

ವಾಷಿಂಗ್ಟನ್/ಪೋರ್ಟ್ ಆಫ್ ಸ್ಪೇನ್: ಅಯೋಧ್ಯೆ ರಾಮಮಂದಿರದಲ್ಲಿನ ಪ್ರಾಣಪ್ರತಿಷ್ಠಾಪನೆಯ ಸಂಭ್ರಮ ದೇಶದಾಚೆಗೂ ವ್ಯಾಪಿಸಿದ್ದು, ನ್ಯೂಯಾರ್ಕ್ನ ಟೈಮ್್ಸ ಸ್ಕೆ್ವೕರ್ ಸೇರಿದಂತೆ ಜಗತ್ತಿನ ವಿವಿಧೆಡೆ ನೆಲೆಸಿರುವ ಭಾರತೀಯರು ಈ ಸಂಭ್ರಮಾಚರಣೆಯಲ್ಲಿ ಭಾಗಿಯಾಗಿದ್ದಾರೆ. ಟೈಮ್್ಸ ಸ್ಕೆ್ವೕರ್ನಲ್ಲಿ ಪ್ರಾಣಪ್ರತಿಷ್ಠಾಪನೆ ಸಮಾರಂಭದ ನೇರಪ್ರಸಾರವನ್ನು ಮಾಡುವ ಮೂಲಕ ಅವರು ಈ ಸಂಭ್ರಮದಲ್ಲಿ ಭಾಗಿಯಾದರು. ಸಾಂಪ್ರದಾಯಿಕ ಉಡುಗೆ ಧರಿಸಿ, ಭಜನೆ, ನೃತ್ಯ, ರಾಮಜಪ ಇತ್ಯಾದಿ ಮೂಲಕ ಈ ಧಾರ್ವಿುಕ ಸಂಭ್ರಮಲ್ಲಿ ಪಾಲ್ಗೊಂಡರು.
ಫೇರ್ಫ್ಯಾಕ್ಸ್ ಕಂಟ್ರಿ ಆಫ್ ವರ್ಜಿನಿಯಾದ ಎಸ್ವಿ ಲೋಟಸ್ ಟೆಂಪಲ್ನಲ್ಲಿ ನಡೆದ ಸಂಭ್ರಮಾಚರಣೆಯಲ್ಲಿ ಸಿಖ್, ಮುಸ್ಲಿಂ ಮತ್ತು ಪಾಕಿಸ್ತಾನಿ ಅಮೆರಿಕನ್ ಸಮುದಾಯದವರೂ ಸೇರಿ 2,500ಕ್ಕೂ ಅಧಿಕ ಮಂದಿ ಪಾಲ್ಗೊಂಡರು. ಷೇರು ಮಾರುಕಟ್ಟೆಯ ಸೂಚ್ಯಂಕವಾದ ನಾಸ್ಡಾಕ್ ಪರದೆ ಮೇಲೂ ರಾಮಮಂದಿರ ಸಮಾರಂಭದದ ಚಿತ್ರಗಳು ಬಿತ್ತರಗೊಂಡವು.
ಲಾಸ್ ಏಂಜಲೀಸ್ನಲ್ಲಿ 250 ಕಾರುಗಳ ರ‍್ಯಾಲಿ ನಡೆದಿದ್ದು, ಇದರಲ್ಲಿ ಒಟ್ಟು ಒಂದು ಸಾವಿರ ಮಂದಿ ಭಾಗಿಯಾದರು. ಮೆಕ್ಸಿಕೋದ ಕ್ವಿರೆಟರೊದಲ್ಲಿ ರಾಮನ ಪ್ರಥಮ ದೇವಸ್ಥಾನ ಉದ್ಘಾಟಿಸಲಾಯಿತು.
ಸಾವಿರ ದೇವಸ್ಥಾನಗಳ ದರ್ಶನ: ಕೆನಡಾದಲ್ಲಿ ವಿಶ್ವ ಹಿಂದು ಪರಿಷತ್ ಮತ್ತು ವರ್ಲ್ಡ್ ಹಿಂದು ಕೌನ್ಸಿಲ್ ಆಫ್ ಅಮೆರಿಕದವರು ಶ್ರೀ ಬಾಲರಾಮನ ಪ್ರಾಣಪ್ರತಿಷ್ಠಾಪನೆ ನೇರವೇರುತ್ತಿದ್ದಂತೆ ಯುಎಸ್ಎ ಮತ್ತು ಕೆನಡದಲ್ಲಿನ ಒಟ್ಟು 1 ಸಾವಿರಕ್ಕೂ ಅಧಿಕ ದೇವಸ್ಥಾನಗಳ ದರ್ಶನ ಪಡೆಯುವ ರಾಮ ಮಂದಿರ ಯಾತ್ರೆಯನ್ನು ಘೋಷಿಸಿದರು. ಮೆಸಾಚುಸೆಟ್ಸ್ನ ಬಿಲ್ಲೆರಿಕದ ಓಂ ಹಿಂದು ಸೆಂಟರ್ನಿಂದ ಮಾ. 25ರಂದು ಆರಂಭವಾಗುವ ಈ ಯಾತ್ರೆ ರಾಮ, ಸೀತಾ, ಲಕ್ಷ್ಮಣ ಮತ್ತು ಹನುಮನ ಪ್ರತಿಮೆಗಳಿರುವ ವಿಶೇಷ ವ್ಯಾನ್ನಲ್ಲಿ ನಡೆಯಲಿದ್ದು, 45 ದಿನಗಳಲ್ಲಿ ಮುಗಿಯಲಿದೆ. ಕೆರಿಬಿಯನ್ ದೇಶಗಳಾದ ಟ್ರಿನಿಡಾಡ್ ಮತ್ತು ಟೊಬ್ಯಾಗೊದಲ್ಲಿ 5 ಸಾವಿರಕ್ಕೂ ಅಧಿಕ ಮಂದಿ ಸಂಭ್ರಮಾಚರಣೆ ನಡೆಸಿದರು. ಮಾರಿಷಸ್ ಸರ್ಕಾರ ಹಿಂದು ಸಮುದಾಯದ ಸಾರ್ವಜನಿಕ ಸಿಬ್ಬಂದಿಗೆ 2 ಗಂಟೆಗಳ ಬಿಡುವು ನೀಡಿತ್ತು.