

Baba Vanga: ಕಾಶ್ಮೀರ ಪಹಲ್ಗಾಮ್ ಭಯೋತ್ಪಾದಕ ದಾಳಿಯ ಹಿನ್ನೆಲೆ ಇದೀಗ ಭಾರತ ಮತ್ತು ಪಾಕಿಸ್ತಾನ ನಡುವೆ ಯುದ್ಧದ ಭೀತಿ ಎದುರಾಗಿದೆ. 26 ಅಮಾಯಕರ ಪ್ರಾಣ ಕಸಿದುಕೊಂಡ ಪಾಕ್ ಉಗ್ರರನ್ನು ಸದೆಬಡಿಯಲು ಭಾರತೀಯ ಸೇನೆ ಪಣತೊಟ್ಟಿದ್ದು, ಭಯೋತ್ಪಾದಕ ಗುಂಪಿನ ಮೇಲೆ ಹದ್ದಿನ ಕಣ್ಣಿಟ್ಟಿದೆ. ಈಗಾಗಲೇ ಪಾಕಿಸ್ತಾನಕ್ಕೆ ನೀರು ಹಂಚಿಕೆ ಸೇರಿದಂತೆ ಹಲವು ಕಠಿಣ ನಿರ್ಣಯಗಳನ್ನು ತೆಗೆದುಕೊಂಡಿರುವ ಭಾರತ ಸರ್ಕಾರ, ಭಾರತದಿಂದ ಪಾಕಿಸ್ತಾನ ಪ್ರಜೆಗಳಿಗೆ ಗೇಟ್ಪಾಸ್ ನೀಡಿದೆ. ಇದೆಲ್ಲವೂ ಸದ್ಯ ಎರಡು ದೇಶಗಳ ನಡುವೆ ಯುದ್ಧದ ಸನ್ನಿವೇಶಕ್ಕೆ ದೂಡಿದೆ.
ಇದನ್ನೂ ಓದಿ: ಬಡವ, ಶ್ರೀಮಂತರ ನಡುವಿನ ಅಂತರ ಕಡಿಮೆಯಾಗಲಿ
ತಾನು ಜೀವಿಸಿದ್ದ ಅವಧಿಯಲ್ಲಿ ರಾಜಕೀಯ ಕ್ಷೇತ್ರದಲ್ಲಿ ಅಲ್ಲೋಲ-ಕಲ್ಲೋಲ, ಭೂಕಂಪ, ಪ್ರವಾಹ, ಖ್ಯಾತ ನಾಮಧೇಯರ ಬದುಕಿನಲ್ಲಿ ಬಿರುಗಾಳಿ ಹೀಗೆ ಹತ್ತು ಹಲವು ಮಹಾನ್ ಭವಿಷ್ಯವನ್ನು ಕೇವಲ ಬಾಯಲ್ಲಿ ಹೇಳುವುದಲ್ಲದೇ, ಅದನ್ನು ದಾಖಲೆಯಾಗಿ ಬರೆದಿಟ್ಟಿದ್ದ ಜಗತ್ಪ್ರಸಿದ್ಧ ಕಾಲಜ್ಞಾನಿ ಬಾಬಾ ವಾಂಗಾ (Baba Vanga) ಅವರ ಸ್ಪೋಟಕ ಭವಿಷ್ಯಗಳು ಇಂದು ನಿಜವಾಗಿರುವುದು ನಿಜಕ್ಕೂ ಅಚ್ಚರಿಯೇ. ಏಲಿಯನ್ಗಳು ಮನುಷ್ಯರನ್ನು ಸಂಪರ್ಕಿಸುವ ಕಾಲವು ಸನ್ನಿಹಿತ ಎಂದು ಹೇಳಿರುವ ವಾಂಗಾ, ಕೆಲವೊಂದು ವಿಷಯಗಳನ್ನು ಬಹಳ ಸೂಕ್ಷ್ಮವಾಗಿ ಇದು ಹೀಗೆಯೇ ಆಗುತ್ತದೆ ಎಂದು ನಿಖರ ಮುನ್ಸೂಚನೆ ನೀಡಿದ್ದಾರೆ. ಸದ್ಯ ಈ ಪೈಕಿ ಅವರ ಒಂದು ನುಡಿ ಇದೀಗ ಭಾರೀ ಸದ್ದು ಮಾಡುತ್ತಿದ್ದು, 2025ರಲ್ಲಿ ಸಂಭವಿಸುವ ಯುದ್ಧದ ಬಗ್ಗೆ ಒತ್ತಿ ಹೇಳಿದೆ.
