ಬ್ಯಾಡ್ಜ್ ಪರವಾನಿಗೆ ರಾಯಚೂರಿನಲ್ಲಿ ನೀಡಲಿ

SHEK BURAMAHUDDIN
SHEK BURAMAHUDDIN
Published on

ರಾಯಚೂರು ಭಾರಿ ವಾಹನ ಚಾಲಕರು ಬ್ಯಾಡ್ಜ್ ಚಾಲನಾ ಪರವಾನಿಗೆ ಪಡೆಯಲು ಕಲಬುರಗಿ ಕಚೇರಿಯಲ್ಲಿ ಪಡೆಯಬೇಕೆನ್ನುವ ಆದೇಶ ರದ್ದುಗೊಳಿಸಿ ರಾಯಚೂರು ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ನೀಡಲು ಸರ್ಕಾರ ಮುಂದಾಗಬೇಕೆAದು ರಾಷ್ಟಿçÃಯ ಚಾಲಕರ ಏಕತಾ ಮಂಚ್ ಉಪಾಧ್ಯಕ್ಷ ಶೇಖ್ ಬುರಾವುದ್ದೀನ್ ಆಗ್ರಹಿಸಿದರು.

ನಗರದ ಪತ್ರಿಕಾ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈ ಮೊದಲು ರಾಯಚೂರು ಪ್ರಾದೇಶಿಕ ಕಚೇರಿಯಲ್ಲಿ ನೀಡಲಾಗುತ್ತಿತ್ತು. ಕಳೆದ ಆರು ತಿಂಗಳಿನಿAದ ಕಲ್ಬುರ್ಗಿ ಕಚೇರಿಯಲ್ಲಿ ಪ್ರಮಾಣ ಪತ್ರ ಪಡೆದು ಬ್ಯಾಡ್ಜ್ ಪಡೆಯಬೇಕೆಂದು ಹೇಳಲಾಗುತ್ತಿದೆ.

ಚಾಲಕರು ಕಲಬುರಗಿ ಹೋಗಿ ಪಡೆಯಲು ಸಾಧ್ಯವಾಗುವದಿಲ್ಲ. ಕನಿಷ್ಟ ಮೂರು ದಿನ ಕಳೆದು ಹೋಗಿ ದಿನದ ಆದಾಯ ಕಳೆದುಕೊಳ್ಳುವಂತಾಗುತ್ತಿದೆ. ಅರ್ಥಿಕವಾಗಿ ಹೊರೆಯಾಗುತ್ತಿರುವದನ್ನು ತಪ್ಪಿಸಲು ರಾಯಚೂರು ಆರ್‌ಟಿಓ ಕಚೇರಿಯಲ್ಲಿಯೇ ಬ್ಯಾಡ್ಜ ನೀಡುವ ವ್ಯವಸ್ಥೆ ಜಾರಿಗೊಳಿಸಬೇಕೆಂದರು.

ಈ ಸಂದರ್ಭದಲ್ಲಿ ಸಂಘದ ಜಿಲ್ಲಾಧ್ಯಕ್ಷ ಝಾಕೀರ್, ಪವನಕುಮಾರ ರೆಡ್ಡಿ, ಸೈಯದ್ ನೂರುದ್ದೀನ್, ಬಿ.ವಿ.ರೆಡ್ಡಿ, ಸೈಯದ್ ಅಕ್ಬರ್ ಮಹಿಬೂಬ ,ಶೇಖ್ ಇಬ್ರಾಹಿಂ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net