ಬಾಂಗ್ಲಾದೇಶಿ ಸ್ಮಗ್ಲರ್​​ನನ್ನು ಹೊಡೆದುರುಳಿಸಿದ ಬಿಎಸ್​ಎಫ್​

BSF
Published on

ಪಶ್ಚಿಮ ಬಂಗಾಳದ ಅಂತಾರಾಷ್ಟ್ರೀಯ ಗಡಿ ಬಳಿ ಬಾಂಗ್ಲಾದೇಶದ ಸ್ಮಗ್ಲರ್​ನನ್ನು ಗಡಿ ಭದ್ರತಾ ಪಡೆ ಶೂಟ್​ ಮಾಡಿ, ಹತ್ಯೆ ಮಾಡಿದೆ.

ಮಾಲ್ಡಾ ಜಿಲ್ಲೆಯ ಗೋಪಾಲ್​ಪುರ ಪೋಸ್ಟ್​ ಬಳಿ ಶನಿವಾರ ಸಂಜೆ ಬಾಂಗ್ಲಾದೇಶಿ ಸ್ಮಗ್ಲರ್​​ನ ಹತ್ಯೆ ಮಾಡಲಾಗಿದೆ ಎಂದು ಬಿಎಸ್​ಎಫ್​ ತಿಳಿಸಿದೆ. ಈತ ಪೆನ್ಸೆಡಿಲ್​ ಬಾಟಲಿಗಳನ್ನು ಕಳ್ಳಸಾಗಣೆ ಮಾಡುತ್ತಿದ್ದ. ಆತನಿಂದ ಸುಮಾರು 75 ಬಾಟಲಿಗಳನ್ನು ವಶಪಡಿಸಿಕೊಳ್ಳಲಾಗಿದೆ.

ಪೆನ್ಸೆಡಿಲ್​ ಕೆಮ್ಮು ನಿವಾರಕ ಔಷಧಿಯಾಗಿದ್ದರೂ ಇದು ಮಾದಕ ವಸ್ತುಗಳ ಅಂಶಗಳನ್ನೊಳಗೊಂಡಿದೆ ಎಂದು ನಿಷೇಧಿಸಲಾಗಿದೆ. ಆದಾಗ್ಯೂ ಬಾಂಗ್ಲಾ ಗಡಿಯಲ್ಲಿ ಇದರ ಸ್ಮಗ್ಲಿಂಗ್​ ವ್ಯಾಪಕವಾಗಿ ನಡೆಯುತ್ತಿದೆ ಎನ್ನಲಾಗಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net