ಜಮ್ಮುಕಾಶ್ಮೀರದಲ್ಲಿ ಹಾವು ಕಚ್ಚಿ ಬಾಗಲಕೋಟೆ ಮೂಲದ ಯೋಧ ಹುತಾತ್ಮ

pic soldier
Published on

ಬಾಗಲಕೋಟೆ: ಹಾವು ಕಚ್ಚಿದ ಪರಿಣಾಮ ಕರ್ತವ್ಯನಿರತ ಬಾಗಲಕೋಟೆ ಮೂಲದ ಯೋಧನೊಬ್ಬ ಸಾವನ್ನಪ್ಪಿರುವ ಘಟನೆ ಜಮ್ಮು ಕಾಶ್ಮೀರದಲ್ಲಿ ನಡೆದಿದೆ.

ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲೂಕಿನ ಹಲಕುರ್ಕಿ ಗ್ರಾಮದ ಚಿದಾನಂದ ಚನ್ನಬಸಪ್ಪ ಹಲಕುರ್ಕಿ (ಶಿರಸ್ಥಾರ) (25) ಮೃತಪಟ್ಟ ಯೋಧ. ಇಂಡಿಯನ್ ಆರ್ಮಿ (ಮರಾಠಾ ರೆಜಿಮೆಂಟ ಸೈನಿಕ) ನಾಗಿ ಕಳೆದ 6 ವರ್ಷ 9 ತಿಂಗಳಿನಿಂದ ಕರ್ತವ್ಯ ನಿರ್ವಹಿಸುತ್ತಿದ್ದರು. ಜಮ್ಮು ಕಾಶ್ಮೀರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾಗ ಬುಧವಾರ ರಾತ್ರಿ 8 ಗಂಟೆಯ ಸುಮಾರಿಗೆ ಹಾವು ಕಚ್ಚಿ ಮೃತಪಟ್ಟಿದ್ದಾರೆ.

ಮೃತ ಯೋಧ ಚಿದಾನಂದ ಅವರಿಗೆ ಒರ್ವ ಸಹೋದರ, ತಾಯಿ ರತ್ನಮ್ಮ ಸೇರಿದಂತೆ ಅಪಾರ ಬಂಧು ಬಳಗವನ್ನು ಬಿಟ್ಟು ಅಗಲಿದ್ದಾನೆ. ಯೋಧನ ಕುಟುಂಬದಲ್ಲಿ ಶೋಕ ಮಡುಕಟ್ಟಿದೆ. ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿದೆ. ಯೋಧನ ಪಾರ್ಥಿವ ಶರೀರ ಶುಕ್ರವಾರ ಅಥವಾ ಶನಿವಾರ ಸ್ವಗ್ರಾಮಕ್ಕೆ ಬರುವ ಸಂಭವವಿದೆ ಎಂದು ಮೂಲಗಳು ತಿಳಿಸಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net