ಕೆಸರಿನಲ್ಲಿ ಮರಿಯಾನೆಗಳ ಮೋಜನ್ನು ನೋಡಿ ಫಿದಾ ಆದ ನೆಟ್ಟಿಗರು: ವಿಡಿಯೋ ವೈರಲ್..

fghfghfghfgh
Published on

ಮರಿ ಆನೆಗಳ ತುಂಟಾಟವನ್ನು ನೋಡಲು ನೀವು ಇಷ್ಟಪಡುತ್ತಿದ್ದರೆ, ಶೆಲ್ಡ್ರಿಕ್ ವೈಲ್ಡ್​​ವೈಫ್​ ಟ್ರಸ್ಟ್‌ನ ಈ ವಿಡಿಯೋವನ್ನು ನೋಡಲೇಬೇಕು. ಹಲವು ಆನೆ ಮರಿಗಳು ಕೆಸರಿನಲ್ಲಿ ಉರುಳಾಡುತ್ತಾ ಮೋಜು ಮಾಡುತ್ತಿರುವ ದೃಶ್ಯ ಈಗ ಫುಲ್​ ವೈರಲ್​ ಆಗಿದೆ. ಇದನ್ನು ನೋಡಿದ ನೆಟ್ಟಿಗರು ತಮ್ಮ ಬಾಲ್ಯ ನೆನಪಾಗುತ್ತಿದೆ ಎಂದು ಕಮೆಂಟ್​ ಮಾಡಿದ್ದಾರೆ.

ಕೆಲ ಮರಿ ಆನೆಗಳು ಕೆಸರಿನ ಹೊಂಡಕ್ಕೆ ಇಳಿದು ಉರುಳಾಡುತ್ತಾ, ಕೆಸರನ್ನು ಮೈಮೇಲೆ ಎರಚಿಕೊಳ್ಳುತ್ತಾ ತಮ್ಮದೇ ಆಟದಲ್ಲಿ ಲೀನವಾಗಿದ್ದರೇ, ಇನ್ನೊಂದೆಡೆ ಮಾವುತರು ಅವುಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಾ ಓಡಾಡುತ್ತಿರುವುದು ವಿಡಿಯೋದಲ್ಲಿ ಕಾಣಬಹುದು. ಇನ್ನು ಇದಕ್ಕೆ ''ಕೆಸರಿನ ಆನಂದ ಈ ರೀತಿ ಇರುತ್ತದೆ'' ಎಂದು ಶೆಲ್ಡ್ರಿಕ್ ವೈಲ್ಡ್​​ವೈಫ್​ ಶೀರ್ಷಿಕೆ ನೀಡಿ ವಿಡಿಯೋವನ್ನು ಟ್ವಿಟ್ಟರ್​​ನಲ್ಲಿ ಪೋಸ್ಟ್​ ಮಾಡಿದೆ.

ಜುಲೈ 25 ರಂದು ಶೇರ್​​ ಮಾಡಲಾದ ವಿಡಿಯೋವನ್ನು ಕೇವಲ ಒಂದೇ ದಿನದಲ್ಲಿ 19ಸಾವರಕ್ಕೂ ಅಧಿಕ ಜನ ನೋಡಿದ್ದಾರೆ. ಕೆಲವರು ಆನೆಗಳಿಗೆ ನಮ್ಮ ಅಪ್ಪುಗೆ ನೀಡಬೇಕು ಎಂದರೇ, ಇನ್ನೂ ಕೆಲವರು ಆನೆಗಳ ಕೆಸರಿನ ಸ್ನಾನದಲ್ಲಿ ಭಾಗಿಯಾಗಬೇಕು, ಎಂತಹ ಅದ್ಭುತ ವಿಡಿಯೋ ಎಂದು ಕಮೆಂಟ್​ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net