ಕೊಪ್ಪಳ ತಾಲೂಕಿನ ಬಸಾಪುರ ಸರ್ಕಾರಿ ಶಾಲೆಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ಕೊಠಡಿ ಉದ್ಘಾಟನಾ ಸಮಾರಂಭವನ್ನು ಬಿಇಒ ಹನುಮಂತಪ್ಪ ಉದ್ಘಾಟಿಸಿದರು. ಬಲ್ಡೋಟಾ ಸಂಸ್ಥೆಯ ಪ್ರಭುದೇವಪ್ಪ, ಎಚ್.ಕೆ.ರಮೇಶ, ಗ್ರಾಪಂ ಮಾಜಿ ಅಧ್ಯಕ್ಷ ಕೀರಪ್ಪ, ಸದಸ್ಯ ಗ್ಯಾನಪ್ಪ ತಳಕಲ್, ಮುಖ್ಯ ಶಿಕ್ಷಕ ಪುಂಡಲೀಕಪ್ಪ ಇದ್ದರು.
ಕೊಪ್ಪಳ : ಬಲ್ಡೋಟ ಸಂಸ್ಥೆ ಶಿಕ್ಷಣ ಇಲಾಖೆಯೊಡಗೂಡಿ ಉತ್ತಮ ಸೇವೆ ನೀಡುತ್ತಿದೆ. ಸ್ಮಾರ್ಟ್ ಕ್ಲಾಸ್, ಪೀಠೋಪಕರಣ ಸೇರಿ ಇತರ ಸೌಲಭ್ಯ ಒದಗಿಸುತ್ತಿದೆ. ಇದೀಗ ಬಸಾಪುರ ಶಾಲೆಗೆ ಎರಡು ಕೊಠಡಿಗಳನ್ನು ನಿರ್ಮಿಸಿ ಕೊಟ್ಟಿದೆ ಎಂದು ಬಿಇಒ ಹನುಮಂತಪ್ಪ ಹೇಳಿದರು.
ತಾಲೂಕಿನ ಬಸಾಪುರ ಗ್ರಾಮದಲ್ಲಿ ನೂತನ ಶಾಲಾ ಕೊಠಡಿ ಉದ್ಘಾಟನಾ ಸಮಾರಂಭದಲ್ಲಿ ಗುರುವಾರ ಮಾತನಾಡಿದರು.
ಶೈಕ್ಷಣಿಕ ಚಟುವಟಿಕೆ ನಡೆಸಲು ಅನುಕೂಲವಾಗಿದೆ ಎಂದರು.
ಬಲ್ಡೋಟ ಸಮೂಹದ ಸಿಸಿ ವಿಭಾಗ ಕಾರ್ಯನಿರ್ವಾಹಕ ನಿರ್ದೇಶಕ ಪ್ರಭುದೇವಪ್ಪ ಮಾತನಾಡಿ, ಪ್ರತಿಯೊಬ್ಬ ತಂದೆ-&ತಾಯಿಯೂ ತಮ್ಮ ಮಕ್ಕಳಿಗೆ ಉನ್ನತ ಶಿಕ್ಷಣ ನೀಡಿ ಉತ್ತಮ ಭವಿಷ್ಯ ನಿರ್ಮಿಸಲು ಶ್ರಮಿಸುತ್ತಾರೆ. ಯುವಕರಿಗೆ ಸ್ಥಳಿಯವಾಗಿ ಉದ್ಯೋಗಾವಕಾಶಗಳು ಲಭ್ಯವಿಲ್ಲದಿದ್ದರೆ ವಲಸೆ ಹೋಗುವ ಪರಿಸ್ಥಿತಿ ಉಂಟಾಗುತ್ತದೆ. ಈ ಹಿನ್ನೆಲೆಯಲ್ಲಿ ಬಲ್ಡೋಟ ಪರಿಸರ ಸ್ನೇಹಿ ಕೈಗಾರಿಕೆಗಳನ್ನು ನಿರ್ಮಿಸುತ್ತಿದೆ. ಉದ್ಯೋಗದ ಜತೆಗೆ ಆರೋಗ್ಯ, ಶಿಕ್ಷಣ, ಮಹಿಳಾ ಸಬಲೀಕರಣ, ಪರಿಸರ ಮತ್ತು ಗ್ರಾಮಾಭಿವೃದ್ಧಿಗೆ ನೆರವಾಗಲಿದೆ ಎಂದರು.
ಸಾಮಾಜಿಕ ಸೇವಾ ವಿಭಾಗ ಮುಖ್ಯಸ್ಥ ಎಚ್.ಕೆ. ರಮೇಶ್ ಮಾತನಾಡಿ, ಈಗಾಗಲೇ ಗ್ರಾಮದಲ್ಲಿ ಅನೇಕ ಸಮಾಜಮುಖಿ ಕಾರ್ಯಕ್ರಮಗಳನ್ನು ಕೈಗೊಳ್ಳಲಾಗಿದ್ದು, ಮುಂದಿನ ದಿನಗಳಲ್ಲಿಯೂ ಗ್ರಾಮಸ್ಥರ ಸಹಕಾರದಿಂದ ಇನ್ನೂ ಹೆಚ್ಚಿನ ಜನಪರ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲಾಗುವುದು ಎಂದು ತಿಳಿಸಿದರು.
ಗ್ರಾಪಂ ಮಾಜಿ ಅಧ್ಯಕ್ಷ ಕೀರಪ್ಪ, ಸದಸ್ಯ ಗ್ಯಾನಪ್ಪ ತಳಕಲ್, ಮುಖ್ಯ ಶಿಕ್ಷಕ ಪುಂಡಲೀಕಪ್ಪ, ಸಂಸ್ಥೆಯ ಸಿದ್ದಲಿಂಗಯ್ಯ, ವಿರೇಶ ಕೊಪ್ಪಳ, ಶ್ರೀನಿವಾಸ ಪಾಠಕ್, ಎಸ್ಡಿಎಂಸಿ ಅಧ್ಯಕ್ಷ ಉಪಾಧ್ಯಕ್ಷ ಹಾಗೂ ಸದಸ್ಯರು ಇದ್ದರು.