

ಧಾರವಾಡ: ಧಾರವಾಡ-ಬೆಂಗಳೂರು ನಡುವಣ ವಂದೇ ಭಾರತ್ ರೈಲು ಪ್ರಯಾಣಕ್ಕೆ ಚಾಲನೆ ಹಿನ್ನೆಲೆ, ಕಲಾವಿದರೊಬ್ಬರು ರೈಲಿನ ಕಲಾಕೃತಿಯೊಂದನ್ನು ತಯಾರಿಸಿದ್ದಾರೆ. ಸದ್ಯ ಪ್ರಧಾನಿ ನರೇಂದ್ರ ಮೋದಿ ರೈಲಿಗೆ ಹಸಿರು ನಿಶಾನೆ ತೋರಿಸುತ್ತಿರುವ ಕಲಾಕೃತಿ ಗಮನಸೆಳೆಯುತ್ತಿದೆ.
ಧಾರವಾಡ ಕಲಾವಿದ ಮಂಜುನಾಥ ಹಿರೇಮಠ ಪುಟ್ಟ ವಂದೇ ಭಾರತ್ ರೈಲಿನ ಮಾದರಿಯೊಂದನ್ನು ಸಿದ್ಧಪಡಿಸಿದ್ದಾರೆ. ಜತೆಗೆ ಪ್ರಧಾನಿ ನರೇಂದ್ರ ಮೋದಿ ಅವರ ಪುಟ್ಟ ಪ್ರತಿಮೆ ಕೂಡ ತಯಾರಿಸಿದ್ದಾರೆ. ರೈಲಿನ ಕಲಾಕೃತಿ 'ಪುಟಾಣಿ ವಂದೇ ಭಾರತ್ ರೈಲು' ಎಂದು ಕರೆಸಿಕೊಳ್ಳುತ್ತಿದೆ.
ಪರಿಸರ ಸ್ನೇಹಿ ಮೂರ್ತಿ ಕಲಾವಿದ ಮಂಜುನಾಥ ಹಿರೇಮಠ ಥರ್ಮಾಕೋಲ್, ಫ್ಲೈವುಡ್ ತುಂಡು ಸೇರಿ ವಿವಿಧ ತ್ಯಾಜ್ಯಗಳನ್ನು ಬಳಸಿ, ಮೂರು ಇಂಚು ಎತ್ತರ, ಎರಡೂವರೆ ಅಡಿ ಉದ್ದದ ರೈಲಿನ ಕಲಾಕೃತಿ ರಚನೆ ಮಾಡಿದ್ದಾರೆ. ಸದ್ಯ ಕಲಾಕೃತಿಯ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ.