

Prediction: ಬಲ್ಲೇರಿಯನ್‌ನ ನಿಗೂಢ ಮಹಿಳೆ, ಅತೀಂದ್ರಿಯ ಭವಿಷ್ಯಗಾರ್ತಿ ಎಂದೇ ಖ್ಯಾತಿ ಪಡೆದಿರುವ ಬಾಬಾ ವಂಗಾ ಅವರ ಭವಿಷ್ಯವಾಣಿ ಇದಾಗಲೇ ಜಗದ್ವಿಖ್ಯಾತಿ ಪಡೆದಿದೆ. ವರದಿಗಳ ಪ್ರಕಾರ, ಅವರು 1911ರಲ್ಲಿ ಉತ್ತರ ಮ್ಯಾಸಿಡೋನಿಯಾದ ಸ್ಟುಮಿಕಾದಲ್ಲಿ ಜನಿಸಿದರು. ಅವರ ಮೂಲ ಹೆಸರು ವಾಂಜೆಲಿಯಾ ಪಾಂಡೆವಾ ಡಿಮಿಟ್ರೋವಾ ಎಂದು. ತಮ್ಮ 12ನೇ ವಯಸ್ಸಿನಲ್ಲಿ ಭಾರೀ ಚಂಡಮಾರುತದ ಸಮಯದಲ್ಲಿ ನಿಗೂಢವಾಗಿ ದೃಷ್ಟಿ ಕಳೆದುಕೊಂಡರಂತೆ. 1996ರಲ್ಲಿ ಮೃತಪಟ್ಟಿರುವ ಬಾಬಾ ವಂಗಾ 5079ನೇ ಇಸವಿಯವರೆಗೂ ಏನೇನಾಗಲಿದೆ ಎನ್ನುವುದನ್ನು ಕಂಡು ಕೊಂಡಿದ್ದಾಗಿ ಹೇಳಿದ್ದು, ಅದನ್ನು ಸಮಾಜಕ್ಕೆ ತಿಳಿಸಿಯೇ ಕೊನೆಯುಸಿರೆಳೆದಿದ್ದರು ಎಂದು ಹೇಳಲಾಗಿದೆ.
ಬಾಬಾ ವಂಗಾ ಮಾಡಿದ ಕೆಲವು ಭವಿಷ್ಯವಾಣಿಗಳು ಜ್ಯೋತಿಷ್ಯ ಚಲನೆಗಳು ಮತ್ತು ಗ್ರಹಗಳ ಚಲನೆಗಳಿಗೆ ಸಂಬಂಧಿಸಿವೆ ಎಂದು ಜ್ಯೋತಿಷಿಗಳು ಮತ್ತು ಆಧ್ಯಾತ್ಮಿಕ ನಾಯಕರು ನಂಬುತ್ತಾರೆ. ಇದೀಗ ಮುಂದಿನ ವರ್ಷ ಗಳಲ್ಲಿ ನಡೆಯಬಹುದಾದ ಘಟನೆಗಳ ಬಗ್ಗೆ ತಿಳಿಸಿದ್ದು ಏನು ಎಂಬುದು ತಿಳಿಯೋಣ..
ಬಾಬಾ ವಂಗಾ ಅವರ ಪ್ರಕಾರ, 2088ರಲ್ಲಿ, ಅಪರಿಚಿತ ವೈರಸ್ ಭೂಮಿಯಾದ್ಯಂತ ಹರಡುತ್ತದೆ, ಇದರಿಂದಾಗಿ ಮಾನವರು ವೇಗವಾಗಿ ವಯಸ್ಸಾಗುತ್ತಾರೆ. ಈ ವೈರಸ್‌ನ ಪರಿಣಾಮಗಳು ತುಂಬಾ ಮಾರಕವಾಗಿದ್ದು, ಜನರು ತಮ್ಮ ಯೌವನದಲ್ಲಿ ವಯಸ್ಸಾಗಲು ಪ್ರಾರಂಭಿಸುತ್ತಾರೆ, ಇದು ಅವರ ಜೀವಿತಾವಧಿಯನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ. ಇಂದು, ಜಗತ್ತು ಹವಾಮಾನ ಬದಲಾವಣೆ, ಪ್ರಯೋಗಾಲಯದಿಂದ ರಚಿಸಲಾದ ವೈರಸ್‌ಗಳು ಮತ್ತು ಜೈವಿಕ ಯುದ್ಧದ ಬೆದರಿಕೆಯೊಂದಿಗೆ ಹೋರಾಡುತ್ತಿರುವಾಗ, ಬಾಬಾ ವಂಗಾ ಅವರ ಭವಿಷ್ಯವಾಣಿಯು ಇನ್ನಷ್ಟು ಭಯಾನಕವಾಗಿದೆ.
2001 ರಲ್ಲಿ ಅಮೆರಿಕದಲ್ಲಿ ನಡೆದ ಭಯೋತ್ಪಾದಕ ದಾಳಿಯ ಬಗ್ಗೆ ಅವರ ಭವಿಷ್ಯವಾಣಿಯೂ ಸೇರಿದೆ. 2022 ರಲ್ಲಿ ಇಂಗ್ಲೆಂಡ್‌ನಲ್ಲಿ ಭೀಕರ ಪ್ರವಾಹ ಉಂಟಾಗುತ್ತದೆ ಎಂದು ಅವರು ಭವಿಷ್ಯ ನುಡಿದಿದ್ದರು, ಅದು ನಿಜವಾಗಿದೆ ಎಂದು ವರದಿ ಉಲ್ಲೇಖಿಸುತ್ತದೆ.(ಏಜೆನ್ಸೀಸ್)
ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು / ಜ್ಯೋತಿಷಿಗಳು / ಪಂಚಾಂಗಗಳು / ನಂಬಿಕೆಗಳು / ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಉದ್ದೇಶವಾಗಿದ್ದು, ಇದಕ್ಕೆ “ವಿಜಯವಾಣಿ ಡಾಟ್ ನೆಟ್” ಜವಾಬ್ದಾರರಾಗಿರುವುದಿಲ್ಲ.