ಹೃದಯಾಘಾತದಿಂದ ಬೆಂಗಳೂರಿನ ಆಟೋ ಚಾಲಕ ಸಾವು

Bangalore auto driver dies of heart attack
Published on

ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಹೃದಯಾಘಾತಕ್ಕೆ ಚಿಕ್ಕವಯಸ್ಸಿನವರೇ ಬಲಿಯಾಗುತ್ತಿರುವುದು ಆತಂಕಕಾರಿ ಸಂಗತಿ ಆಗಿದೆ. ನೆನ್ನೆಯವರೆಗೂ ಚೆನ್ನಾಗಿದ್ದರವೂ ಇಂದು ಇನ್ನಿಲ್ಲ ಎಂಬ ಸುದ್ದಿಗಳು ಹೆಚ್ಚಾಗಿವೆ. ಇಂದು ಬೆಂಗಳೂರಿನಲ್ಲಿ ಹೃದಯಾಘಾತದಿಂದ ಆಟೋ ಚಾಲಕ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಡೆದಿದೆ.

ತಿಮ್ಮೇಶ್ ಮೃತ. ಈತ ಆಟೋ ಚಾಲಕನಾಗಿ ಕೆಲಸ ಮಾಡುತ್ತಿದ್ದನು. ಹೃದಯಾಘಾತದಿಂದ ಆಟೋ ಚಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಬೆಂಗಳೂರಿನ ಸಂಪಂಗಿ ರಾಮನಗರದಲ್ಲಿ ಈ ಘಟನೆ ನಡೆದಿದೆ.

ತಿಮ್ಮೇಶ್ ಟೀ ಕುಡಿಯಲು ಆಟೋ‌ ನಿಲ್ಲಿಸಿ ತೆರಳುತ್ತಿದ್ದನು. ಆಟೋದಿಂದಲೇ ಇಳಿಯುವಾಗ ಎದೆ ನೋವು ಕಾಣಿಸಿಕೊಂಡಿತ್ತು . ಎದೆಯನ್ನ ಸಾವರಿಸಿಕೊಳ್ಳುತ್ತ ಆಟೋದಿಂದ ತಿಮ್ಮೇಶ್ ಇಳಿದು ಹೋಗುವ ಕೊನೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಮೂಲತಃ ಮಂಡ್ಯ ಜಿಲ್ಲೆಯ ತಿಮ್ಮೇಶ್ ಬೆಂಗಳೂರಿನಲ್ಲಿ ಆಟೋ ಓಡಿಸಿಕೊಂಡು ಜೀವನ ನಡೆಸುತ್ತಿದ್ದನು. ಸಂಪಂಗಿ ನಗರ ಪೊಲೀಸ್ ಠಾಣ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net