

ಅಥಣಿ ಗ್ರಾಮೀಣ: ಬಡಚಿ ವಿವಿಧೋದ್ದೇಶಗಳ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘ ಬೆಳಗಾವಿ ಜಿಲ್ಲೆಯಲ್ಲಿ ಉತ್ತಮ ಸಹಕಾರ ಸಂಘ ಪ್ರಶಸ್ತಿ ಪಡೆಯುವ ಜತೆಗೆ ಪ್ರಸಕ್ತ ಸಾಲಿನಲ್ಲಿ ೭೧.೯೧ ಲಕ್ಷ ರೂ. ನಿವ್ವಳ ಲಾಭ ಗಳಿಸಿದೆ ಎಂದು ಅಧ್ಯಕ್ಷ ಸೈಬಣ್ಣ ಕಮತಗಿ ಹೇಳಿದರು.
ತಾಲೂಕಿನ ಬಡಚಿ ಗ್ರಾಮದ ವಿವಿಧೋದ್ದೇಶಗಳ ಸಂಘದ ೬೫ನೇ ವಾರ್ಷಿಕ ಸರ್ವ ಸಾಧಾರಣ ಸಭೆಯಲ್ಲಿ ಮಾತನಾಡಿ, ಸಂಘ ೨೧೪೨ ಸದಸ್ಯರು, ೧.೭೪ ಕೋಟಿ ರೂ. ಷೇರು ಬಂಡವಾಳ, ೧೫.೫೩ ಕೋಟಿ ರೂ. ಠೇವಣಿ ಹಾಗೂ ೩೩.೯೪ ಕೋಟಿ ರೂ. ದುಡಿಯುವ ಬಂಡವಾಳ ಹೊಂದಿದೆ. ೧೧.೩೪ ಕೋಟಿ ರೂ. ಬಿಡಿಪಿ, ೧೧.೨೭ ಕೋಟಿ ರೂ. ಕೃಷಿ, ೩೭ ಮಹಿಳಾ ಸ್ವ-ಸಹಾಯ ಸಂಘಗಳಿಗೆ ೧.೩೫ ಕೋಟಿ ರೂ. ಜತೆಗೆ ೩೯.೮೫ ಲಕ್ಷ ರೂ. ಟ್ರ್ಯಾಕ್ಟರ್ ಸಾಲ ನೀಡಿದೆ ಎಂದರು.
ಸಂಘದ ಸಿಇಒ ಶಿವಯ್ಯ ಪೂಜಾರಿ ಮಾತನಾಡಿದರು. ನಿವೃತ್ತ ವ್ಯವಸ್ಥಾಪಕ ಮಲ್ಲಯ್ಯ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಮಹಾದೇವ ಹೊಕ್ಕುಂಡಿ, ನಿರ್ದೇಶಕರಾದ ದಶರಥ ಜಾಧವ, ಬಸಪ್ಪ ಲೆಂಡೆ, ವಿಠ್ಠಲ ಪೂಜಾರಿ, ಯಮನಪ್ಪ ದನದಮನಿ, ಮುತ್ತಪ್ಪ ಲೆಂಡೆ, ಪರಶುರಾಮ ಲಾಂಡಗೆ, ಅರ್ಜುನ ಬಡಿಗೇರ, ವಿಜಯಾ ಸಾಳುಂಕೆ, ಸುನೀತಾ ಗಡದಿ, ಸದಾಶಿವ ಐಗಳಿ, ರಾಜು ಹಗಲಂಬಿ, ಕಲ್ಲಪ್ಪ ಖೋತ, ಮುರುಗೇಂದ್ರ ನಾಯಿಕ, ಪ್ರಕಾಶ ಆಜೂರ, ಪರಶು ದನದಮನಿ, ನಾಗೇಶ ಕೋಳಿ ಇತರರಿದ್ದರು.