VIDEO: ಹುಬ್ಬೇರಿಸಿದ ಬ್ಯಾಂಕಾಕ್ ಶ್ವಾನ

Dogs villainous birthmark is raising some eyebrows
Published on

ಪ್ರತಿಯೊಬ್ಬ ಮನುಷ್ಯರೂ ಸಾಮಾನ್ಯವಾಗಿ ಒಂದೇ ರೀತಿಯಾಗಿದ್ದರೂ ಎಲ್ಲರಲ್ಲೂ ಅನನ್ಯವಾದ ವೈಶಿಷ್ಟ್ಯ ಇದ್ದೇ ಇದೆ. ಬ್ಯಾಂಕಾಕ್​ನಲ್ಲಿ ಜನಿಸಿದ ನಾಯಿಯೊಂದು ಇಂತಹ ಅನನ್ಯ ಕಾರಣಕ್ಕೇ ಸುದ್ದಿಯಾಗಿದೆ.

ಲಕ್ಕಿ ಎಂಬ ಹೆಸರಿನ ಎರಡು ವರ್ಷದ ಈ ನಾಯಿ ಡಿಸ್ನಿ ಸಿನಿಮಾದ ಖಳನಾಯಕನಂತಿದೆ. ಇದು ಬಲಗಣ್ಣಿನ ಮೇಲೆ ಉಬ್ಬಿರುವ ಹುಬ್ಬೊಂದನ್ನು ಹೊಂದಿದೆ. ‘ಅದು ಮೊದಲ ಬಾರಿ ಕಣ್ಣಿನ ಹುಬ್ಬನ್ನು ಏರಿಸಿದಾಗ ಇದು ಬಹಳ ವಿಶಿಷ್ಟವಾಗಿದೆ ಎಂದು ಭಾವಿಸಿದ್ದೆ. ನೀಲಿ ಕಣ್ಣುಗಳಿಂದಾಗಿ ಈ ನಾಯಿ ನೋಡಲು ಸೊಗಸಾಗಿದೆ ಎನಿಸಿದ್ದರಿಂದ ದತ್ತು ಪಡೆದೆ’ ಎನ್ನುತ್ತಾರೆ ಅದರ ಮಾಲೀಕ ನಾಟ್ನಿಚ.

‘ಭೂಮಿಗೆ ಬರಲು ಬಹಳ ಆತುರದಲ್ಲಿದ್ದ ಈ ನಾಯಿಗೆ ತನ್ನ ಕಣ್ಣಿನ ಹುಬ್ಬುಗಳನ್ನು ಪೂರ್ಣವಾಗಿ ಬರೆದುಕೊಳ್ಳಲಾಗಿಲ್ಲ’ ಎಂದು ಕೆಲವರು ಜಾಲತಾಣಗಳಲ್ಲಿ ತಮಾಷೆಯಾಗಿ ಪ್ರತಿಕ್ರಿಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net