ವಿಮಾನದಲ್ಲೇ ಗರ್ಭಿಣಿಗೆ ಹೆರಿಗೆ, ತಾಯಿ-ಮಗು ಜೀವ ಉಳಿಸಿದ ಪೈಲಟ್ ಸಮಯ ಪ್ರಜ್ಞೆ

pilot new
Published on

ನವದೆಹಲಿ: ವಿಮಾನದಲ್ಲೇ ಮಹಿಳೆಯೊಬ್ಬರಿಗೆ ಹೆರಿಗೆ ನೋವು ಕಾಣಿಸಿಕೊಂಡಿದ್ದು, ಆ ಸಮಯದಲ್ಲಿ ವೈದ್ಯರು ಇರದಿದ್ದರೂ ಪೈಲೆಟ್ ಸಮಯ ಪ್ರಜ್ಞೆಯಿಂದ ಭಾರೀ ಅನಾಹುತ ತಪ್ಪಿದೆ. ಅಂದಹಾಗೆ ವಿಯೆಟ್ ಜೆಟ್ ವಿಮಾನದಲ್ಲಿ ಈ ಅನಿರೀಕ್ಷಿತ ಘಟನೆ ನಡೆದಿದೆ.

ಘಟನೆಯ ವಿವರ
ತೈವಾನ್‌ನಿಂದ ಬ್ಯಾಂಕಾಕ್‌ಗೆ ಹೊರಟಿದ್ದ ವಿಮಾನದಲ್ಲಿ ತುಂಬು ಗರ್ಭಿಣಿಯೊಬ್ಬರು ಪ್ರಯಾಣಿಸುತ್ತಿದ್ದರು. ತೈವಾನ್‌ನಲ್ಲಿ ವಿಮಾನ ಟೇಕ್ ಆಫ್ ಆಗಲು ಕೆಲವೇ ಕ್ಷಣಗಳಿರುವಾಗ ಮಹಿಳೆಗೆ ಹೊಟ್ಟೆನೋವು ಕಾಣಿಸಿಕೊಂಡಿದೆ. ಬಾತ್ ರೂಂನಲ್ಲಿ ಗರ್ಭಿಣಿಯೊಬ್ಬರು ಹೆರಿಗೆ ನೋವಿನಿಂದ ನರಳುತ್ತಿರುವುದನ್ನು ಸಹ ಪ್ರಯಾಣಿಕರು ಹಾಗೂ ಸಿಬ್ಬಂದಿ ಗಮನಿಸಿದ್ದಾರೆ. ಈ ವಿಷಯವನ್ನು ತಕ್ಷಣವೇ ಪೈಲಟ್ ಜಖಾರಿನ್ ಅವರ ಗಮನಕ್ಕೆ ತರಲಾಯಿತು. ಆ ಸಮಯದಲ್ಲಿ ವಿಮಾನದಲ್ಲಿ ವೈದ್ಯರು ಇರಲಿಲ್ಲ. ವಿಮಾನ ಇಳಿಯಲು ಸಾಕಷ್ಟು ಸಮಯವೂ ಇತ್ತು. ಹೀಗಾಗಿ ಅವರೇ ಮಹಿಳೆಗೆ ಹೆರಿಗೆ ಮಾಡಿಸಿದ್ದಾರೆ.

ತಮ್ಮ ಫೋನ್ ಮೂಲಕ ವೈದ್ಯರನ್ನು ಸಂಪರ್ಕಿಸಿ, ಅವರ ಸೂಚನೆಯಂತೆ ತಾಯಿ ಮತ್ತು ಮಗುವನ್ನು ರಕ್ಷಿಸಿದ್ದಾರೆ. ವಿಮಾನದಲ್ಲಿ ಜನಿಸಿದ ಮಗುವಿಗೆ ಸಿಬ್ಬಂದಿ ಸ್ಕೈ ಎಂದು ಹೆಸರಿಟ್ಟಿದ್ದಾರೆ. ವಿಮಾನ ಲ್ಯಾಂಡ್ ಆದ ನಂತರ ವೈದ್ಯಕೀಯ ಸಿಬ್ಬಂದಿ ತಾಯಿ ಮತ್ತು ಮಗುವನ್ನು ಪರೀಕ್ಷಿಸಿದರು. ಇಬ್ಬರೂ ಆರೋಗ್ಯವಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಕಷ್ಟದ ಸಮಯದಲ್ಲಿ ಕೈ ಹಿಡಿದ ಪೈಲಟ್ ಸಮಯ ಪ್ರಜ್ಞೆ ಮೆಚ್ಚಿ ಎಲ್ಲಾ ಸಹ ಪ್ರಯಾಣಿಕರು ಪ್ರಶಂಸೆ ವ್ಯಕ್ತಪಡಿಸುತ್ತಿದ್ದಾರೆ. 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net