ಆಸ್ಪತ್ರೆಯ ಐಸಿಯುನಲ್ಲೇ ಡಾನ್ಸ್​: ಬಾಲಕನ ಸಕಾರಾತ್ಮಕ ಮನೋಭಾವಕ್ಕೆ ನೆಟ್ಟಿಗರು ಫಿದಾ!

BGK Boy Dance
Published on

ಬಾಗಲಕೋಟೆ: ವ್ಯಕ್ತಿಯಲ್ಲಿನ ನಕರಾತ್ಮಕ ಮನೋಭಾವವೂ ಒಂದು ಸಣ್ಣ ಗಾಯವವನ್ನು ಕೂಡ ದೊಡ್ಡ ಸಮಸ್ಯೆಯಾಗಿ ಕಾಡುವಂತೆ ಮಾಡುತ್ತದೆ. ಆದರೆ, ಧನಾತ್ಮಕ ಮನೋಭಾವ ಇದ್ದಲ್ಲಿ ಎಂಥದ್ದೇ ಕಠಿಣ ಸಮಸ್ಯೆ ಬಂದರೂ ಅದನ್ನು ನಗು ಮುಖದಿಂದಲೇ ಎದುರಿಸಿ ಜಯಸಿ ಬರಬಹುದು. ಏನೇ ಆಗಲು ಪಾಸಿಟಿವ್​ ಮನಸ್ಸಿನಿಂದಲೇ ಎದುರಿಸಿ ಎಂಬ ಮಾತಿಗೆ ಪುಷ್ಠಿ ನೀಡುವಂತಹ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಹೌದು, ಆಸ್ಪತ್ರೆ ಐಸಿಯುನಲ್ಲಿ ಬಾಲಕನೊಬ್ಬ ಬೆಡ್​ ಮಲಗಿಕೊಂಡೇ ಡಾನ್ಸ್ ಮಾಡುತ್ತಿರುವ ವಿಡಿಯೋ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗುತ್ತಿದೆ. ಐಸಿಯು ಅಂದ್ರೇನೆ ಅನೇಕರು ಕನಸಿನಲ್ಲೂ ಬೆಚ್ಚಿಬೀಳುತ್ತಾರೆ. ಆದರೆ, ಯುವಕ ಎಮರ್ಜೆನ್ಸಿ ಬೆಡ್​ ಮೇಲೆ ಮಲಗಿ ಡಾನ್ಸ್​ ಮಾಡುತ್ತಿರುವುದು ಎಲ್ಲರ ಗಮನ ಸೆಳೆದಿದೆ.

ನಾ ಡ್ರೈವರ್ ನಿನ್ನ ಲವರ್ ಎಂಬ ಉತ್ತರ ಕರ್ನಾಟಕ ಹಾಡಿಗೆ ಬಾಲಕ ಡಾನ್ಸ್​ ಮಾಡಿದ್ದಾನೆ. ಐಸಿಯು ಬೆಡ್​ ಮೇಲೆ ಮಲಗಿಕೊಂಡೇ ಕೈನಿಂದ ಆ್ಯಕ್ಸನ್​ ಮಾಡುತ್ತಾ ಹಾಡಿಗೆ ಡಾನ್ಸ್ ಮಾಡಿದ್ದು, ಈ ಘಟನೆ ಬಾಗಲಕೋಟೆ ಖಾಸಗಿ ಆಸ್ಪತ್ರೆಯಲ್ಲಿ ನಡೆದಿದೆ ಎನ್ನಲಾಗಿದೆ. ಬಾಲಕ ಯಾರು? ಯಾವ ಆಸ್ಪತ್ರೆ ಎಂಬ ಮಾಹಿತಿ ತಿಳಿದುಬಂದಿಲ್ಲ. ಆದರೆ, ಬಾಲಕನ ಐಸಿಯು ಬೆಡ್ ಮೇಲಿನ ಡಾನ್ಸ್ ಮಾತ್ರ ಸಾಮಾಜಿಕ ಜಾಲತಾಣದಲ್ಲಿ ಬಾರಿ ವೈರಲ್​ ಆಗಿದ್ದು, ಆತನ ಪಾಸಿಟಿವ್​ ಮನೋಭಾವಕ್ಕೆ ನೆಟ್ಟಿಗರು ಫಿದಾ ಆಗಿದ್ದಾರೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net