ಬಾಗಲಕೋಟೆಯಲ್ಲಿ 1050 ವರ್ಷಗಳಷ್ಟು ಹಳೆಯ, ಕಲ್ಯಾಣಿ ಚಾಲುಕ್ಯರ ಕಾಲದ ಶಿಲಾಶಾಸನ ಪತ್ತೆ!

Shilashashana
Published on

ಬಾಗಲಕೋಟೆ: ಜಮಖಂಡಿ ನಗರದ ಲೋಕೋಪಯೋಗಿ ಇಲಾಖೆ ಆವರಣದಲ್ಲಿ 1050 ವರ್ಷಗಳಷ್ಟು ಹಳೆಯದಾದ ಹಾಗೂ ಕಲ್ಯಾಣಿ ಚಾಲುಕ್ಯರ ಕಾಲದ ಶಿಲಾಶಾಸನ ಪತ್ತೆಯಾಗಿದೆ.

ಇತಿಹಾಸ ತಜ್ಞ ಹಾಗೂ ಸಂಶೋಧಕ ಡಾ. ಸಂಗಮೇಶ ಕಲ್ಯಾಣಿ ಅವರು ಶಾಸನವನ್ನು ಪತ್ತೆ ಹಚ್ಚಿದ್ದಾರೆ. ಹಳೆಗನ್ನಡದಲ್ಲಿರುವ ಶಾಸನದ ತುಂಡು ಮಾತ್ರ ಪತ್ತೆಯಾಗಿದೆ. ಕಲ್ಯಾಣಿ ಚಾಲುಕ್ಯರ ಸಾಮಂತ ಅರಸರಾದ ರಟ್ಟರ ಕಾಲದ ಶಾಸನ ಎಂದು ಊಹಿಸಲಾಗಿದೆ.

ಲೋಕೋಪಯೋಗಿ ಇಲಾಖೆ ಆವರಣದ ನಿರುಪಯುಕ್ತ ಸ್ಥಳದಲ್ಲಿ ಬಿದ್ದದ್ದ ಕಲ್ಲಿನ ಶಾಸನವು ಶಿವನ ದೇವಾಲಯಕ್ಕೆ ಸಂಬಂಧಿಸಿದ್ದು ಎಂಬುದು ಸ್ಪಷ್ಟವಾಗಿದೆ ಎಂದು ಸಂಶೋಧಕ ಸಂಗಮೇಶ ಕಲ್ಯಾಣಿ ಅವರು ತಿಳಿಸಿದ್ದಾರೆ.

ಕಚೇರಿಯ ಆವರಣಕ್ಕೆ ಭೇಟಿ ನೀಡಿದಾಗ ಸಂಶೋಧಕರಿಗೆ ಪತ್ತೆಯಾಗಿದ್ದು, 1050 ವರ್ಷಗಳಷ್ಟು ಹಳೆಯ ಕಾಲದ ಶಾಸನವನ್ನು ಕಂಡು ಸ್ಥಳೀಯರು ಆಶ್ಚರ್ಯಚಕಿತರಾದರು. ಇನ್ನೂ ಹೆಚ್ಚಿನ ಸಂಶೋಧನೆ ನಡೆಯಬೇಕು ಮತ್ತು ಇಂತಹ ಶಾಸನಗಳ ರಕ್ಷಣೆಯಾಗಬೇಕು ಎಂದು ಸಂಶೋಧಕ ಸಂಗಮೇಶ ಕಲ್ಯಾಣಿ ಹೇಳಿದರು. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net