

Mallikarjun Kharge: ಇಡೀ ಪೆಟ್ಟಿಗೆ ಕೊಳೆಯುವ ಮೊದಲು ಕೆಟ್ಟ ಮಾವಿನ ಹಣ್ಣುಗಳನ್ನು ತಕ್ಷಣ ತೆಗೆದುಹಾಕಬೇಕೆಂದು ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಗುರುವಾರ (ಸೆಪ್ಟೆಂಬರ್, 11) ಹೇಳಿದ್ದಾರೆ.
ಗುಜರಾತ್‌ನ ಜುನಾಗಢ ನಡೆದ ಜಿಲ್ಲಾ ತರಬೇತಿ ಶಿಬಿರವನ್ನು ಉದ್ಘಾಟಿಸಿದ ಖರ್ಗೆ, ಕಾಂಗ್ರೆಸ್ ಪಕ್ಷವನ್ನು ತಳಮಟ್ಟ ಮತ್ತು ಬೂತ್ ಮಟ್ಟದಲ್ಲಿ ಬಲಪಡಿಸುವ ಬಗ್ಗೆ ಒತ್ತಿ ಹೇಳಿದರು. ಅಲ್ಲದೆ, ದೇಶದಲ್ಲಿ ಪ್ರಜಾಪ್ರಭುತ್ವವನ್ನು ಉಳಿಸಲು ಬದಲಾಗುತ್ತಿರುವ ಕಾಲಕ್ಕೆ ತಕ್ಕಂತೆ ಪುನರ್ನಿರ್ಮಾಣದ ಜತೆಗೆ ಶಿಸ್ತು, ಸಮರ್ಪಣೆ ಮತ್ತು ಸೈದ್ಧಾಂತಿಕ ಬದ್ಧತೆಯ ಮಹತ್ವದ ಬಗ್ಗೆ ತಿಳಿಸಿದ್ದಾರೆ.
ಗುಜರಾತ್‌ನ ರಾಜ್ಯದ ಕಾಂಗ್ರೆಸ್ ಪಕ್ಷದ ನಾಯಕರನ್ನು ಇಡೀ ಪೆಟ್ಟಿಗೆ ಕೊಳೆಯುವ ಮೊದಲು ಕೆಟ್ಟ ಮಾವಿನ ಹಣ್ಣುಗಳನ್ನು ತಕ್ಷಣ ತೆಗೆದುಹಾಕುವಂತೆ ನಾಯಕರಿಗೆ ಖರ್ಗೆ ಹೇಳಿದ್ದಾರೆ.
ಪಕ್ಷದಲ್ಲಿ ರಾಜಿ ಮಾಡಿಕೊಂಡು ಮತ್ತು ಕಾರ್ಯನಿರ್ವಹಿಸದ ನಾಯಕರಿಗೆ ಕಾಂಗ್ರೆಸ್ನಿಂದ ಹೊರಹೋಗಲು ಯಾವಾಗಲು ಬಾಗಿಲು ತೆರೆದಿರುತ್ತದೆ. ಕಳೆದ ಮಾರ್ಚ್‌ನಲ್ಲಿ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಬಿಜೆಪಿಗಾಗಿ ರಹಸ್ಯವಾಗಿ ಕೆಲಸ ಮಾಡುತ್ತಿದ್ದ ನಾಯಕರನ್ನು ಪಕ್ಷವು ತೆಗೆದುಹಾಕಲಿದೆ ಎಂದು ಹೇಳಿದ್ದರು.
ಗುಜರಾತ್ ಕಾಂಗ್ರೆಸ್ ನಾಯಕತ್ವದಲ್ಲಿ ಮತ್ತು ಕಾರ್ಯಕರ್ತರಲ್ಲಿ ಎರಡು ರೀತಿಯ ಜನರಿದ್ದಾರೆ. ಜನರೊಂದಿಗೆ ಪ್ರಾಮಾಣಿಕವಾಗಿರುವವರು ಮತ್ತು ಜನರಿಗಾಗಿ ಹೋರಾಡುವವರಿದ್ದಾರೆ. ಅಲ್ಲದೆ, ಕಾಂಗ್ರೆಸ್‌ನ ಸಿದ್ಧಾಂತವನ್ನು ಪರವಾಗಿ ಇರುವವರು ಇದ್ದಾರೆ. ಜನರಿಂದ ದೂರ ಕುಳಿತು ಗೌರವಿಸದ ಇತರರು ಇದ್ದಾರೆ ಮತ್ತು ಇವರಲ್ಲಿ ಅರ್ಧದಷ್ಟು ಜನರು ಬಿಜೆಪಿಯೊಂದಿಗಿದ್ದಾರೆ ಎಂದು ಖರ್ಗೆ ಕಿಡಿಕಾರಿದ್ದಾರೆ.
2022ರ ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ, ರಾಜ್ಯದ 182 ಸ್ಥಾನಗಳಲ್ಲಿ ಕಾಂಗ್ರೆಸ್ ಕೇವಲ 17 ಸ್ಥಾನಗಳನ್ನು ಗೆದ್ದಿತು. ಅಲ್ಲದೆ, ಬಿಜೆಪಿ 156 ಸ್ಥಾನಗಳನ್ನು ಗಳಿಸಿತು, ಇದು ರಾಜ್ಯದಲ್ಲಿ ಇದುವರೆಗಿನ ಅತಿದೊಡ್ಡ ಗೆಲುವಾಗಿದೆ. ಕೈನ ಐದು ಶಾಸಕರ ರಾಜೀನಾಮೆಯ ನಂತರ ಸದನದಲ್ಲಿ ಕಾಂಗ್ರೆಸ್ ಬಲ 12 ಕ್ಕೆ ಇಳಿದಿದೆ. (ಏಜೆನ್ಸೀಸ್)