ಶ್ರದ್ಧೆಯಿಂದ ಅಧ್ಯಯನ ಮಾಡಿದಾಗ ಮಾತ್ರ ಯಶಸ್ಸು ಸಾಧ್ಯ; ಡಾ. ಕೆ. ವೆಂಕಟೇಶ

27-RNR-05
Published on

ರಾಣೆಬೆನ್ನೂರ: ವಿದ್ಯಾರ್ಥಿಗಳು ಕಾಲೇಜ್‌ನಲ್ಲಿ ಆಯ್ದುಕೊಂಡ ವಿಷಯವನ್ನು ಬಹಳ ಶ್ರದ್ಧೆಯಿಂದ ಅಧ್ಯಯನ ಮಾಡಬೇಕು. ಅಂದಾಗ ನೀವು ಕಂಡ ಕನಸು ನನಸು ಮಾಡಿಕೊಳ್ಳಲು ಸಾಧ್ಯವಾಗುತ್ತದೆ ಎಂದು ದಾವಣಗೆರೆ ವಿಶ್ವವಿದ್ಯಾಲಯ ಸ್ನಾತಕೋತ್ತರ ಶಿಕ್ಷಣ ಅಧ್ಯಯನ ವಿಭಾಗದ ಮುಖ್ಯಸ್ಥ ಡಾ. ಕೆ. ವೆಂಕಟೇಶ ಹೇಳಿದರು.
ಬಿಎಜೆಎಸ್‌ಎಸ್ ಕಲಾ ಮತ್ತು ವಾಣಿಜ್ಯ ಮಹಿಳಾ ಮಹಾವಿದ್ಯಾಲಯದಲ್ಲಿ ಶನಿವಾರ ಏರ್ಪಡಿಸಿದ್ದ 2022-23ನೇ ಸಾಲಿನ ಎನ್‌ಎಸ್‌ಎಸ್, ರೆಡ್‌ಕ್ರಾಸ್, ರೆಡ್ ರಿಬ್ಬನ್ ಮತ್ತು ಐಕ್ಯೂಎಸಿ ಸಹಯೋಗದ ವಿದ್ಯಾರ್ಥಿನಿ ಒಕ್ಕೂಟ ಕಾರ್ಯಚಟುವಟಿಕೆಗಳ ಸಮಾರೋಪ ಮತ್ತು ಅಂತಿಮ ವರ್ಷದ ವಿದ್ಯಾರ್ಥಿನಿಯರಿಗೆ ಬಿಳ್ಕೋಡುಗೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ನಿತ್ಯ ಅಧ್ಯಯನದ ಪ್ರಯತ್ನಗಳು ನಡೆಯುತ್ತಲೆ ಇರಬೇಕು. ಇದರ ಜತೆ ಜತೆಗೆ ಸಂಸ್ಕೃತಿ ಸಂಸ್ಕಾರಗಳನ್ನು ಅರಿತುಕೊಂಡು ಅದನ್ನು ಬೆಳೆಸಿಕೊಂಡು ಹೋಗ ಬೇಕು. ಅಂದಾಗ ಸಮಾಜದಲ್ಲಿ ಒಳ್ಳೆಯ ವ್ಯಕ್ತಿಗಳಾಗಿ ಬೆಳೆಯಲು ಸಾಧ್ಯ ಎಂದರು.
ಆಡಳಿತಾಧಿಕಾರಿ ಡಾ. ಆರ್.ಎಂ. ಕುಬೇರಪ್ಪ ಮಾತನಾಡಿ, ವಿದ್ಯಾರ್ಥಿನಿಯರು ಇಂದಿನ ದಿನಮಾನಗಳಲ್ಲಿ ಅಧ್ಯಯನಕ್ಕೆ ಹಲವಾರು ರೀತಿಯ ಸಂಪನ್ನೂಲಗಳು ಲಭಿಸುತ್ತವೆ. ಅವುಗಳನ್ನು ಸಮರ್ಪಕವಾಗಿ ಬಳಸಿಕೊಂಡು ನಿಮ್ಮ ಇಚ್ಛೆಯ ವಿಷಯದ ಬಗ್ಗೆ ಮನಃ ಪೂರ್ವಕವಾಗಿ ಓದಬೇಕು ಎಂದರು.
ಪ್ರಾಚಾರ್ಯ ಸುರೇಶ ಬಣಕಾರ ಅಧ್ಯಕ್ಷತೆ ವಹಿಸಿದ್ದರು.
ಉಪನ್ಯಾಸಕರಾದ ಕೆ.ಕೆ. ಹಾವಿನಾಳ, ಎಚ್.ಎ. ಭಿಕ್ಷಾವರ್ತಿಮಠ, ದೇವರಾಜ ಹಂಚಿನಮನಿ, ಸಂತೋಷ ಭಜಂತ್ರಿ, ಪುಷ್ಪಾಂಜಲಿ ಕಾಂಬಳೆ, ರಾಜೀವ ಎಂ., ಡಾ. ರವೀಂದ್ರಕುಮಾರ ಬಣಕಾರ, ಪೃಥ್ವಿರಾಜ್ ಕಟ್ಟಿಮನಿ, ಸುನೀಲ ಹಿರೇಮನಿ, ಚಂದ್ರಶೇಖರ ಎಂ.ಕೆ., ಡಾ. ಹನುಮಂತಪ್ಪ ಬ್ಯಾಡಗಿ, ಪ್ರವೀಣ ಕುರುವತ್ತಿ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net