

ಆನಂದಪುರ: ಸಮೀಪದ ಮುಂಬಾಳು ಗ್ರಾಮದ ಮಹಿಯುದ್ದೀನ್ ಜುಮ್ಮಾ ಮಸೀದಿಯಲ್ಲಿ ಸೋಮವಾರ ಬಕ್ರೀದ್ ಹಬ್ಬದ ದಿನ ಮಾನವೀಯತೆ ಮೆರೆದ ಘಟನೆ ಸಾರ್ವಜನಿಕರ ಗಮನ ಸೆಳೆಯಿತು.
ಮುಂಬಾಳು ಗ್ರಾಮದ ನಿವಾಸಿ ಸ್ನೇಹಜೀವಿ ಹಾಗೂ ಸಮಾಜ ಸೇವಕ ಮಹಮದ್ ಅಲ್ತ್ಾ ಎಂಬ ಯುವಕ ಮೃತ ಹಿಂದು ಸ್ನೇಹಿತನ ಕುಟುಂಬಕ್ಕೆ ನೆರವಾಗುವ ಉದ್ದೇಶದಿಂದ ಹಬ್ಬದ ದಿನ ಸಾರ್ವಜನಿಕರಿಂದ ಧನಸಹಾಯ ಯಾಚಿಸಿದರು. ಈತನ ಸ್ನೇಹಿತ ಅಂದಾಸುರ ಗ್ರಾಮದ ಹರೀಶ್ ಕಳೆದ ತಿಂಗಳು ವಿದ್ಯುತ್ ತಗುಲಿ ಮೃತಪಟ್ಟಿದ್ದ. ಬಡವರಾಗಿರುವ ಹರೀಶ್ ಕುಟುಂಬಕ್ಕೆ ನೆರವು ನೀಡಲು ಬಯಸಿ ಮೃತ ಸ್ನೇಹಿತನ ಭಾವಚಿತ್ರ ಮತ್ತು ಅವರ ತಾಯಿಯ ಬ್ಯಾಂಕ್ ಖಾತೆಗೆ ಹಣ ಜಮಾ ಆಗುವ ಗೋಗಲ್ ಪೇ ಕ್ಯೂಆರ್ ಕೋಡ್ ಇರುವ ಚಿತ್ರವನ್ನು ಹಿಡಿದುಕೊಂಡು ಸಹಾಯ ಯಾಚಿಸಿದರು. ಹಬ್ಬದ ದಿನ ದಾನ ನೀಡಬೇಕು ಎಂಬ ಧರ್ಮದ ತತ್ವವನ್ನು ಕಾರ್ಯರೂಪಕ್ಕೆ ತಂದು ಭಾವೈಕ್ಯೆದ ಸಂದೇಶ ಸಾರಿದ ಈ ಯುವಕನ ಕಾರ್ಯವನ್ನು ಸಾರ್ವಜನಿಕರು ಶ್ಲಾಸಿ ಕೈಲಾದಷ್ಟು ಸಹಾಯ ಮಾಡಿದರು. ಶಿವಮೊಗ್ಗ-ಸಾಗರ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಂತೆ ಈ ಮಸೀದಿ ಇರುವ ಕಾರಣ ಹೆದ್ದಾರಿಯಲ್ಲಿ ಸಂಚರಿಸುವವರು ಸಹ ಆರ್ಥಿಕ ಸಹಾಯ ನೀಡಿ ಮಾನವೀಯತೆ ಮೆರೆದರು. ಮಸೀದಿ ಧರ್ಮ ಗುರು ಅಬ್ದುಲ್ ಖಾದರ್ ಹಿಷಾಮಿ ಅಲ್ ಜಲಾಲಿ ಮತ್ತು ಸಮಿತಿಯ ಪದಾಧಿಕಾರಿಗಳಾದ ಝೀ ಹಂಜ, ಅಶ್ರ್ ಮುಂಬಾಳು ಇತರರು ಅಲ್ತ್ಾ ಕಾರ್ಯವನ್ನು ಶ್ಲಾಸಿದರು.