ಮನೀಶ್ ಸಿಸೋಡಿಯಾಗೆ ಜಾಮೀನು: ಸತ್ಯಕ್ಕೆ ಸಂದ ಜಯ ಮುಖ್ಯಮಂತ್ರಿ ಚಂದ್ರು

aap celebration
Published on

ಬೆಂಗಳೂರು: ದೆಹಲಿ ರಾಜ್ಯದ ಮಾಜಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರಿಗೆ ನ್ಯಾಯಾಲಯದಿಂದ ಸಿಕ್ಕಿರುವ ಜಾಮೀನು ಸತ್ಯಕ್ಕೆ ಸ್ವಲ್ಪ ನಿಧಾನವಾದರೂ ಸಹ ಎಂದಿಗೂ ಜಯವಿದೆ ಎಂಬುದು ಈ ಮೂಲಕ ಸಾಬೀತಾಗಿದೆ ಎಂದು ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ತಿಳಿಸಿದ್ದಾರೆ.

ಮನೀಶ್ ಸಿಸೋಡಿಯಾಗೆ ಜಾಮೀನು ದೊರೆತ ಹಿನ್ನಲೆಯಲ್ಲಿ ಸಂತಸ ವ್ಯಕ್ತಪಡಿಸಿ ಮಾತನಾಡಿ ವಿಶ್ವವೇ ತಲೆಯೆತ್ತಿ ನೋಡುವಂತಹ ದೆಹಲಿಯಲ್ಲಿನ ಶಿಕ್ಷಣ ಕ್ರಾಂತಿಯನ್ನು ಸಹಿಸದ ಶಕ್ತಿಗಳು ಖೋಟ್ಟಿ ಅಬಕಾರಿ ಹಗರಣದಲ್ಲಿ ಮನೀಶ್ ಅವರನ್ನು ಸಿಲುಕಿಸಿ ಖುಷಿ ಪಟ್ಟವರಿಗೆ ಇಂದಿನ ನ್ಯಾಯಾಲಯದ ಆದೇಶ ಮುಖಭಂಗವನ್ನುಂಟು ಮಾಡಿದೆ ಎಂದು ತಿರುಗೆಟು ನೀಡಿದ್ದಾರೆ.

ಇದೇ ರೀತಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹಾಗೂ ಸತ್ಯೇಂದ್ರ ಜೈನ್ ಅವರಿಗೂ ಶೀಘ್ರದಲ್ಲಿ ಜಾಮೀನು ಸಿಗಲಿದ್ದು , ದೆಹಲಿ ಮಾದರಿಯ ಪಾರದರ್ಶಕ ಹಾಗೂ ಪ್ರಾಮಾಣಿಕ ಆಡಳಿತ ದೇಶದೆಲ್ಲೆಡೆ ನಾಗಾಲೋಟದಲ್ಲಿ ಪಸರಿಸಲಿದೆ ಎಂದು ಅಭಿಪ್ರಾಯ ಪಟ್ಟರು.

ದೆಹಲಿಯ ಮಾಜಿ ಉಪಮುಖ್ಯಮಂತ್ರಿ ಮನೀಶ್ ಶಿಸೋಡಿಯ ರವರ. ಬಂಧನ ಜಾಮೀನು ಆದೇಶದ ಬಗ್ಗೆ ಪಕ್ಷದ ರಾಜ್ಯ ಪ್ರಧಾನ ಕಾರ್ಯಾಲಯದಲ್ಲಿ ಸಂಭ್ರಮವನ್ನು ಆಚರಿಸಲಾಯಿತು.

ರಾಷ್ಟ್ರೀಯ ಜಂಟಿ ಕಾರ್ಯದರ್ಶಿ ಗಳಾದ ಪೃಥ್ವಿ ರೆಡ್ಡಿ, ತಮಿಳುನಾಡು ರಾಜ್ಯದ ಪಕ್ಷದ ಅಧ್ಯಕ್ಷ ವಶೀಕರನ್, ರಾಜ್ಯ ಸಂಘಟನಾ ಕಾರ್ಯದರ್ಶಿ ಸಂಚಿತ್ ಸಹವಾನಿ, ಮೋಹನ್ ದಾಸರಿ, ಬಸವರಾಜ್ ಮುದಿಗೌಡರ್, ಗೋಪಾಲ್, ಶಶಿಧರ್ ಆರಾಧ್ಯ ಇನ್ನಿತರ ಮುಖಂಡರುಗಳು ಹಾಗೂ ಕಾರ್ಯಕರ್ತರುಗಳು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net