ದಿಢೀರ್​ ಕುಸಿದ ಬಾಲ್ಕನಿ; ಕೂದಲೆಳೆ ಅಂತರದಲ್ಲಿ ಪತ್ನಿ ಪಾರು, ಪತಿ ಸಾವು!

Untitled design - 2023-11-02T192420.495
Published on

ಪಾಣಿಪತ್‌, ಹರಿಯಾಣ: ಬೈಕ್​ನಲ್ಲಿ ಹೋಗುತ್ತಿದ್ದ ಪತಿ ಹಾಗೂ ಪತ್ನಿ ಮೇಲೆ 80 ವರ್ಷ ಹಳೆಯ ಪಾಳುಬಿದ್ದ ಮನೆಯ ಮೇಲಾವರಣವು ದಿಢೀರ್​ ಕುಸಿದ ಪರಿಣಾಮ ಕೂದಲೆಳೆ ಅಂತರದಲ್ಲಿ ಮಹಿಳೆ ಪಾರಾಗಿದ್ದು, ಪತಿ ಸ್ಥಳದಲ್ಲೇ ಮೃತಪಟ್ಟ ಘಟನೆ ಪಾಣಿಪತ್‌ನ ಪಚ್ರಂಗ ಬಜಾರ್‌ನಲ್ಲಿ ವರದಿಯಾಗಿದೆ.

ಅಪಘಾತ ಸಂಭವಿಸುವ ವೇಳೆ ಮನೆಯನ್ನು ಕೆಡವಲಾಗುತ್ತಿತ್ತು ಎನ್ನಲಾಗಿದೆ. ಅವಶೇಷಗಳಡಿ ಸಿಲುಕಿ ಸ್ಥಳದಲ್ಲೇ ಸಾವನ್ನಪ್ಪಿದ ವ್ಯಕ್ತಿಯನ್ನು ಸುತನ ಗ್ರಾಮದ ಸುಶೀಲ್ ಎಂದು ಗುರುತಿಸಲಾಗಿದೆ. ಕಟ್ಟಡದ ಬಾಲ್ಕನಿ ಕುಸಿಯುವ ಕೆಲವೇ ಸಕೆಂಡ್​ಗಳಿಗೂ ಮುನ್ನ ಬೈಕ್​ನಿಂದ ಪತ್ನಿ ಜಿಗಿದಿದ್ದಾರೆ. ಸಣ್ಣ-ಪುಟ್ಟ ಗಾಯಗಳೊಂದಿಗೆ ಪಾರಾದ ಮಹಿಳೆ ತನ್ನ ಪತಿಯನ್ನು ಕಳೆದುಕೊಂಡಿದ್ದಾರೆ.

ವಾಹನ ದಟ್ಟಣೆಯಿರುವ ಮಾರುಕಟ್ಟೆಯಲ್ಲಿ ತಲ್ಲಣ ಮೂಡಿಸಿದ ಈ ಅವಘಡ ಸ್ಥಳೀಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಕೆಡವುವ ಸಂದರ್ಭದಲ್ಲಿ ಕಾರ್ಮಿಕರ ನಿರ್ಲಕ್ಷ್ಯವೇ ದುರಂತಕ್ಕೆ ಕಾರಣ ಎಂದು ಸ್ಥಳೀಯ ಅಂಗಡಿಯ ಮಾಲೀಕರು ಆರೋಪಿಸಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net