ಭಾರತ ಮತ್ತು ಪಾಕಿಸ್ತಾನದ ನಡುವಿನ ಉದ್ವಿಗ್ನತೆ ಹೆಚ್ಚರುತ್ತಿರುವ ಹಿನ್ನೆಲೆ ಹಲವರಲ್ಲಿ ಈಗಾಗಲೇ ಭಾರೀ ಆತಂಕ ಮೂಡಿದೆ. ಇದೆಲ್ಲದರ ಮಧ್ಯೆ ಕಳೆದ ಕೆಲವು ದಿನಗಳಿಂದ ಬಾಬಾ ವಂಗಾ ಅವರ ಭವಿಷ್ಯವಾಣಿಗಳು ಮುನ್ನೆಲೆಗೆ ಬಂದಿದ್ದು, ವ್ಯಾಪಕ ಚರ್ಚೆಗೆ ಗ್ರಾಸವಾಗಿವೆ. ಪಾಕ್-ಭಾರತ ನಡುವೆ ಯುದ್ಧ ಸಂಭವ ಬಗ್ಗೆ ವಂಗಾ ಬಹಳ ವರ್ಷಗಳ ಹಿಂದೆಯೇ ಎಚ್ಚರಿಕೆ ನೀಡಿದ್ದರು. ಮತ್ತು ಭವಿಷ್ಯ ನುಡಿದಿದ್ದರು ಎಂಬ ಸುದ್ದಿಗಳು ತೀರ ಚರ್ಚೆಯಾಗುತ್ತಿವೆ. ಅಸಲಿಗೆ ಬಾಬಾ ವಂಗಾ ಯುದ್ಧದ ಬಗ್ಗೆ ಹೇಳಿದ್ದೇನು? ಇದು ನಿಜವೇ ಎಂಬ ಪ್ರಶ್ನೆಗೆ ಹೀಗಿದೆ ಉತ್ತರ.
ಈ ಎರಡು ರಾಷ್ಟ್ರಗಳ ನಡುವೆ ಯಾವುದೇ ಯುದ್ಧ ಸಂಭವಿಸುವುದಿಲ್ಲ ಎಂದು ಬಾಬಾ ವಂಗಾ ನುಡಿದಿರುವುದಾಗಿ ವರದಿಗಳು ಉಲ್ಲೇಖಿಸಿವೆ. ಅಸಲಿಗೆ ವಂಗಾ ನುಡಿದ ಭವಿಷ್ಯವಾಣಿಗಳು ಪ್ರಸ್ತುತ ನಡೆಯುತ್ತಿರುವ ಉಕ್ರೇನ್ ಮತ್ತು ರಷ್ಯಾ ಯುದ್ಧಕ್ಕೆ ಸಾಕ್ಷಿಯಾಗಿವೆ. ಇದರ ಜತೆಗೆ ಸಿರಿಯಾ ಅಧ್ಯಕ್ಷ ಪಲಾಯನ ಮಾಡಿದ ಸಂಗತಿಗಳು ವಂಗಾ ನುಡಿದ ಭವಿಷ್ಯವಾಣಿಗಳಿಗೆ ತೀರ ಹತ್ತಿರವಿದೆ. ಬಾಬಾ ವಂಗಾ ಅವರ ಭವಿಷ್ಯವಾಣಿಗಳು ಸದ್ಯ ಜಾಗತಿಕ ಮಟ್ಟದಲ್ಲಿ ವ್ಯಾಪಕ ಕಳವಳವನ್ನು ಸೃಷ್ಟಿಸಿದೆ.
2025ರಲ್ಲಿ ಜಗತ್ತು ತೀವ್ರ ಆರ್ಥಿಕ ಹಿಂಜರಿತ ಎದುರಿಸುವ ಸಾಧ್ಯತೆಯಿದೆ. ಅಮೆರಿಕ ಮತ್ತು ಚೀನಾ ನಡುವೆ ನಡೆಯುತ್ತಿರುವ ಸುಂಕ ಯುದ್ಧ ಸೇರಿದಂತೆ ಈ ವರ್ಷ ಭೂಕಂಪಗಳು ಮತ್ತು ನೈಸರ್ಗಿಕ ವಿಕೋಪಗಳು ಸಹ ಸಂಭವಿಸುತ್ತವೆ ಎಂದು ವಂಗಾ ಎಚ್ಚರಿಸಿದ್ದಾರೆ. ಮ್ಯಾನ್ಮಾರ್ ಮತ್ತು ಥೈಲ್ಯಾಂಡ್ನಲ್ಲಿನ ಬೃಹತ್ ಭೂಕಂಪಗಳು ಈ ಭವಿಷ್ಯವಾಣಿಗಳಿಗೆ ಜ್ವಲಂತ ಸಾಕ್ಷಿ ಎಂದು ಹಲವರು ಅಭಿಪ್ರಾಯಿಸಿದ್ದಾರೆ,(ಏಜೆನ್ಸೀಸ್).