

ಬೆಂಗಳೂರು: ಇವಿಎಂ ಬಳಸುವ ಮೂಲಕ ನಡೆದ ಚುನಾವಣೆಯಲ್ಲಿ ಗೆದ್ದಿರುವ ಸಿದ್ದರಾಮಯ್ಯ ಮತ್ತೆ ಬ್ಯಾಲೆಟ್ ಪೇಪರ್ ಬೇಕು ಎಂದು ಸಂಪುಟದಲ್ಲಿ ನಿರ್ಧಾರ ಮಾಡಿರುವುದು ಅತ್ಯಂತ ವಿಪರ್ಯಾಸ. ಇವಿಎಂ ಮೂಲಕ ಸಿಎಂ ಆಗಿರುವ ಸಿದ್ದರಾಮಯ್ಯ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿ ಬ್ಯಾಲೆಟ್ ಮೂಲಕ ಚುನಾವಣೆ ಎದುರಿಸಿ ಆರಿಸಿ ಬಂದು ಬ್ಯಾಲೆಟ್ ಪೇಪರ್ ಬಳಕೆಗೆ ಮುಂದಾಗಲಿ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಆಗ್ರಹಿಸಿದ್ದಾರೆ.
ಇವಿಎಂ ಮುಖಾಂತರವೇ ಎರಡು ಬಾರಿ ಸಿಎಂ ಆಗಿರುವ ಸಿದ್ದರಾಮಯ್ಯ ಅವರು ಯಾವ ಆಧಾರದ ಮೇಲೆ ಸಿಎಂ ಆಗಿದ್ದಾರೆ ಅದನ್ನೇ ಪ್ರಶ್ನಿಸುವ ರಾಜಕಿಯ ಅಧೋಪತನಕ್ಕೆ ಹೋಗಿದ್ದಾರೆ. ಅವರಿಗೆ ನೆನಪಿಸುತ್ತೇನೆ. ಕೊಪ್ಪಳದಲ್ಲಿ ಬ್ಯಾಲೆಟ್ ಪೇಪರ್ ಮೇಲೆ ನಡೆದ ಚುನಾವಣೆಯಲ್ಲಿಯೇ ಅವರು ಸೋತಿದ್ದಾರೆ.
ಇವಿಎಂ ಬಳಸುವ ಮೂಲಕ ನಡೆದ ಚುನಾವಣೆಯಲ್ಲಿ ಗೆದ್ದಿರುವ ಸಿದ್ದರಾಮಯ್ಯ ಮತ್ತೆ ಬ್ಯಾಲೆಟ್ ಪೇಪರ್ ಬೇಕು ಎಂದು ಸಂಪುಟದಲ್ಲಿ ನಿರ್ಧಾರ ಮಾಡಿರುವುದು ಅತ್ಯಂತ ವಿಪರ್ಯಾಸ.
ಯಾವ ಇವಿಎಂ ನಿಂದ ಗೆದ್ದಿದ್ದಾರೆ. ಈಗ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿ ಬ್ಯಾಲೆಟ್ ಮುಖಾಂತರ ಚುನಾವಣೆ ಎದುರಿಸಿ ಸಿಎಂ ಆಗಿ ಸ್ಥಳೀಯ ಸಂಸ್ಥೆಗಳಿಗೆ ಬ್ಯಾಲೆಟೆ ಮೂಲಕ ಚುನಾವಣೆ ನಡೆಸಿದರೆ ಅದಕ್ಕೊಂದು ಆಧಾರ ಇದೆ.
ಅದ್ಯಾವುದನ್ನೂ ಮಾಡದೇ ಕೇವಲ ರಾಹುಲ್ ಗಾಂಧಿ ಮೆಚ್ಚಿಸಲು ಮತ್ರು ಇಡೀ ದೇಶದಲ್ಲಿ ರಾಹುಲ್ ಗಾಂಧಿಯ ಸೋಲನ್ನು ಮುಚ್ಚಿ ಹಾಕಲು ಈ ಪ್ರಯತ್ಮ ಮಾಡಿದ್ದಾರೆ. ಮತ್ತು ರಾಜ್ಯ ಚುನಾವಣಾ ಆಯೋಗ ಇದಕ್ಕೆ ಸ್ಪಂದನೆ ಮಾಡಿರುವುದು ಕಾನೂನು ಬಾಹಿರ ಕೇಂದ್ರ ಚುನಾವಣಾ ಆಯೋಗ ರಾಜ್ಯ ಚುನಾವಣಾ ಆಯೋಗಕ್ಕೆ ಸ್ಪಷ್ಟವಾದ ನಿರ್ದೇಶನ ಕೊಡಬೇಕೆಂದು ಆಗ್ರಹಿಸಿದ್ದಾರೆ.
ಕೇಸ್ ವಾಪಸ್ ಖಂಡನೀಯ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪಿಎಫ್ಐ, ಎಸ್ ಡಿಪಿಐ ವಿರುದ್ಧದ ಪ್ರಕರಣ ವಾಪಸ್ ಪಡೆದು ಪುನರ್ ಆಯ್ಕೆಯಾಗಿದ್ದರು. ಎರಡನೇಯದಾಗಿ ಹುಬ್ಬಳ್ಳಿಯ ಪೊಲೀಸ್ ಠಾಣೆ ಮೇಲೆ ದಾಳಿ ಮಾಡಿದವರನ್ನು ಬಿಡುಗಡೆ ಮಾಡುವ ಕೆಲಸ ಮಾಡಿದ್ದರು.
ನಂತರ ಅಮಾಯಕರು ಎಂದು ಡಿಜೆ ಹಳ್ಳಿ ಕೆಜಿ ಹಳ್ಳಿಯಲ್ಲಿ ಗಲಭೆ ಮಾಡಿದವರ ವಿರುದ್ದದ ಪ್ರಕರಣ ವಾಪಸ್ ಪಡೆಯುವ ಪ್ರಯತ್ನ ಮಾಡಿದ್ದರು. ಕೋರ್ಟ್ ಅವರಿಗೆ ಶಿಕ್ಷೆ ನೀಡಿದೆ. ಈಗ ತಮ್ಮ ರಾಜಕೀಯ ಬೆಂಬಲಿಗರನ್ನು ರಕ್ಷಣೆ ಮಾಡುವ ಪ್ರಯತ್ನ ಮಾಡಿದ್ದಾರೆ.
ಇದರಿಂದ ಸಮಾಜ ಘಾತುಕ ಶಕ್ತಿಗಳು ಈ ಥರದ ಪ್ರತಿಭಟನೆ ಹೆಸರಿನಲ್ಲಿ ಮತ್ತೆ ದಂಗೆ ಮಾಡುವ ಸಾಧ್ಯತೆ ಹೆಚ್ಚಿದೆ. ಸಮಾಜ ಘಾತುಕ ಶಕ್ತಿಗಳಿಗೆ ಪುಷ್ಠಿ ಕೊಡುವ ಸಿಎಂ ಸಿದ್ದರಾಮಯ್ಯ ಅವರ ಈ ನಿರ್ಣಯ ಅತ್ಯಂತ ಖಂಡನೀಯ ಎಂದು ಸಂಸದ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.