ಬಾಲಯ್ಯ ‘ಡಾಕು ಮಹಾರಾಜ್’: ಮತ್ತೊಂದು ವಿಭಿನ್ನ ಪಾತ್ರದಲ್ಲಿ ಟಾಲಿವುಡ್ ನಟ

daku maharaj (1)
Published on

ತೆಲುಗು ಚಿತ್ರರಂಗ ಹಾಗೂ ರಾಜಕಾರಣದಲ್ಲಿ ತಮ್ಮದೇ ಆದ ಛಾಪು ಮೂಡಿಸಿದವರು ನಟ ನಂದಮೂರಿ ಬಾಲಕೃಷ್ಣ. ರಾಜಕೀಯದ ಬಿಜಿಯ ನಡುವೆಯೂ ಬಾಲಯ್ಯ ನಟನೆಯಲ್ಲಿ ತಮ್ಮನ್ನು ತಾವು ತೊಡಿಗಿಸಿಕೊಂಡಿದ್ದು, ಶತಕದ ಗಡಿ ದಾಟಿದ್ದಾರೆ. ಅವರ ನಟನೆಯ 109ನೇ ಸಿನಿಮಾದ ಹೆಸರು ೋಷಣೆಯಾಗಿದ್ದು, ‘ಡಾಕು ಮಹಾರಾಜ್’ ಎಂದು ನಾಮಕರಣ ಮಾಡಲಾಗಿದೆ. ‘ಅಲ್ಲುಡು ಸೀನು’, ‘ಡಾನ್ ಸೀನು’ ಖ್ಯಾತಿಯ ಬಾಬಿ ಕೊಲ್ಲಿ ಅಲಿಯಾಸ್ ಕೆ.ಎಸ್. ರವೀಂದ್ರ ಈ ಚಿತ್ರಕ್ಕೆ ಆ್ಯಕ್ಷನ್-ಕಟ್ ಹೇಳುತ್ತಿದ್ದಾರೆ. ಚಿತ್ರದ ಟೀಸರ್‌ನಲ್ಲಿ ‘ಈ ಕಥೆ ದೇವರು, ರಾಕ್ಷಸ ಹಾಗೂ ರಾವಣನ ಕುರಿತಲ್ಲ. ಇದು ರಾಜ್ಯವಿಲ್ಲದೇ ಯುದ್ಧ ಮಾಡಿದ ರಾಜನ ಕಥೆ’ ಎಂಬ ಹಿನ್ನೆಲೆ ಧ್ವನಿಯಿದೆ. ಕುದುರೆ ಸವಾರಿಯಲ್ಲಿ ಮಿಂಚಿರುವ ಬಾಲಯ್ಯ ಕಪ್ಪು ವಸ ಧರಿಸಿದ್ದು, ಹಣೆಗೆ ತಿಲಕ ಇಟ್ಟಿದ್ದಾರೆ. ಇದು 90ರ ದಶಕದಲ್ಲಿದ್ದ ಡಕಾಯಿತನೊಬ್ಬನ ಸುತ್ತು ಸುತ್ತುವ ಕಥೆ ಎನ್ನಲಾಗುತ್ತಿದೆ. ಬಾಲಯ್ಯ ಜತೆ ಬಾಬಿ ಡಿಯೋಲ್, ಪ್ರಜ್ಞಾ ಜೈಸ್ವಾಲ್, ಶ್ರದ್ಧಾ ಶ್ರೀನಾಥ್, ಚಾಂದಿನಿ ಚೌಧರಿ ಸೇರಿ ಹಲವರು ತಾರಾಗಣದಲ್ಲಿದ್ದಾರೆ. ಮುಂದಿನ ಸಂಕ್ರಾಂತಿಗೆ ಸಿನಿಮಾ ಪ್ಯಾನ್ ಇಂಡಿಯಾ ರಿಲೀಸ್ ಆಗಲಿದೆ. -ಏಜೆನ್ಸೀಸ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net