಾರ್ಪೊರೇಟ್ ಕಚೇರಿಯಲ್ಲಿ ನೈರ್ಮಲ್ಯ ಕಾರ್ಮಿಕರ ತಪಾಸಣೆ ಶಿಬಿರವನ್ನು ಏರ್ಪಡಿಸಲಾಗಿತ್ತು.
ಬ್ಯಾಂಕ್ ಆ್ ಬರೋಡಾದ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ದೇಬದತ್ತ ಚಂದ್, ಕಾರ್ಯನಿರ್ವಾಹಕ ನಿರ್ದೇಶಕರಾದ ಲಾಲ್ ಸಿಂಗ್ ಮತ್ತು ಬೀನಾ ವಹೀದ್, ಮುಖ್ಯ ವಿಜಿಲೆನ್ಸ್ ಅಧಿಕಾರಿ, ಸುರೇಂದ್ರ ಕುಮಾರ್ ದೀಕ್ಷಿತ್ ಇತರ ಹಿರಿಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು
ಸ್ವಚ್ಛತಾ ಆಂದೋಲನದಲ್ಲಿ ಭಾಗವಹಿಸಿದ್ದರು.
ಸಂಪೂರ್ಣ ಸ್ವಚ್ಛತಾ ನೈರ್ಮಲ್ಯ ಕಾರ್ಮಿಕರ ಕೊಡುಗೆಯನ್ನು ಗುರುತಿಸುವ ಭಾಗವಾಗಿ
ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೊರೇಷನ್‌ನ್ನು ಅತ್ಯುತ್ತಮ ಘನತ್ಯಾಜ್ಯ ನಿರ್ವಹಣಾ ವಿಭಾಗದಲ್ಲಿ ಬ್ಯಾಂಕ್ ವತಿಯಿಂದ ಸನ್ಮಾನಿಸಲಾಯಿತು.