ಮಹಾರಾಷ್ಟ್ರ ಲೈಂಗಿಕ ದೌರ್ಜನ್ಯ ಪ್ರಕರಣ; ಕುಟುಂಬಸ್ಥರಿಗೆ ವಿಚಾರ ತಿಳಿಯಲು ಕಾರಣ ಬಾಲಕಿಯ ಈ ನಡುವಳಿಕೆ

Untitled-design-2024-08-21T184229.204
Published on

ಮುಂಬೈ: ಮಹಾರಾಷ್ಟ್ರದ ಬದ್ಲಾಪುರದ ಖಾಸಗಿ ಶಾಲೆಯೊಂದರಲ್ಲಿ ಇಬ್ಬರು ಅಪ್ರಾಪ್ತ ಬಾಲಕಿಯರ ಮೇಲೆ ನಡೆದ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಸಂತ್ರಸ್ತೆಯೊಬ್ಬರ ಕುಟುಂಬಸ್ಥರಿಗೆ ಲೈಂಗಿಕ ಕಿರುಕುಳ ನಡೆದಿದೆ ಎಂದಬ ನೀಚ ಕೃತ್ಯದ ಬಗ್ಗೆ ಬಾಲಕಿಯಲ್ಲಾದ ಚಿಕ್ಕಪುಟ್ಟ ಬದಲಾವಣೆಯಿಂದ ತಿಳಿದು ಬಂದಿದೆ.

ಬಾಲಕಿ ಶಾಲೆಗೆ ಹೋಗಲು ನಿರಾಕರಿಸುತ್ತಿದ್ದರು. ಈಕೆ ಶಾಲೆಗೆ ಹೋಗಲು ನಿರಾಕರಿಸುತ್ತಿರುವುದು ಏಕೆ ಎಂದು ಆರಂಭದಲ್ಲಿ ಕುಟುಂಬದವರು ಗೊಂದಲಕ್ಕೊಳಗಾಗಿದ್ದರು. ಆಕೆ ಸರಿಯಾಗಿ ನಡೆಯುತ್ತಿರಲಿಲ್ಲ. ಬಳಿಕ ವಾಶ್​ರೂಮಿಗೆ ಹೋಗುವುದನ್ನೆ ತಪ್ಪಿಸಿದಳು. ಮೂತ್ರನಾಳದ ಸೊಂಕು ಇರಬಹುದು ಎಂದು ಭಾವಿಸಿದ್ದೇವು. ಸಂತ್ರಸ್ತೆ ಇನ್ನೂ ಆಘಾತದಲ್ಲಿರುವುದಾಗಿ ಬಾಲಕಿಯ ಹತ್ತಿರದ ಸಂಬಂಧಿಕರೊಬ್ಬರು ತಿಳಿಸಿರುವುದಾಗಿ ಹಿಂದೂಸ್ತಾನ್​ ಟೈಮ್ಸ್​ ವರದಿ ಮಾಡಿದೆ.

ಬಾಲಕಿ ವಾಶ್​ರೂಮಿಗೆ ಹೋಗದಿರುವುದು, ಶಾಲೆಗೆ ಹೋಗಲು ಹಿಂಜರಿಯುವುದನ್ನು ನೋಡಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ವೈದ್ಯಕೀಯ ಪರೀಕ್ಷೆಯಲ್ಲಿ ಲೈಂಗಿಕ ದೌರ್ಜನ್ಯ ನಡೆದಿರುವುದು ತಿಳಿದುಬಂತು. ಅಲ್ಲದೆ ಬಾಲಕಿ ಪಾಲಕರು, ದಾದಾ ತನ್ನೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ ಎಂದು ಮಗಳು ಹೇಳಿರುವುದಾಗಿ ಅವರ ಸಂಬಂಧಿಕರು ತಿಳಿಸಿದರು.

ಸಂತ್ರಸ್ತೆಯ ಪಾಲಕರು ಆಗಸ್ಟ್​​ 16ರಂದು ದೂರು ದಾಖಲಿಸಿದ್ದಾರೆ. ಆಗಸ್ಟ್​ 13ರಂದು ಶಾಲೆಯ ಶೌಚಗೃಹದಲ್ಲಿ ಲೈಂಗಿಕ ದೌರ್ಜನ್ಯ ನಡೆದಿರುವುದಾಗಿ ಎಫ್​ಐಆರ್​ನಲ್ಲಿ ತಿಳಿಸಲಾಗಿದೆ. ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪದ ಮೇಲೆ ಶಾಲೆಯ ಸ್ವಚ್ಛತಾ ಸಿಬ್ಬಂದಿಯ 23 ವರ್ಷದ ಅಕ್ಷಯ್ ಶಿಂಧೆ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಪ್ರಕರಣದ ತನಿಖೆಗಾಗಿ ಎಸ್‌ಐಟಿ ರಚಿಸಿರುವ ಮಹಾರಾಷ್ಟ್ರ ಸರ್ಕಾರ ಶೀಘ್ರವಾಗಿ ವಿಚಾರಣೆ ನಡೆಸುವುದಾಗಿ ಭರವಸೆ ನೀಡಿದೆ. (ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net