ಬಾಂಗ್ಲಾದೇಶದಲ್ಲಿ ಹಿಂದುಗಳಿಗೆ ರಕ್ಷಣೆ ಒದಗಿಸಿ; ಸ್ಥಳಿಯ ನಾಗರಿಕರಿಂದ ಮನವಿ ಸಲ್ಲಿಕೆ

oplus_0
oplus_0
Published on

ರಾಣೆಬೆನ್ನೂರ: ಬಾಂಗ್ಲಾದೇಶದ ಅಮಾಯಕ ಹಿಂದುಗಳ ಮೇಲೆ ಕೊಲೆ, ಅತ್ಯಾಚಾರ ಹಾಗೂ ಮಂದಿರಗಳನ್ನು ಹಾಳು ಮಾಡುವುದನ್ನು ತಡೆಯುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಇಲ್ಲಿಯ ರಾಣೆಬೆನ್ನೂರ ನಾಗರಿಕರ ವೇದಿಕೆ ವತಿಯಿಂದ ಗುರುವಾರ ತಹಸೀಲ್ದಾರ್​ ಆರ್​.ಎಚ್​. ಭಾಗವಾನ್​ ಮೂಲಕ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ಬಾಂಗ್ಲಾದೇಶದಲ್ಲಿ ಕಾನೂನು ಸುವ್ಯವಸ್ಥೆ ಸಂರ್ಪೂಣ ಹಾಳಾಗಿ ಹೋಗಿದೆ. ಇದರಿಂದ ಹಿಂದುಗಳ ಮೇಲೆ ಕೊಲೆ, ಅತ್ಯಾಚಾರದಂತಹ ಹಿಂಸೆ ಅಧಿಕವಾಗಿವೆ. ಹಿಂದುಗಳ ಅವ್ಯವಸ್ಥೆಯನ್ನು ಸಹಿಸಲು ಅಸಾಧ್ಯವಾಗುತ್ತಿಲ್ಲ. ಬಾಂಗ್ಲಾದೇಶ ಒಂದು ಜಾತ್ಯಾತಿತ ರಾಷ್ಟ್ರ ವಿದ್ದು, ಕಟ್ಟರ್​ ಮುಸ್ಲಿಮರು ಈ ರೀತಿ ಹಿಂದುಗಳ ಮೇಲೆ ದೌರ್ಜನ್ಯ ಎಸಗುತ್ತಿರುವುದು ಅಕ್ಷಮ್ಯ ಅಪರಾಧವಾಗಿದೆ.
ಆದ್ದರಿಂದ ಕೇಂದ್ರ ಸರ್ಕಾರ ಕೂಡಲೇ ಈ ಬಗ್ಗೆ ಕ್ರಮ ಜರುಗಿಸಿ ದೌರ್ಜನ್ಯಕ್ಕೆ ಒಳಗಾದ ಹಿಂದುಗಳನ್ನು ರಕ್ಷಣೆ ಮಾಡಬೇಕು. ದೇಶದ ಕಾನೂನಿನಡಿ ಅವರನ್ನು ಭಾರತಕ್ಕೆ ಕರೆ ತರಬೇಕು. ಅಲ್ಲದೆ ದೇಶದ ಗಡಿ ಪ್ರದೇಶವನ್ನು ಇನ್ನಷ್ಟು ಭದ್ರಗೊಳಿಸಿ ನುಸುಳುಕೋರರಿಂದ ರಕ್ಷಣೆ ನೀಡಬೇಕು ಎಂದು ಆಗ್ರಹಿಸಿದರು.
ವರ್ತಕರ ಸಂಘದ ಅಧ್ಯಕ್ಷ ಜಿ.ಜಿ. ಹೊಟ್ಟಿಗೌಡ್ರ, ನಗರಸಭೆ ಸದಸ್ಯ ನಾಗರಾಜ ಪವಾರ, ಮುಖಂಡರಾದ ನಾಗರಾಜ ಬಣಕಾರ, ಬಸವರಾಜ ಪಾಟೀಲ, ಪ್ರಭುಸ್ವಾಮಿ ಕರ್ಜಗಿಮಠ, ಎಂ.ಎಸ್​. ಪಟ್ಟಣಶೆಟ್ಟಿ, ಬಸವರಾಜ ಹುಲ್ಲತ್ತಿ, ನಾಗರಾಜ ಸಾಲಗೇರಿ, ಜಗದೀಶ ಎಲಿಗಾರ, ರಾಯಣ್ಣ ಮಾಕನೂರ, ಅಶೋಕ ಪಾಸಿಗಾರ, ಶಿವಕುಮಾರ ಹರ್ಕನಾಳ, ಮೈಲಪ್ಪ ಗೋಣಿಬಸಬಸಮ್ಮನವರ ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net